ಹುಬ್ಬಳ್ಳಿ,: ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಬೇಸರದ ಸಂಗತಿ ಇದಾಗಿದ್ದುಹುಬ್ಬಳ್ಳಿ ಮತ್ತು ಮುಂಬೈ ನಡುವಿನ ವಿಮಾನ ಸೇವೆಯನ್ನು ಒಂದು ತಿಂಗಳ ಕಾಲ ರದ್ದು ಗೊಳಿಸಲಾಗಿದೆ. ಇಂಡಿಗೋ ಎರಡು ನಗರಗಳ ನಡುವೆ ವಿಮಾನ ಸೇವೆಯನ್ನು ನೀಡುತ್ತಿದ್ದು ಈಗ
ಮುಂಬೈ ವಿಮಾನ ನಿಲ್ದಾಣದ ತಾಂತ್ರಿಕ ಸಮಸ್ಯೆಯ ಕಾರಣ ಕೇಂದ್ರ ವಿಮಾನಯಾನ ನಿರ್ದೇಶನಾಲಯದ ನಿರ್ದೇಶನಂತೆ ಹುಬ್ಬಳ್ಳಿ-ಮುಂಬೈ ವಿಮಾನ ಸೇವೆ ರದ್ದುಗೊಳಿಸಲಾಗಿದೆ ಎಂದು ಕೆಲವೇ ದಿನಗಳಲ್ಲಿ ಸೇವೆ ಮತ್ತೆ ಆರಂಭವಾಗಲಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ ಸ್ಲಾಟ್‌ಗಳಿಗಿಂತ ಹೆಚ್ಚುವರಿ ವಿಮಾನಗಳು ಸಂಚಾರ ನಡೆಸುತ್ತಿವೆ. ವಿಮಾನಗಳ ನಡುವಿನ ಅಂತರ ತುಂಬಾ ಕಡಿಮೆ ಇದೆ. ಆದ್ದರಿಂದ ಅನಿವಾರ್ಯವಾಗಿ ವಿಮಾನ ಸೇವೆ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಈಗಿನ ಮಾಹಿತಿಯಂತೆ ಮಾರ್ಚ್ 30ರ ತನಕ ಹುಬ್ಬಳ್ಳಿ-ಮುಂಬೈ ನಡುವಿನ ವಿಮಾನ ಸೇವೆ ರದ್ದುಗೊಳಿಸಲಾಗಿದೆ. ಈ ಕುರಿತು ವೆಬ್ ಸೈಟ್ ಮೂಲಕವೂ ಮಾಹಿತಿ ನೀಡಲಾಗಿದೆ.
ಬೆಂಗಳೂರಿನಿಂದ ಮುಂಬೈಗೆ ಹಾರಿದ ಭಾರತದ ಮೊದಲ ಏರ್ ಏಂಡಿಯಾ ಏರ್‌ಬಸ್ಬೆಂಗಳೂರಿನಿಂದ ಮುಂಬೈಗೆ ಹಾರಿದ ಭಾರತದ ಮೊದಲ ಏರ್ ಏಂಡಿಯಾ ಏರ್‌ಬಸ್
ಹುಬ್ಬಳ್ಳಿ ವಿಮಾನ ನಿಲ್ದಾಣದ ಇಂಡಿಗೋ ಸ್ಟೇಷನ್ ಮ್ಯಾನೇಜರ್ ಸಚಿನ್ ಮಾಹಿತಿ ನೀಡಿದ್ದು, “ಆದಷ್ಟು ಬೇಗ ವಿಮಾನಯಾನ ಸಂಸ್ಥೆ ಹುಬ್ಬಳ್ಳಿ-ಮುಂಬೈ ನಡುವಿನ ವಿಮಾನ ಸೇವೆಯನ್ನು ಆರಂಭಿಸಲಿದೆ” ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪ್ರಯಾಣಿಕರು ವಿಮಾನ ಸಂಚಾರ ರದ್ದು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಮಾನದ ವೇಳಾಪಟ್ಟಿ ಬದಲಾವಣೆ ಮಾಡಿ, ರದ್ದು ಮಾಡುವುದು ಸರಿಯಲ್ಲ ಎಂದು ಸಹ ಒತ್ತಾಯಿಸಿದ್ದಾರೆ.
ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಿಂದ 6ಇ 936 ವಿಮಾನ 12 ಗಂಟೆಗೆ ಹೊರಡುತ್ತಿತ್ತು ಮತ್ತು ಹುಬ್ಬಳ್ಳಿಗೆ 1.15ಕ್ಕೆ ಆಗಮಿಸುತ್ತಿತ್ತು. ಹುಬ್ಬಳ್ಳಿ-ಮುಂಬೈ ವಿಮಾನ 63 937 ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 1.45ಕ್ಕೆ ಹೊರಟು, ಮುಂಬೈಗೆ 2.55ಕ್ಕೆ ತಲುಪುತ್ತಿತ್ತು. ಇಂಡಿಗೋ ಈ ಮಾರ್ಗದಲ್ಲಿ 186 ಸೀಟುಗಳ ಏರ್ ಬಸ್ ಎ320 ವಿಮಾನದ ಹಾರಾಟ ನಡೆಸುತ್ತಿತ್ತು.
2023ರ ಆಗಸ್ಟ್‌ನಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆ ಅಕ್ಟೋಬರ್‌ನಿಂದ 29ರಿಂದ ಹುಬ್ಬಳ್ಳಿ-ಮುಂಬೈ ನಡುವೆ ಏರ್‌ಬಸ್ ಎ320 ವಿಮಾನ ಸಂಚಾರ ನಡೆಸಲಿದೆ ಎಂದು ಘೋಷಣೆ ಮಾಡಿತ್ತು. ಅದಕ್ಕೂ ಮೊದಲು ಉಭಯ ನಗರಗಳ ನಡುವೆ 78 ಸೀಟುಗಳ ಎಟಿಆರ್ 72-600 ವಿಮಾನಗಳು ಸಂಚಾರ ನಡೆಸುತ್ತಿದ್ದವು.
ವಿಮಾನಯಾನ ಸಂಸ್ಥೆ ಮಾಹಿತಿ ಪ್ರಕಾರ ಹುಬ್ಬಳ್ಳಿ-ಮುಂಬೈ ಬಹು ಬೇಡಿಕೆಯ ಮಾರ್ಗ. ಕರ್ನಾಟಕದ ವಾಣಿಜ್ಯ ನಗರ, ಉತ್ತರ ಕರ್ನಾಟಕ ಹೆಬ್ಬಾಗಿಲು ಹುಬ್ಬಳ್ಳಿಯನ್ನು ದೇಶದ ವಾಣಿಜ್ಯ ನಗರ ಮುಂಬೈ ಜೊತೆ ಬೆಸೆಯುವ ಮಾರ್ಗ ಇದಾಗಿದ್ದು, ಈ ವಿಮಾನ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಮಾರ್ಗದಲ್ಲಿ ಪ್ರಯಾಣಿಕರ ಸಂಚಾರ ಮಾತ್ರವಲ್ಲ ಸರಕು ಸಾಗಣೆಗೂ ಬೇಡಿಕೆ ಹೆಚ್ಚಿದೆ. ಮಾರ್ಗಕ್ಕಿರುವ ಬೇಡಿಕೆ ಪರಿಗಣಿಸಿ ಹುಬ್ಬಳ್ಳಿ-ಮುಂಬೈ ನಡುವೆ ಏರ್‌ಬಸ್ ಎ320 ವಿಮಾನ ಸಂಚಾರ ನಡೆಸಲು ಇಂಡಿಗೋ ತೀರ್ಮಾನಿಸಿತ್ತು.
ಏರ್‌ಬಸ್ ಓಡಿಸುವುದರಿಂದ ಹೆಚ್ಚಿನ ಜನರು ಉಭಯ ನಗರಗಳ ನಡುವೆ ಸಂಚಾರ ನಡೆಸಲು ಅನುಕೂಲವಾಗಿತ್ತು. ಆದರೆ ಈಗ ಮಾರ್ಚ್ 30ರ ತನಕ ಉಭಯ ನಗರಗಳ ನಡುವಿನ ವಿಮಾನ ಸೇವೆ ರದ್ದಾಗಿದೆ. ಕಾರಣ ಪ್ರಯಾಣಿಕರು ಸಹ ಸಹಕರಿಸಲು ಇಂಡಿಗೋ ಮನವಿ ಮಾಡಿದೆ.
Check Also
ಪಕ್ಷೇತರ ಅಭ್ಯರ್ಥಿ ಜಿ ಜಿ ದ್ಯಾವನಗೌಡ್ರ ಕಣದಲ್ಲಿ ಮುಂದುವರೆಯಲು ನಿರ್ಧಾರ ?
Spread the loveಹುಬ್ಬಳ್ಳಿ: .ಶಿಗ್ಗಾವ ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆದಿದ್ದು ಯಾವುದೇ …