Breaking News

ಬಿಲ್ಲವಾಸ್ ಕತಾರ್ ನ ನೂತನ ನಿರ್ವಹಣಾ ಸಮಿತಿಯ ಪದಗ್ರಹಣ

Spread the love

ಕತಾರ್: ‘ಬಿಲ್ಲವಾಸ್ ಕತಾರ್” ಒಂದು ತುಂಬಾ ಕ್ರಿಯಾಶಾಲಿ ಸಂಸ್ಥಯಾಗಿದ್ದು, ಭಾರತೀಯ ರಾಯಭಾರ ಕಛೇರಿಯ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ “ಭಾರತೀಯ ಸಾಂಸ್ಕೃತಿಕ ಕೇಂದ್ರ – ಕತಾರ್” (ಐ ಸಿ ಸಿ -ಕತಾರ್ )ನ ಸಹವರ್ತಿ ಸಂಸ್ಥೆಗಳಲ್ಲಿ ಅಗ್ರಗಣ್ಯವಾಗಿರುವುದು ಉಲ್ಲೇಖನೀಯ.

“ಬಿಲ್ಲವಾಸ್ ಕತಾರ್”, ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ರೀಡೆಗಳಿಗೆ ಉತ್ತೇಜನವನ್ನು ಕೊಡುವುದಕ್ಕೆ ಸಮರ್ಪಕವಾದ ವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟು ನಮ್ಮ ತಾಯ್ನಾಡಿನ ಕಂಪನ್ನು ವಿಶೇಷವಾಗಿ ಯುವಜನರಿಗೆ ತಲುಪಿಸುವಲ್ಲಿ ಸದಾ ಶ್ರಮಿಸುತ್ತಿದೆ.
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಲ್ಲವಾಸ್ ಕತಾರ್ 2024-25 ನೇ ಸಾಲಿನ ಹೊಸ ನಿರ್ವಹಣಾ ಸಮಿತಿಯನ್ನು ಆಯ್ಕೆ ಮಾಡಿತು. ಸಂದೀಪ್ ಮಲ್ಲಾರ್ ಅವರು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಅಪರ್ಣಾ ಶರತ್ ಉಪಾಧ್ಯಕ್ಷರಾಗಿ, ಮಹೇಶ್ ಕುಮಾರ್ ಪ್ರಧಾನ ಕಾರ್ಯದರ್ಶಿಯಾಗಿ ಆಗಿ ಆಯ್ಕೆಯಾದರು. ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಅಜಯ್ ಕೋಟ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ಪೂಜಾ ಜಿತಿನ್, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ಶ್ವೇತಾ ಸುವರ್ಣ, ಸದಸ್ಯತ್ವ ಸಂಯೋಜಕರಾಗಿ ಚಂಚಲಾಕ್ಷಿ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀಮತಿ ಸೀಮಾ ಉಮೇಶ್ ಪೂಜಾರಿ, ಮಾಧ್ಯಮ ಸಂಯೋಜಕರಾಗಿ ನಿತಿನ್ ಸನಿಲ್, ಸರಬರಾಜು(ಲಾಜಿಸ್ಟಿಕ್ಸ್) ಸಂಯೋಜಕರಾಗಿ ಶ್ರೀ ನಿತಿನ್ ಕುಂಪಲ ಅವರು ಆಯ್ಕೆಯಾದರು.
ಪೂರ್ವಾಧ್ಯಕ್ಷರಾದ ರಘುನಾಥ್ ಅಂಚನ್ ಅವರು ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ನೂತನ ಸಮಿತಿಗೆ ಶುಭ ಹಾರೈಸಿದರು. ಹಿಂದಿನ ಸಮಿತಿಯ ಸದಸ್ಯರು ಮತ್ತು ಬಿಲ್ಲವಾಸ್ ಕತಾರ್ ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.


Spread the love

About Karnataka Junction

[ajax_load_more]

Check Also

ಬಾಬಾ ಸಾಹೇಬರಿಗೆ ಅಪಮಾನ – ಬಹಿರಂಗ ಚರ್ಚೆಗೆ ಬೆಲ್ಲದ ಸವಾಲು: ಅರವಿಂದ ಬೆಲ್ಲದ

Spread the loveಹುಬ್ಬಳ್ಳಿ:ಅಮಿತ್ ಶಾ ಅವರು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ತಿರುಚಿ, ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಕಾಂಗ್ರೆಸ್ ಟೂಲ್‌ಕಿಟ್‌ನ …

Leave a Reply

error: Content is protected !!