ಹಳಿಯಾಳದ ವಿಡಿಐಟಿ ಏಂಜೀನಿಯರಿಂಗ್ ಕಾಲೇಜಿನಲ್ಲಿ ಟೇಬಲ್ ಟೆನಿಸ್ ಕೋರ್ಟ ಉದ್ಘಾಟನೆಯನ್ನು ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ನೇರವೇರಿಸಿದರು
ಹಳಿಹಾಳ: ಪ್ರಸ್ತುತ್ ವಿದ್ಯಾರ್ಥಿಗಳು ತಮ್ಮ ನಿಯಮಿತ್ ಅಧ್ಯಯನ ಜೊತೆಗೆ ದೈಹಿಕ್ ಸಾಮರ್ಥ್ಯ ಕಾಪಾಡಿಕೊಳ್ಳಲು ಕೂಡಾ ಪ್ರಥಮ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ಪ್ರೋತ್ಸಾಹಿಸಲು ವಿನೂತನ ಪದ್ದತಿಯ ಟೇಬಲ್ ಟೇನಿಸ್ ಕೋರ್ಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಾಚಾರ್ಯ ಡಾ. ವಿ.ಎ ಕುಲಕರ್ಣಿ ಹೇಳಿದರು. ಇಲ್ಲಿನ ಕೆ ಎಲ್ ಎಸ್ ವಿ ಡಿ ಐ ಟಿ ಏಂಜೀನಿಯರಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನವಿಕೃತ ಟೇಬಲ್ ಟೆನ್ನಿಸ್ ಸೌಲಭ್ಯ ಉದ್ಘಾಟಿಸಿ ಅವರು ಮಾತನಾಡಿ, ಸೌಲಭ್ಯದ ಸದುಪಯೋಗ ಮಾಡಿಕೊಂಡು ಆರೋಗ್ಯಯುತ್ ಬದುಕು ಕಟ್ಟಿಕೊಳ್ಳಿ ಎಂದರು.ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಯ ಜೊತೆಗೆ ದೈಹಿಕ ಸಾಮರ್ಥ್ಯಕ್ಕೆ ಒತ್ತು ನೀಡುವ ದೃಷ್ಟಿಯಲ್ಲಿ ಹಲವು ಉಪಕ್ರಮ ಗಳನ್ನು ಮಹಾವಿದ್ಯಾಲಯ ಹಮ್ಮಿಕೊಂಡಿದೆ. ಮಹಾವಿದ್ಯಾಲಯದ ಜಿಮ್ನಲ್ಲಿ ರೂ 4.5 ಲಕ್ಷಕ್ಕೂ ಅಧಿಕ ಉಪಕರಣಗಳಿದ್ದು, ನೂತನವಾಗಿ ಟೇಬಲ್ ಟೆನಿಸ್, ಜಾಗಿಂಗ್ ಯಂತ್ರವನ್ನು ಅಳವಡಿಸಲಾಗಿದೆ. ಈಗಾಗಲೇ ವಿದ್ಯಾರ್ಥಿನಿಯರ ದೈಹಿಕ ಸದೃಢತೆಯನ್ನು ಹೆಚ್ಚಿಸಲು ವಿದ್ಯಾರ್ಥಿನಿಯರ ವಸತಿಗೃಹದಲ್ಲಿ ಎರಡು ಫಿಟ್ನೆಸ್ ಸೆಂಟರ್ ಗಳನ್ನು ಆರಂಭಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ದೈಹಿಕ ನಿರ್ದೇಶಕ ಗದಿಗೆಪ್ಪ ಎಳ್ಳೂರ್, ಡಿನ್ ಪ್ರೊ ಮಂಜುನಾಥ್, ಪ್ರೊ ಪೂರ್ಣಿಮಾ ರಾಯ್ಕರ್, ಡಾ ಗುರುರಾಜ್ ಹತ್ತಿ, ಸುನಿಲ್ ಯರಗಟ್ಟಿ, ಆಶಿಕ್ ಬಳ್ಳಾರಿ ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.