Breaking News

ವಾಕರಾರಸಂಸ್ಥೆಗೆ ಆರ್ಥಿಕ ಹೊರೆ ತಪ್ಪಿಸಲು ಸಂಸ್ಥೆ ಮಾಡಿದ ಐಡಿಯಾ ಏನು?

Spread the love

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜೀವನಾಡಿ ಎಂದೇ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಂತಾ ಹೇಳಬಹುದು. ಈ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಆರ್ಥಿಕ ನಷ್ಟ ಅನುಭವಿಸತಾ ಇದೆ. ಆದರೆ ಈಗ ಇದೇ ಸಂಸ್ಥೆ ಮುಖ್ಯಸ್ಥರು ಆರ್ಥಿಕ ಹೊರೆ ತಪ್ಪಿಸಲು ಹೊಸ ಪ್ಲ್ಯಾನ್ ವೊಂದನ್ನ ಕಂಡು ಹಿಡಿದ್ದಾರೆ.ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾಗುವ ಬಸ್‌ಗಳು ಆರ್ಥಿಕ ಹೊರೆ ಕಡಿಮೆಗೊಳಿಸುವ ದಿಸೆಯಲ್ಲಿ ಇನ್ನು ಮುಂದೆ ಕೆಂಪು ಬಣ್ಣದಿಂದ ಕೂಡಿರುತ್ತಿದ್ದು, ಹಸಿರು ಬಣ್ಣದ ಬಸ್‌ ಗಳು ನಿಧಾನಕ್ಕೆ ತೆರೆಮರೆಗೆ ಸರಿಯಲಿವೆ.
ಎಸ್ . ಸದ್ಯ ಸಂಸ್ಥೆಯಲ್ಲಿ ಮೊದಲ ಹಂತದಲ್ಲಿ 40 ಬಸ್‌ಗಳು ಬಂದಿದ್ದು, ಇವೆಲ್ಲವೂ ಕೆಂಪು-ಸಿಲ್ವರ್ ಕಲರ್ ಹೊಂದಿವೆ. ಮುಂದಿನ ದಿನಗಳಲ್ಲಿ ಸೇರ್ಪಡೆಯಾಗುವ 375 ಬಸ್‌ಗಳು ಸಹ ಇದೇ ಮಾದರಿಯ ಬಣ್ಣದ್ದಾಗಿರುತ್ತವೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ. ಕಳೆದ 25-26 ವರ್ಷಗಳಿಂದ ಹಸಿರು ಬಣ್ಣದ ಬಸ್‌ ಗಳು ಸಂಚರಿಸುತ್ತಿವೆ. ಇವುಗಳು ಗುಜರಿಗೆ ಹೋಗುವರೆಗೂ ಇದೇ ಬಣ್ಣಹೊಂದಿರುತ್ತವೆ,ಬದಲಾಯಿಸಲಾಗುವುದಿಲ್ಲ. ಹೊಸ ಬಸ್‌ಗಳು ಮಾತ್ರ ಕೆಂಪು ಬಣ್ಣದ್ದಾಗಿರುತ್ತವೆ. ಹಸಿರು ಬಣ್ಣದ ಬಸ್‌ಗಳು ನಿಧಾನಕ್ಕೆ ತೆರೆಮರೆಗೆ ಸರಿಯಲಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಬೈಟ್: ಭರತ್ ಎಸ್.(ವ್ಯವಸ್ಥಾಪಕ ನಿರ್ದೇಶಕರು)
ಬೆಳ್ಳಿ ಮಹೋತ್ಸವ ಸಂಭ್ರಮದಲ್ಲಿರುವ ಸಂಸ್ಥೆಗೆ ಹೊಸ ಬಸ್ ಗಳಿಗೂ ಹೊಸ ಕಲರ್ ಅಳವಡಿಸಿರುವುದು ಕಾಕತಾಳೀಯ ಎನ್ನಬಹುದಾಗಿದೆ. ಬಣ್ಣ ಬದಲಾಯಿಸಿದ್ದೇಕೆ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಈಗಾಗಲೇ ಸಂಚರಿಸುತ್ತಿರುವ
ವಾಹನಗಳು ಬಹುಭಾಗದಲ್ಲಿ ತಿಳಿ ಹಸಿರು ಇದ್ದು, ಮಧ್ಯದಲ್ಲಿ ಕೆಂಪು, ಹಳದಿ ಪಟ್ಟಿ ಹಾಗೂ ಚಿಕ್ಕದಾದ ತಿಳಿ ಸಿಲ್ವ‌ರ್ ಗೆರೆಗಳಿವೆ. ಸಂಸ್ಥೆಗೆ ಬರುವ ಹೊಸ ಬಸ್‌ಗಳು ಬಹುಭಾಗ ಕೆಂಪು ಕಲರ್‌ನಿಂದ ಕೂಡಿವೆ. ಅದರಲ್ಲಿ ಬೆಳ್ಳಿ ಬಣ್ಣವನ್ನು ಕಾಣಿಸುವ ಮೂಲಕ ಬಸ್‌ಗೆ ಹೊಸ ಲುಕ್ ನೀಡಲಾಗಿದೆ. ಕಿಟಕಿ ಕೆಳಭಾಗದಲ್ಲಿ ಹಳದಿ ರೇಡಿಯಂ ಪಟ್ಟಿ ಅಳವಡಿಸಲಾಗಿದೆ.

ಬೈಟ್: ಭರತ್ ಎಸ್.(ವ್ಯವಸ್ಥಾಪಕ ನಿರ್ದೇಶಕರು)
ಒಟ್ಟಿನಲ್ಲಿ ಹಸಿರು ಸೇರಿದಂತೆ ನಾಲ್ಕು ಬಗೆಯ ಬಣ್ಣ ಬಳಿಯುವುದರಿಂದ ಆರ್ಥಿಕವಾಗಿ ಹೆಚ್ಚಿನ ಹೊರೆ ಬೀಳಲಿದೆ. ಇದಲ್ಲದೇ ಬಸ್‌ಗಳಿಗೆ ಈ ನಾಲ್ಕು ಬಣ್ಣದ
ವಿನ್ಯಾಸ ರೂಪಿಸುವುದಕ್ಕೆ ಹೆಚ್ಚಿನ ಸಮಯ ಹಿಡಿಯುತ್ತದೆ. ಆದರೆ, ಇದೀಗ ಹೊಸ ಬಸ್‌ಗಳು ಕೆಂಪು-ಸಿಲ್ವರ್ ಬಣ್ಣ ಒಳಗೊಳ್ಳುವುದರಿಂದ ಸಂಸ್ಥೆಗೆ ಕನಿಷ್ಠ 50 ಲಕ್ಷ ರೂ. ಉಳಿತಾಯವಾಗಲಿದೆ. ಜತೆಗೆ ಎರಡು ಬಣ್ಣದ ವಿನ್ಯಾಸ ರೂಪಿಸಲು ಅತ್ಯಂತ ಕಡಿಮೆ ವೇಳೆ ತೆಗೆದುಕೊಳ್ಳುತ್ತದೆ. ಹಾಗಾಗಿ ಬಣ್ಣ ಬದಲಾಯಿಸಲಾಗಿದೆ.


Spread the love

About Karnataka Junction

[ajax_load_more]

Check Also

*ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಹೈ ಅಲರ್ಟ್: ಈದ್ಗಾ ಮೈದಾನದಲ್ಲಿ ಪೊಲೀಸ್ ಪರೇಡ್*

Spread the loveಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಧಾರವಾಡ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ …

Leave a Reply

error: Content is protected !!