Breaking News

ಕಡಲೆ ಅಣೆವಾರಿಯಲ್ಲಿ ತಾರತಮ್ಯ- ರೈತರಿಂದ ಪ್ರತಿಭಟನೆ

Spread the love

ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಇಂಗಳಗಿ ಹಾಗೂ ಹೀರೇಬೂದಿಹಾಳ ಗ್ರಾಮಗಳಲ್ಲಿ ಕಡೆಲೆ ಬೆಳೆ ಅಣೆವಾರಿ ಸಮೀಕ್ಷೆ ಮಾಡುವಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಸರಿಯಾಗಿ ಮಾಡಿಲ್ಲ ಕೂಡಲೇ ಇನ್ನೊಂದು ಸಲ ಆಣೇವಿಲೇವಾರಿ ಮಾಡಿ ನ್ಯಾಯ ಕೊಡಬೇಕು ಹಾಗೂ ನಿರ್ಲಕ್ಷ್ಯ ಮಾಡಿದ ಗ್ರಾಮ ಲೆಕ್ಕಾಧಿಕಾರಿ ಹಾಗೂ ವಿಮೆ ಕಂಪನಿಯ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು
ಎಂದು ಆಗ್ರಹಿಸಿ ಇಂಗಳಗಿ ಹಾಗೂ ಹಿರೇಬೂದಿಹಾಳ ಗ್ರಾಮಗಳ ರೈತರುಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದಬೃಹತ್ ಪ್ರತಿಭಟನೆ ಮಾಡಿದರು.
ನಗರದ ತಹಸ್ದೀಲಾರ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಇಂಗಳಗಿ ಹಾಗೂ ಹಿರೇ ಬೂದಿಹಾಳ ಗ್ರಾಮದ ರೈತರಿಗೆ ಅನ್ಯಾಯ ಆಗಿದ್ದು ಕೂಡಲೇ ನ್ಯಾಯ ಕೊಡಬೇಕು ಎಂದು ತಹಸ್ದೀಲಾರ ಮೂಲಕ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಿಗೆ ಮನವಿ ಮಾಡಿದರು.
ಇಂಗಳಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪ್ರಭುಗೌಡ ಸಂಕ್ಯಾಗೌಡಶ್ಯಾನಿ,
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಸಂಚಾಲಕ ವೆಂಕನಗೌಡ ಕಂಟೆಪ್ಪಗೌಡರ, ಪರ್ವತಗೌಡ ಕಂಟೆಪ್ಪಗೌಡರ, ಕರವೇ ಮುಖಂಡ ಕಲ್ಲಪ್ಪ ಹರಕುಣಿ, ಗುರುಸಿದ್ದಪ್ಪ ಯಲಿವಾಳ,ಅಶೋಕ ಘೋರ್ಪಡೆ, ಲವಪ್ಪಾ ಯಲಿವಾಳ,ಸುರೇಶಕಂಟೆಪ್ಪಗೌಡರ ,ಬಸನಗೌಡ ಸಂಗನಗೌಡರ, ಮುಕ್ತುಂಸಾಬ ಹುಲಗೂರ,ಶಂಕರಗೌಡ ದೊಡ್ಡಮನಿ, ಇಂಗಳಗಿ ಹಾಗೂ ಹೀರೇ ಬೂದಿಹಾಳ ಗ್ರಾಮಸ್ಥರು ಭಾಗವಹಿಸಿದ್ದರು.


Spread the love

About Karnataka Junction

[ajax_load_more]

Check Also

ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ

Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …

Leave a Reply

error: Content is protected !!