ಹುಬ್ಬಳ್ಳಿ: ದಾನ ಮಾತ್ರದಿಂದ ಪಾಪಗಳು ಪರಿಹಾರವಾಗಲು ಸಾಧ್ಯ. ದಾನವಾಗಿ ಬಂದ ಹಣ, ವಸ್ತುಗಳ ಸದುಪಯೋಗ ಆದಾಗ ಮಾತ್ರ ಪರಮಾತ್ಮ ತೃಪ್ತನಾಗುತ್ತಾನೆ. ಕೈಗೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಶಿರಹಟ್ಟಿಯ ಫಕೀರ ಸಿದ್ಧರಾಮೇಶ್ವರ ಶ್ರೀಗಳ ಅಮೃತ ಮಹೋತ್ಸವಕ್ಕೆ ಸಹಾಯ, ಸಹಕಾರ ಹಾಗೂ ಸೇವೆ ಸಲ್ಲಿಸಿದವರಿಗಾಗಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಎಲ್ಲೇ ಕಾರ್ಯಕ್ರಮ ಮಾಡಿದರೂ ಲೆಕ್ಕ ಪತ್ರ ಇಡುತ್ತೇವೆ. ೨೦೧೪ ರಲ್ಲಿ ಬಾಲೆಹೊಸೂರಿನಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದ ಲೆಕ್ಕಪತ್ರಗಳು ಇಂದಿಗೂ ಇವೆ. ಪ್ರತಿಯೊಬ್ಬ ಭಕ್ತರು ನೀಡಿದ ಪೈಸೆ ಲೆಕ್ಕವೂ ನಮ್ಮಲ್ಲಿದೆ. ಇತ್ತೀಚೆಗೆ ನಡೆದ ಫಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ಭಕ್ತರು ತನು, ಮನ, ಧನದಿಂದ ಸಹಾಯ ಮಾಡಿದ್ದಾರೆ. ಭಕ್ತರು ದಾನವಾಗಿ ನೀಡಿದ ಹಣ, ವಸ್ತುಗಳ ಲೆಕ್ಕವನ್ನು ಯಾರು ಯಾವಾಗ ಬೇಕಾದರೂ ಪರಿಶೀಲಿಸಬಹುದು ಎಂದರು.