ಹುಬ್ಬಳ್ಳಿ: ನಗರದ ನೆಹರೂ ಮೈದಾನದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಫಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವ ಮತ್ತು ತುಲಾಭಾರ ಕಾರ್ಯಕ್ರಮಕ್ಕೆ ಭಕ್ತರು ನೀಡಿದ ದೇಣಿಗೆಯ ಲೆಕ್ಕವನ್ನು ದಿಂಗಾಲೇಶ್ವರ ಶ್ರೀಗಳು ಸಭೆಗೆ ಒಪ್ಪಿಸಿದರು. ಒಟ್ಟು ೧.೬೫ ಕೋಟಿ ರೂ. ಸಂಗ್ರಹವಾಗಿತ್ತು. ತುಲಾಭಾರಕ್ಕೆ ನಾಣ್ಯದ ರೂಪದಲ್ಲಿ ೭೬ ಲಕ್ಷ ರೂ. ಸಂಗ್ರಹಿಸಲಾಗಿತ್ತು. ೮೯ ಲಕ್ಷ ರೂ. ಖರ್ಚಾಗಿದೆ. ವಾಗ್ದಾನದ ೯.೫೭ ಲಕ್ಷ ರೂ. ಇನ್ನೂ ಬರಬೇಕಿದೆ. ಎಲ್ಲ ಖರ್ಚುವೆಚ್ಚ ಸೇರಿ ೧೪.೯೪ ಲಕ್ಷ ರೂ. ಉಳಿದಿದೆ. ದವಸ, ಧಾನ್ಯ, ಜೋಳಿಗೆಯಲ್ಲಿ ಹಾಕಲಾದ ಹಣದ ಲೆಕ್ಕವನ್ನು ಪ್ರತ್ಯೇಕವಾಗಿ ನೀಡಲಾಗುವುದು ಎಂದರು. ಅಲ್ಲದೆ, ಸಮಗ್ರ ಲೆಕ್ಕ ಪತ್ರಗಳನ್ನು ಭಕ್ತರು ನೋಡಬಹುದು ಎಂದರು.
