ಹುಬ್ಬಳ್ಳಿ: ರಾಜ್ಯ ಸರ್ಕಾರದ ಬೇಜವಾಬ್ದಾರಿಂದ ಹಳೇ ಹುಬ್ಬಳ್ಳಿ ಗಲಭೆಕೋರರಿಗೆ ಜಾಮೀನು ಮಂಜೂರಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗಲಭೆ ಕೋರರ ಮೇಲೆ ಕಾಂಗ್ರೆಸ್ ನಾಯಕರಿಗೆ ಮೊದಲಿಂದಲೂ ಸಿಂಪತಿ ಇದೆ. ಅವರ ಸರ್ಕಾರ ಬಂದ ಮೇಲೆ ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಾಡದೇ ಜಾಮೀನು ಮಂಜೂರಾಗುವಂತೆ ನೋಡಿಕೊಂಡಿದ್ದಾರೆ. ಈ ಹಿಂದೆಯೂ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಗೊಳಿಸುವಂತೆ ಮತ್ತು ಪ್ರಕರಣದಿಂದ ಅವರನ್ನು ಖುಲಾಸೆಗೊಳಿಸುವಂತೆ ಕೆಲ ನಾಯಕರು ಪತ್ರ ಮುಖೇಣ ಮನವಿ ಮಾಡುಕೊಂಡಿದ್ದರು ಎಂದರು. ದೇಶ ದ್ರೋಹ ಸೇರಿದಂತೆ ಹಲವು ಆರೋಪಗಳು ಬಂಧಿತರ ಮೇಲೆ ಇದ್ದವು. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿಸಿದ ಕಾಂಗ್ರೆಸ್ ಸರ್ಕಾರ, ಮುಂಬರುವ ದಿನಗಳಲ್ಲಿ ಸರಿಯಾದ ಪರಿಣಾಮ ಎದುರಿಸಲಿದೆ ಎಂದು ಭವಿಷ್ಯ ನುಡಿದರು.
ಇನ್ನು ಈ ಗಲಿಭೆಯಿಂದ ಪ್ರಲ್ಹಾದ್ ಜೋಶಿ ಇದ್ದಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು ಗಲಿಭಕೋರರಿಗೆ ಕಲ್ಲು ಹೊಡಿ ಅಂತಾ ನಾ ಹೇಳಿದನಾ ಎಂದ ಅವರು ಸರ್ಕಾರ ಒಳ್ಳೆಯ ವಕೀಲರ ಮೂಲಕ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಮಾಡಬೇಕು ಎಂದರು.
Tags #dharwad #india #karnataka #trending #trend #animal #god
Check Also
ಅಹಿಂದ ಮಾಡಿದಾಗ ಸಿದ್ಧರಾಮಯ್ಯಾ ಜೊತೆಗೆ ನಿಂತವನು ನಾನೋಬ್ಬನೇ- ಬೊಮ್ಮಾಯಿ
Spread the loveಹುಬ್ಬಳ್ಳಿ:ಸಿದ್ದರಾಮಯ್ಯ ಅವರು ಅಹಿಂದ ಮಾಡಿದಾಗ ಅವರ ಜೊತೆಗೆ ಬಹಿರಂಗವಾಗಿ ಗಟ್ಟಿಯಾಗಿ ನಿಂತ ವೀರಶೈವ ಸಮುದಾಯದ ನಾಯಕ ನಾನೊಬ್ಬನೇ. …