ಹುಬ್ಬಳ್ಳಿ: ಪತ್ರಿಕಾ ಮಾರಾಟಗಾರರ ಹಿತದೃಷ್ಟಿಯಿಂದ ₹ 5 ಕೋಟಿಯ ಕ್ಷೇಮ ನಿಧಿ ಸ್ಥಾಪಿಸಲು ಕೋರಿ ಹುಬ್ಬಳ್ಳಿ ಪತ್ರಿಕಾ ಮಾರಾಟಗಾರರ ಸಂಘದ ಸದಸ್ಯರು ಬುಧವಾರ ತಹಶೀಲ್ದಾರ್‌ರಿಗೆ ಮನವಿಪತ್ರ ಸಲ್ಲಿಸಿದರು.
‘ಈ ಸಲ ಮಂಡನೆಯಾಗುವ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾ ಮಾರಾಟಗಾರರು ಮತ್ತು ವಿತರಕರ ಬೇಡಿಕೆಗೆ ಸ್ಪಂದಿಸಬೇಕು. ಕ್ಷೇಮ ನಿಧಿ ಸ್ಥಾಪನೆ, ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕಲ್ಪಿಸಬೇಕು ಮತ್ತು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಬೇಕು’ ಎಂದು ಸಂಘದ ಸದಸ್ಯರು ಕೋರಿದರು.
ಸಂಘದ ಅಧ್ಯಕ್ಷ ಮನೋಹರ ಪರ್ವತಿ, ಉಪಾಧ್ಯಕ್ಷ ಹನುಮಂತ ಮೆಣಸಿನಕಾಯಿ, ಕಾರ್ಯದರ್ಶಿ ರಮೇಶ್ ಜಿತುರಿ, ಸಹಕಾರ್ಯದರ್ಶಿ ಅರುಣ್ ತೋಡಕರ, ಸಿ.ಎಸ್.ಹಿರೇಮಠ, ಮುಷ್ತಾಕ್ ಅಹಮದ್ ಬಿಫಾರಿ, ವಿನಯ ಡಗೆ, ವಿನೋದ ರತನ್, ಆನಂದ ರಶ್ಮಿ, ಮಲ್ಲೇಶಪ್ಪ ಅಣಿ, ಮಂಜು ಅಂಬಿಗೇರ, ಎಸ್ ಬಿ ಅಂಬಿಗೇರ, ಸಂತೋಷ್ ಕಲ್ಲಣ್ಣವರ್, ಶಿವಾಜಿ ತಡಸ, ಶ್ರೀಕಾಂತ್ ಹಳ್ಳಿಕೇರಿ, ರಫಿಕ್ ನರಗುಂದಕರ, ಐ.ಎಸ್.ಹಿರೇಮಠ್, ಶಿವಾನಂದ್ ಹೆಂಡಸಗಿರಿ, ಮಂಜು ಕುಬಸದ ಮತ್ತು ಇತರರ ಉಪಸ್ಥಿತರಿದ್ದರು.
