ಹುಬ್ಬಳ್ಳಿ: 40% ಕಮಿಷನ್ ಬಗ್ಗೆ ಸಿದ್ದರಾಮಯ್ಯನವರು ಉತ್ತರ ಕೊಡಬೇಕು. ಕೆಂಪ್ಪಣ್ಣನವರು ಮಾಡಿರುವ 40% ಆಪಾದನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮಗಳನ್ನು ಜರುಗಿಸಬೇಕು ಎಂದು ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈ ಹಿಂದೆ ಬೊಮ್ಮಾಯಿಯವರ ಸರ್ಕಾರದ ಮೇಲೆ ಕೆಂಪಣ್ಣ ಆರೋಪ ಮಾಡಿದಾಗ ಸಿದ್ದರಾಮಯ್ಯ ರೋಷಾವೇಷವಾಗಿ ಮಾತನಾಡಿದ್ದರು. ಈಗ ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದಾರೆ ಎಂದರು.
ಬೊಮ್ಮಾಯಿ ಸರ್ಕಾರ ಇದ್ದಾಗ ಕೆಂಪಣ್ಣ ಆಪಾದನೆ ಮಾಡಿದ್ದರು. ಅವಾಗ ಕಾಂಗ್ರೆಸ್ ರಾಜ್ಯದಲ್ಲಿ ಹೋರಾಟ ಮಾಡಿ ಸರ್ಕಾರದ ಮೇಲೆ ಗೂಬೆ ಕುರಿಸಿದ್ದರು. ಇವತ್ತು ಅದೇ ಕೆಂಪಣ್ಣನವರು ಸಿದ್ದರಾಮಯ್ಯನವರ ಸರ್ಕಾರದಲ್ಲಿ 40% ಕಮಿಷನ್ ದಂಧೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಹೀಗಾಗಿ ಸಿದ್ದರಾಮಯ್ಯನವರು ಇದಕ್ಕೆ ಉತ್ತರ ಕೊಡಬೇಕು. ಸಿದ್ದರಾಮಯ್ಯನವರ ಸರ್ಕಾರದ ಮೇಲೆ 40% ಆಪಾದನೆಯನ್ನ ಕೆಂಪಣ್ಣ ಮಾಡಿದ್ದಾರೆ. ಈ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡುವ ನೈತಿಕ ಹೊಣೆಯನ್ನ ಸಿಎಮ್ ಹೊರಬೇಕಾಗುತ್ತದೆ ಎಂದು ಅವರು ಹೇಳಿದರು.
ಇದರಲ್ಲಿ ಅಧಿಕಾರಿಗಳಿರಲಿ ಇಲ್ಲವೇ ಮಂತ್ರಿಮಂಡಲದ ಯಾರೇ ಸಚಿವರು ಇದ್ದರು ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಟೆಂಗಿನಕಾಯಿ ಆಗ್ರಹಿಸಿದ್ದಾರೆ.
ಬೈಟ್; .ಮಹೇಶ ಟೆಂಗಿನಕಾಯಿ, ಶಾಸಕ