ಹುಬ್ಬಳ್ಳಿ:ಇಂದಿನಮಕ್ಕಳು-ಮೊಮ್ಮಕ್ಕಳ ಪ್ರೀತಿಯಿಂದ ವಂಚಿತರಾಗುವ ಬಹುತೇಕ ಅಜ್ಜ-ಅಜ್ಜಿಯರಿಗೆ ಒಂದು ಸಾಂತ್ವನದ ನುಡಿ, ಶಾಲಾ ಮಕ್ಕಳು ಇದರ ಜೊತೆಗೆ ಮಕ್ಕಳು ಸಹ ಅಜ್ಜ ಅಜ್ಜಿಯರು ಪ್ರೀತಿ ವಾತ್ಸಲ್ಯ ಹಾಗೂ ಮಮಕಾರದಿಂದ ದೂರ ಆಗಬಾರದು ಎಂಬ ನಿಟ್ಟಿನಲ್ಲಿ ಅಜ್ಜಿ ಅಜ್ಜಿಯರು ಎಲ್ಲರೊಂದಿಗೆ ಆಟವಾಡುವ ಸಂತಸ, ಕುಣಿದು ಕುಪ್ಪಳಿಸಿದ ಸಂತಸ ಕ್ಷಣಕ್ಕೆ ಸಾಕ್ಷಿಯಾಯಿತು ನಗರದ ಕುಸುಗಲ್ ರಸ್ತೆಯಲ್ಲಿನ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆ.
ಶಾಲಾ ಆಡಳಿತ ಮಂಡಳಿ ಅಜ್ಜ ಅಜ್ಜಿಯರ ಹರ್ಷೋತ್ಸವ
ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಅಜ್ಜ-ಅಜ್ಜಿಯರಲ್ಲಿ ಸಂಭ್ರಮ ಮನೆ ಮಾಡಿತ್ತು.
ಸಂಸ್ಕಾರ ಆಂಗ್ಲ ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಮಹೇಂದ್ರ ಸಿಂಘಿ ಮಾತನಾಡಿ,
ಹಿರಿಯ ಜೀವಗಳಿಗೆ ಗೌರವ, ಪ್ರೀತಿಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತುಹಿರಿಯರಿಗೂ ತಮ್ಮ ವೃದ್ಧಾಪ್ಯದಲ್ಲಿ ಸಂತಸದ ಕ್ಷಣಗಳನ್ನು ಮೆಲುಕು ಹಾಕುವ ವೇದಿಕೆ ಅರ್ಥ ಪೂರ್ಣ ಆಗಿತ್ತು ಎಂದರು.
ಹಿರಿಯ ಜೀವಗಳಿಗೆ ಗೌರವ, ಪ್ರೀತಿಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಈಕಾರ್ಯಕ್ರಮ
ಹಿರಿಯರಿಗೂ ತಮ್ಮ ವೃದ್ಧಾಪ್ಯದಲ್ಲಿ ಸಂತಸದ ಕ್ಷಣಗಳನ್ನು ಮೆಲುಕು ಹಾಕುವ ಸುಂದರ ಘಳಿಗಿಗೆ ಒಂದು ಕ್ಷಣ ಮಂತ್ರ ಮುಗ್ಧರನ್ನಾಗಿಸಿತು.
