ಹುಬ್ಬಳ್ಳಿ; ಅಲ್ಲಿ ಒಂದು ಶ್ವಾನ ಮುದ್ದು ಮುದ್ದಾಗಿ ನಡೆದರೆ, ಇನ್ನೊಂದು ಶ್ವಾನದ ನಡೆ ಭಯ ಹುಟ್ಟಿಸುವಂ ತಿತ್ತು… ಮತ್ತೊಂದು ಚಿಕ್ಕದಾಗಿದ್ದರೂ ಮುದ್ದು ಮುದ್ದಾಗಿ ತಂಟೆ ಮಾಡುತ್ತ, ತನ್ನ ಒಡತಿಯ ಪ್ರೀತಿ ಮಾತುಗಳನ್ನು ಕೇಳುತ್ತಿತ್ತು.
ಜಿಲ್ಲಾ ಪಂಚಾಯತ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಪ್ರಾಣಿ ಕಲ್ಯಾಣ ಅರಿವು ಮೂಡಿಸುವ ಶಿಬಿರ ಹಾಗೂ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಿಸ್ತಿನ ಶ್ವಾನಗಳು ಒಡೆಯ ಮೈ ಸವರಿದರೆ ಪುಳಕಗೊಳ್ಳುತ್ತ, ಅಲ್ಲಿ ನೆರೆದಿರುವ ಜನರ ನಡುವೆ ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾದವು… ಈ ದೃಶ್ಯಗಳು ಕಂಡುಬಂದಿದ್ದು ಹುಬ್ಬಳ್ಳಿಯ ಇಂದಿರಾ ಗಾಂಧಿ ಗಾಜಿನ ಮನೆಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ.
ಮೊದಲು ಶ್ವಾನವೊಂದನ್ನ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಎತ್ತಿಕೊಂಡು ಮುದ್ದಾಡಿ ನಾನು ಸಹ ಬೀದಿ ನಾಯಿಯನ್ನೇ ದತ್ತು ತೆಗೆದುಕೊಂಡೇದ್ದೇನೆ ಎಂದರು.
ಮೈದಡವುತ್ತ, ಪ್ರೀತಿಯಿಂದ ಹೆಸರು ಕೂಗುವ ತನ್ನ ಒಡೆಯನಿಗೆ ಶ್ವಾನಗಳು ಮೂಕ ಭಾಷೆಯಲ್ಲಿ ಬಾಲವನ್ನಾಡಿ ಸುತ್ತ, ಕೆನ್ನೆಗೆ ಮುತ್ತನ್ನಿಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ವಿವಿಧ ತಳಿಯ ಸುಮಾರು ನೂರಾರು ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿ ದ್ದವು. ಆಫ್ರಿಕನ್ ಬೊರ್ ಬೊಲ್, ಮಿನಿಯೇಚರ್ ಸ್ನೂಜರ್, ಜಪಾನೀಸ್ ಅಖಿತ, ಡಾಗ್-ಡಿ-ಬೊರ್, ಜರ್ಮನ್ ಶೆಫರ್ಡ್, ಡಾಬರ್ ಮನ್, ಲ್ಯಾಬ್ರ ಡಾರ್, ಗೋಲ್ಡನ್ ರಿಟ್ರೀವರ್, ಬಾಕ್ಸರ್, ಗ್ರೇಡ್ ಡೇನ್, ಕಾಕರ್ ಸ್ಪಾನಿ ಯಲ್ ತಳಿಯ ನಾಯಿಗಳು ಪ್ರದರ್ಶನ ದಲ್ಲಿ ಭಾಗವಹಿಸಿದ್ದವು.
‘ಪ್ರದರ್ಶನಕ್ಕೆ ವಿವಿಧ ತಳಿಗಳ ಶ್ವಾನ ಗಳು ಬಂದಿವೆ. ವಿವಿಧ ತಳಿಗಳ ಶ್ವಾನಗಳನ್ನು ಸಾಕುವುದರ ಜತೆಗೆ ಸಾರ್ವಜನಿಕರು ಬೀದಿ ನಾಯಿಗಳ ನ್ನು ದತ್ತು ತೆಗೆದುಕೊಂಡು ಅವುಗಳ ಪೋಷಣೆ ಮಾಡಲು ಮುಂದಾಗಬೇಕು ಎಂಬುದು ಪ್ರಾಣಿ ಪ್ರಿಯರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ರವಿ ಸಾಲಿಗೌಡರ ಶ್ವಾನ ಪ್ರದರ್ಶನ ಬಗ್ಗೆ ಮಾಹಿತಿ ನೀಡಿದರು.
Tags #dharwad #india #karnataka #trending #trend #animal #god
[ajax_load_more]Check Also
ರೈತರ ಬೆಳೆಗೆ ಉತ್ತಮ ದರಕ್ಕಾಗಿ ಭೂಮಿ ಆಪ್ ರಚನೆ; ರಘುನಂದನ್
Spread the loveಹುಬ್ಬಳ್ಳಿ ಗ್ರಾಮೀಣ ಭಾಗದ ರೈತರಿಗೆ ಗುಣಮಟ್ಟದ ಬೆಳೆ ಬೆಳೆಯಲು ಹಾಗೂ ಬೆಳೆದ ಬೆಳೆಗಳಿಗೆ ಉತ್ತಮ ದರ ನೀಡುವ …