Breaking News

ಫೆಬ್ರುವರಿ 14 ರಂದು ಸಂಸ್ಕಾರ ಶಾಲೆಯಲ್ಲಿ ಅಜ್ಜ-ಅಜ್ಜಿಯರ ಹರ್ಷೋತ್ಸವ

Spread the love

ಹುಬ್ಬಳ್ಳಿ: ಫೆ.14 ರಂದು ವ್ಯಾಲೆಂಟೈನ್‍ನ ಪ್ರೀತಿಯ ಸಂಕೇತವಾಗಿ ವಿಶ್ವದಾದ್ಯಂತ ಪ್ರೇಮಿಗಳ ದಿನದ ಸಂಭ್ರಮ
ಮನೆಮಾಡಿದ್ದರೆ, ನಗರದ
ಸಂಸ್ಕಾರ ಶಾಲೆಯಲ್ಲಿ ಅಜ್ಜ-ಅಜ್ಜಿಯರ ದಿನಾಚರಣೆ ಆಚರಿಸಲು ಉದ್ದೇಶ ಹೊಂದಿದ್ದು ಇದನ್ನ ಅಜ್ಜ-ಅಜ್ಜಿಯರ ಹರ್ಷೋತ್ಸವ ದಿನವಾನ್ನಾಗಿ ಆಚರಿಸಲಾಗುವುದು ಶಾಲಾ ಮುಖ್ಯಸ್ಥ ಮಹೇಂದ್ರ ಸೀಂಘಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು
ಮಕ್ಕಳಲ್ಲಿ ಮನೆಯ ಹಿರಿಯ ಜೀವಗಳಿಗೆ ಗೌರವ, ಪ್ರೀತಿಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಮತ್ತು ಹಿರಿಯರಿಗೂ ತಮ್ಮ ವೃದ್ಧಾಪ್ಯದಲ್ಲಿ ಸಂತಸದ ಕ್ಷಣಗಳನ್ನು ಮೆಲುಕು ಹಾಕುವ ಸುಂದರ ಘಳಿಗೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ.
ಕಾರ್ಯಕ್ರಮವನ್ನು ನಗರದ ಹಿರಿಯರಾದ ಮುತ್ಸದ್ಧಿ ಚೇತನ, ಮೂರುಸಾವಿರ ಮಠ ವಿದ್ಯವರ್ಧಕ ಸಂಘದ ಮಾಜಿ ಅಧ್ಯಕ್ಷರಾದ 97 ವರ್ಷದ
ಉ.ಒ. ಚಿಕ್ಕಮಠ ಉದ್ಘಾಟಿಸಲಿದ್ದಾರೆ. 1945 ರಿಂದ 1983ರ ವರೆಗೆ ಭಾರತೀಯ ನೌಕಾ ಸೇನೆಯಲ್ಲಿ ಸುದೀರ್ಘ ಸೇವೆಸಲ್ಲಿಸಿ ನಿವೃತ್ತಿಯಾದ ಹಾನರರಿ ಲೆಪ್ಟಿನೆಂಟ್ ವಸಂತ ಲಿಂಗೊ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಜ್ಜ ಅಜ್ಜಿಯರಿಗಾಗಿ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ತಮ್ಮ ವಯಸ್ಸಿನ ಅಂತರವನ್ನು ಮೀರಿ ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂತೋಷ ಸಂಭ್ರಮಕ್ಕೆ ಅಜ್ಜ-ಅಜ್ಕಿಯರು ಸಾಕ್ಷಿಯಾಗಲಿದ್ದಾರೆ. 400 ಕ್ಕೂ ಹೆಚ್ಚು ಅಜ್ಜ ಅಜ್ಜಿಯರು ತಮ್ಮ ಹೆಸರುಗಳನ್ನು ನೊಂದಾಯಿಸಿದ್ದಾರೆ.ಮಹಾವೀರ ಕುಂದೂರ ಶಾಲಾ
ಆಢಳಿತ ಮಂಡಳಿಯ ಸದಸ್ಯರು ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿ ಹಾಜರಿರಲಿದ್ದಾರೆ.


Spread the love

About Karnataka Junction

    Check Also

    ಶ್ರೀ ಬಸವೇಶ್ವರರ ತತ್ವಾದರ್ಶಗಳು ದಾರಿದೀಪ- ಹುಚ್ಚಪ್ಪ ರೂಗಿ

    Spread the loveಹುಬ್ಬಳ್ಳಿ: ಬಸವ ಜಯಂತಿ ಅಂಗವಾಗಿ ಮಲ್ಲಿಕಾರ್ಜುನ ಗಚ್ಚಿ ನ ಬಸವೇಶ್ವರ ದೇವಸ್ಥಾನ ದ ವತಿಯಿಂದ ಬಸವೇಶ್ವರ ದೇವಸ್ಥಾನಕ್ಕೆ …

    Leave a Reply

    error: Content is protected !!