ಹಿರಿಯ ಜೀವ ಜಿ.ಎಂ.ಚಿಕ್ಕಮಠ
1945 ರಿಂದ 1983ರ ವರೆಗೆ ಭಾರತೀಯ ನೌಕಾ ಸೇನೆಯಲ್ಲಿ ಸುದೀರ್ಘ ಸೇವೆಸಲ್ಲಿಸಿ ನಿವೃತ್ತಿಯಾದ ಲೆಪ್ಟಿನೆಂಟ್ ವಸಂತ ಲಿಂಗೊ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಇಂದು ತಂದೆ-ತಾಯಂದಿರಿಗೆ ಮುಪ್ಪಿನ ಕಾಲದಲ್ಲಿ ಜೊತೆಗಿದ್ದು, ನೋಡಿಕೊಳ್ಳುವ ಪ್ರವೃತ್ತಿ ಹೋಗಿದೆ. ವೃದ್ಧಾಶ್ರಮ ಸೇರಿಸುವ ಹಾಗೂ ಅಜ್ಜ-ಅಜ್ಜಿಯರನ್ನು ನಿರ್ಲಕ್ಷಿಸಿ ಮೊಮ್ಮಕ್ಕ ಳಲ್ಲಿ ಪ್ರೀತಿಯೇ ಕಾಣದಂತಹ ಸ್ಥಿತಿ. ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವ ಈ ದಿನಗಳಲ್ಲಿ ಮಕ್ಕಳಲ್ಲಿ ಅಜ್ಜ- ಅಜ್ಜಿಯರ ಮೇಲೆ ಮಮಕಾರ, ಪ್ರೀತಿ-ವಾತ್ಸಲ್ಯ ಹುಟ್ಟಿಸು ವಂತಹ ಈ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು
ಕಾರ್ಯಕ್ರಮಕ್ಕೆ ಮೊದಲು ಬಂದ ಅಜ್ಜ-ಅಜ್ಜಿಯ ರನ್ನು ಫಲ-ತಾಂಬೂಲ ನೀಡಿ ಆಡಳಿತ ಮಂಡಳಿಯ ಮುಖ್ಯಸ್ಥ ಮಹೇಂದ್ರ ಸಿಂಘ ಮತ್ತು ಸಿಬ್ಬಂದಿ ವರ್ಗ ಗೌರವಿಸಿದರು. ಮಕ್ಕಳಿಂದ ಅಜ್ಜ-ಅಜ್ಜಿಯರ ಮೇಲೆ ಪ್ರೀತಿ ಬೆಳೆಯುವಂತಹ ಮಾಡಿದರು.
ಅಜ್ಜ-ಅಜ್ಜಿಯರಿಗೆ ಪ್ರತ್ಯೇಕವಾಗಿ ಸಂಗೀತ ಕುರ್ಚಿ, ಕಾಳು ಹೆಕ್ಕುವ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಿದರು. ಮೊಮ್ಮಕ್ಕಳೊಂದಿಗೆ ಊಟ ಸವಿದರು. ಹೀಗೆ ಕಾರ್ಯಕ್ರಮದ ಸವಿನೆನಪುಗಳನ್ನು ಹೊತ್ತು ಹೊರಟ ಅಜ್ಜ-ಅಜ್ಜಿಯರಲ್ಲಿ ನೆನಪಿನ ದೋಣಿಯಲ್ಲಿ ಮಿಂದೆದ್ದರು. ಹಲವು ವೃದ್ದರು ಆನಂದ ಭಾಷ್ಪ ಸುರಿಸಿದರು.
ಮೊಮ್ಮಕ್ಕಳಲ್ಲಿ ತಮ್ಮ ತಾತ-ಅಜ್ಜಿಯರಲ್ಲಿ ಧನ್ಯತಾ ಭಾವ ಮೂಡಿಸುವ, ಸಂಸ್ಕೃತಿ, ಪರಂಪರೆ ಬಗ್ಗೆ ತಿಳಿಸಿಕೊಡುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹಿರಿಯ ಜೀವ ಜಿ.ಎಂ ಚಿಕ್ಕಮಠ, ವಸಂತ ಕುಲಕರ್ಣಿ ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ
ಇಂದು ಮಗ- ಸೊಸೆಯಿಂದ ತಂದೆ ತಾಯಂದಿರನ್ನು ದೂರವಿಡುವ ಪ್ರವೃತ್ತಿಯಿಂದ ಮೊಮ್ಮಕ್ಕಳಲ್ಲಿ ಮರೆಯಾಗುತ್ತಿರುವ ಸಂಸ್ಕೃತಿ, ಪ್ರೀತಿ ವಾತ್ಸಲ್ಯ ತುಂಬುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಶಾಲಾ ಆಡಳಿತ ಮಂಡಳಿ ವರ್ಗ, ಸಿಬ್ಬಂದಿ ಭಾಗವಹಿಸಿದ್ದರು.
Tags #dharwad #india #karnataka #trending #trend #animal #god
[ajax_load_more]Check Also
*ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಹೈ ಅಲರ್ಟ್: ಈದ್ಗಾ ಮೈದಾನದಲ್ಲಿ ಪೊಲೀಸ್ ಪರೇಡ್*
Spread the loveಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಧಾರವಾಡ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ …