Breaking News

ಡಿ.ಕೆ.ಸುರೇಶ ವಿರುದ್ಧ ಹಕ್ಕು ಚ್ಯುತಿ ಮಂಡನೆಗೆ ಚಿಂತನೆ: ಬಿ.ವೈ.ರಾಘವೇಂದ್ರ

Spread the love

ಹುಬ್ಬಳ್ಳಿ: ಕಾಂಗ್ರೆಸ್ ನಾಯಕರು ಈ ಹಿಂದೆ ದೇಶ ವಿಭಜನೆ ಮಾಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಈಗಲೂ ಅದೇ ಚಾಳಿಯನ್ನು ಮುಂದುವರೆಸಿರುವ ಸಂಸದ ಡಿ.ಕೆ. ಸುರೇಶ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಲು ಚಿಂತನೆ ನಡೆಸಿದ್ದೇವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ದೇಶ, ರಾಜ್ಯ, ನಗರಗಳು ಅಭಿವೃದ್ಧಿಯಾಗಲಿ ಎಂಬ ಕಾರಣಕ್ಕೆ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆಯೇ ಹೊರತು ದೇಶವನ್ನು ಇಬ್ಭಾಗಿಸಲು ಅಲ್ಲ. ದೇಶವನ್ನು ಇಬ್ಭಾಗ ಮಾಡುವ ಉದ್ದೇಶ ಅವರ ಮನದಲ್ಲಿ ಇದ್ದುದಕ್ಕೇ, ಆ ತರಹದ ಹೇಳಿಕೆ ಅವರ ಬಾಯಲ್ಲಿ ಬಂದಿದೆ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಇದಕ್ಕೆ ನಮ್ಮಲ್ಲಿ ಆಸ್ಪದವಿಲ್ಲ. ಹೀಗಾಗಿ ಡಿ.ಕೆ. ಸುರೇಶ ಹೇಳಿಕೆಗೆ ಕ್ಷಮೆ ಇಲ್ಲ. ಅವರ ವಿರುದ್ಧ ಅವರ ವಿರುದ್ಧ ಲೋಕಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಲು ಚಿಂತನೆ ನಡೆಸಲಾಗುವುದು ಎಂದರು.

ಕೇಂದ್ರ ಸರ್ಕಾರ ಮೊನ್ನೆ ಮಂಡಿಸಿದ್ದು ಮಧ್ಯಂತರ ಬಜೆಟ್‌. ಅದು ಹೊಸ ಬಜೆಟ್‌ ಅಲ್ಲ. ಅದನ್ನೇ ಮುಂದಿಟ್ಟುಕೊಂಡು ಡಿ.ಕೆ. ಸುರೇಶ ಅವರು, ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರ ಇಬ್ಭಾಗದ ಹೇಳಿಕೆ ನೀಡಿದ್ದಾರೆ. ಇದನ್ನೇ ಪ್ರತಿವಾದಿಸುತ್ತಿರುವ ಕಾಂಗ್ರೆಸ್ ನಾಯಕರು ದೆಹಲಿ ಚಲೋ ಎಂದು ಹೊರಟಿದ್ದಾರೆ. ರಾಜಕೀಯಕ್ಕಾಗಿ ಇವರು ವ್ಯವಸ್ಥಿತ ಯೋಜನೆ ಸಿದ್ಧಪಡಿಸಿ, ಜನರ ಗಮನವನ್ನು ಬೇರೆಡೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಅನ್ಯಾಯ ಆಗಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ 70 ಸಾವಿರ ಕೋಟಿ ತೆರಿಗೆ ಹಣ ರಾಜ್ಯಕ್ಕೆ ಬಂದಿತ್ತು. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ 2.20 ಲಜ್ಷ ಕೋಟಿ ಅನುದಾನ ಬಂದಿದೆ. ಸ್ವಾತಾಂತ್ರ್ಯಾ ನಂತರದಿಂದ 2014ರವರೆಗೆ ರೈಲ್ವೆ ವಿದ್ಯುದ್ದೀಕರಣ ಮಾರ್ಗ ಕೇವಲ 6 ಸಾವಿರ ಕಿ.ಮೀ.ಇತ್ತು. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ 13ಸಾವಿರ ಕಿ.ಮೀ. ವಿದ್ಯುತ್ ರೈಲು ಮಾರ್ಗ ಮಾಡಲಾಗಿದೆ. ಇಷ್ಟೆಲ್ಲ ಆದಾಗಲೂ ತಾರತಮ್ಯ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ಕೇವಲ ಎಂಟು ತಿಂಗಳಲ್ಲಿ ಆರು ತಿಂಗಳಲ್ಲಿ ರಾಜ್ಯ ಸರ್ಕಾರದ ಬಣ್ಣ ಬಯಲಾಗಿದೆ. ಅವರದ್ದೇ ಶಾಸಕರು, ಸಚಿವರು ಭ್ರಮನಿರಸನಗೊಂಡು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ‌. ಹತ್ತಾರು ಪೊಳ್ಳು ಭರವಸೆ ನೀಡಿ, ಅವುಗಳನ್ನು ಪೂರೈಸಲಾಗದೇ ಜನರನ್ನೂ ವಿರೋಧ ಕಟ್ಟಿಕೊಂಡಿದ್ದಾರೆ. ಯಾವ ಮುಖ ಇಟ್ಟುಕೊಂಡು ಲೋಕಸಭೆ ಚುನಾವಣೆಗೆ ಮತಯಾಚನೆ ಮಾಡುತ್ತಾರೆ. ಹೀಗಾಗಿ ತಮ್ಮ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಕೇಂದ್ರದ ಕಡೆ ಬೊಟ್ಟು ಮಾಡುತ್ತ ನಾಟಕವಾಡುತ್ತಿದ್ದಾರೆ ಎಂದು ಹರಿಹಾಯ್ದರು.

ದೆಹಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ನನಗೂ ಸಿಎಂ ಪತ್ರ ಬರೆದಿದ್ದಾರೆ. ರಾಜ್ಯಕ್ಕೆ ಅನ್ಯಾಯವಾಗಿದ್ದರೆ ಹೋಗಬಹುದಿತ್ತು. ದೂರದೃಷ್ಟಿಯ ಯೋಜನೆ ಇದ್ದರೆ ಪಾಲ್ಗೊಳ್ಳುತ್ತಿದ್ದೆ. ಆದರೆ, ಇದೆಲ್ಲ ಕೇವಲ ಚುನಾವಣೆ, ರಾಜಕೀಯಕ್ಕೆ ನಡೆಯುವ ಹೋರಾಟ ಎಂದು ವ್ಯಂಗ್ಯವಾಡಿದರು.


Spread the love

About Karnataka Junction

    Check Also

    ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರಿಂದ ನಾಳೆ ಐಐಟಿಯಲ್ಲಿನ ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ ಉದ್ಘಾಟನೆ

    Spread the loveಧಾರವಾಡ ಫೆ.29: ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನ್‌ಕರ್ ಅವರು ನಾಳೆ ಮಾರ್ಚ್ 1, …

    Leave a Reply