ಹುಬ್ಬಳ್ಳಿ: ಅಲ್ಪ ಸಂಖ್ಯಾತರ ಓಲೈಕೆಯಲ್ಲಿ ಮಗ್ನವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಅಲ್ಕದೆ, ಹಿಂದು-ಮುಸ್ಲಿಂ ಸಾಮರಸ್ಯದ ಜೀವನ ನಡೆಸದಂತೆ ವಾರಾವರಣ ಸೃಷ್ಟಿ ಮಾಡುತ್ತಿದೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಕೆರೆಗೂಡಿ ಹನುಮ ಧ್ವಜ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರವೇ ಗೊಂದಲ ಸೃಷ್ಡಿಸಿದೆ. ಪೊಲೀಸರನ್ನು ಬಳಸಿಕೊಂಡು ದಬ್ಬಾಳಿಕೆ ನಡೆಸಲಾಗಿದೆ. ಅನ್ಯ ಕೋಮಿನ ಧ್ವಜಗಳು ಎಲ್ಲೆಡೆ ರಾರಾಜಿಸುತ್ತಿದ್ದರೂ ಅವುಗಳ ಗೋಜಿಗೆ ಹೋಗದ ಕಾಂಗ್ರೆಸ್ ಸರ್ಕಾರ ಹನುಮ ಧ್ವಜವನ್ನು ತೆರವು ಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದು ಹಿಂದೂಗಳಿಗೆ ಮಾಡಿದ ಅಪಮಾನ ಎಂದು ಕಿಡಿ ಕಾರಿದರು
.ಈ ಹಿನ್ನೆಲೆಯಲ್ಲಿ ಮಂಡ್ಯ, ಕೆರೆಗೋಡು ಭಾಗದ ಹಿಂದೂಪರ ಕಾರ್ಯಕರ್ತರು ಮಂಡ್ಯ ಬಂದ್ ಗೆ ಕರೆ ನೀಡಿದ್ದಾರೆ. ಪ್ರತಿಭಟಿಸುವುದು ನಮ್ಮ ಹಕ್ಕು. ಅದರಂತೆ ಗಲಭೆ, ಗೊಂದಲಕ್ಕೆ ಎಡೆ ಮಾಡದಂತೆ ಶಾಂತಿಯುತವಾಗಿ ಪ್ರತಿಭಟಿಸೋಣ. ಹಿಂದೂ ಆಚರಣೆಗಳ ಬಗ್ಗೆ ಪೂರ್ವಾಗೃಹ ಹೊಂದಿರುವ ಕಾಂಗ್ರೆಸ್ ಸರ್ಕಾರದ ಮುಖವಾಡ ಮುಖವಾಡ ಕಳಚುವ ಕೆಲಸ ಮಾಡಬೇಕಿದೆ ಎಂದರು.
ನಮಾಜ್ ವೇಳೆ ಹೊತರುಪಡಿಸಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಯೋಚಿಸಿರುವ ಸರ್ಕಾರದ ಕ್ರಮಕ್ಕೆ ಆಕ್ರೋಷ ವ್ಯಕ್ತಪಡಿಸಿದ ಅವರು, ನಾವು ಯಾವ ದೇಶದಲ್ಲಿದ್ದೇವೆ? ಪರೀಕ್ಷೆಗೆ ಎಲ್ಲ ಧರ್ಮದ ಮಕ್ಕಳೂ ಹಾಜರಾಗಿರುತ್ತಾರೆ. ಕೇವಲ ಒಂದು ಕೋಮಿನವರ ಸಲುವಾಗಿ ಈ ರೀತಿ ನಿರ್ಧಾರ ತಪ್ಪು.
ಯಾವುದೇ ಕಾರಣಕ್ಕೂ ಹೀಗಾಗಲು ನಾವು ಬಿಡುವುದಿಲ್ಲ ಎಂದು ಕಿಡಿ ಕಾರಿದರು.