ಹುಬ್ಬಳ್ಳಿ: ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ನೀಡುವ ಅನುದಾನ ವಿಚಾರದಲ್ಲಿ ತಾರತಮ್ಯ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ರಾಷ್ಟ್ರ ಆಗಬೇಕು ಭಾರತ ಎಂಬ ಸಂಸದ ಡಿ.ಕೆ. ಸುರೇಶ ಹೇಳಿಕೆ ವಿಚಾರಕ್ಕೆ ತಮ್ಮ ಸಹಮತ ಇಲ್ಲ ಎಂದು ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಹೇಳಿದರುನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಪ್ರತ್ಯೇಕ ರಾಷ್ಟ್ರ ಆಗಲಿಕ್ಕೆ ನಾ ಒಪ್ಪಲ್ಲ ಇದಕ್ಕೆ ನನ್ನ ಸಹಮತ ಇಲ್ಲರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಪ್ರಧಾನಿ ಮಂತ್ರಿಗಳು ಗಮನ ಹರಿಸಬೇಕು ಎಂದ ಅವರುಈಗಾಗಲೇ ಕೇರಳದವರು ಕೇಂದ್ರ ಸರ್ಕಾರದ ವಿರುದ್ಧ ದೆಹಲಿಗೆ ಹೋಗಿದ್ದರುನಾಳೆ ನಾವು ಹೋಗತಾ ಇದ್ದೇವೆ ಇನ್ನು ಮುಂದೆ ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶದವರು ಮಾಡಬಹುದು ರಾಜ್ಯಗಳಿಗೆ ಏನು ಅನ್ಯಾಯ ಆಗಿದೆ ಅಂತಾ ಪ್ರಧಾನ ಮಂತ್ರಿಗಳು ಕೇಳಿದರೆ ಎಷ್ಟೋ ಸಹಾಯ ಆಗುತ್ತದೆನೀರಾವರಿ ವಿಚಾರದಲ್ಲಿ ಕೃಷ್ಣ ನಮ್ಮದೇ ಉದಾಹರಣೆ ತೊಗೋಳ್ಳಿಒಂದು ಗೆಜೆಟ್ ನೋಟಿಪೇಕೇಷನ್ ಆಗತಾ ಇಲ್ಲ ಕೇಂದ್ರ ಸರ್ಕಾರ ಕೋರ್ಟ್ ಗೆಮನವರಿಕೆ ಮಾಡಿಕೊಡಬಹುದು ನೀರು ಹಂಚಿಕೆ ವಿಚಾರದಲ್ಲಿ ಅನ್ಯಾಯ ಆಗತಾ ಇದೆ.ನಮಗೆ ಎಷ್ಟು ನೀರು ಬರತಾ ಇದೆಆಂದ್ರಪ್ರದೇಶಕ್ಕೆ ಎಷ್ಟು ಕೊಡಬೇಕು ಎನ್ನುವ ಕುರಿತು ಸ್ಪಷ್ಟವಾಗಬೇಕು. ವಿನಾಕಾರಣ ನದಿ ನೀರು ಸಮುದ್ರಕ್ಕೆ ಹೋಗತಾ ಇದೆಇದು ದುರದೈವದ ಸಂಗತಿಕಳೆದ 15-20 ವರ್ಷಗಳಿಂದ ನೋಡತಾ ಕುಳಿತುಕೊಂಡಿದ್ದೇವೆರಾಜ್ಯ ಸರ್ಕಾರಕ್ಕೆ ಅನುದಾನ ಕೊಡುವ ನಿಟ್ಟಿನಲ್ಲಿ ತಾರತಮ್ಯ ಆಗತಾ ಇರುವುದು ಸತ್ಯದಕ್ಷಿಣ ಭಾರತದ ಆದಾಯವನ್ನ ಕೇಂದ್ರ ಸರ್ಕಾರಕ್ಕೆ ಹೆಚ್ಚು ಕೊಡಲಾಗುತ್ತಿದೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ನಡೆಸುವುದು ಕಷ್ಟಕರ ಎಂದು ಅಸಮಧಾನ ವ್ಯಕ್ತಪಡಿಸಿದ ಅವರುಕೇಂದ್ರ ಸರ್ಕಾರ ಸಮಪಾಲು ಕೊಡದೇ ಹೋದರೆ ನಮಗೆ ಕಷ್ಟ ಆಗುತ್ತಿದೆ ದಕ್ಷಿಣ ಭಾರತದ ರಾಜ್ಯಗಳು ಕಷ್ಟ ಪಟ್ಟು ಹಣ ನೀಡಿದರೆಕೇಂದ್ರ ಸರ್ಕಾರ ನಮಗೆ ಏನು ಕೊಡದೇ ಹೋದರೇ ತುಂಬಾ ಸಮಸ್ಯೆ ಆಗುತ್ತದೆ.2013 ರ ಹಿಂದೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಅನುದಾನ 100 ಕ್ಕೆ 70,60 ರಷ್ಟು ಕೊಡತಾ ಇದ್ದರುಈಗ ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯ 60, ಕೇಂದ್ರ 40 ರಷ್ಟು ಭರಿಸುವ ಹಂತಕ್ಕೆ ಹೋಗಿದೆಈಗ ಕೇಂದ್ರ ಸರ್ಕಾರದಿಂದ ಬರಬೇಕಾದ ಹಣದ ಜೊತೆಗೆ ರಾಜ್ಯದ ಹಣ ಸಹ ಯೋಜನೆಗೆ ವೆಚ್ಚ ಮಾಡಬೇಕಾಗಿದೆ ಎಂದರು.ಇನ್ನು 15 ನೇ ಹಣಕಾಸು ಯೋಜನಾ ಆಯೋಗದ ಅಡಿ ಬರಬೇಕಾದ ಪಾಲು ಸಹ ಬರತಾ ಇಲ್ಲ ರಾಜ್ಯಕ್ಕೆ 62 ಸಾವಿರ ಕೋಟಿ ಖೊತಾ ಆಗಿದ್ದು ಪದೇ ಪದೇ ಮುಖ್ಯಮಂತ್ರಿ ಗಳು ಹೇಳತಾ ಇದ್ದಾರೆ. ಮನವರಿಕೆ ಮಾಡಿಕೊಂಡು ಕೂಡಲೇ ರಾಜ್ಯಕ್ಕೆ ಅನುದಾನ ಕೊಡಬೇಕು ಇಲ್ಲ ಅಂದರ ಬಹಳ ಕಷ್ಟ ಆಗುತ್ತದೆ ಎಂದರು.
*ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಕೊಡಲಾದ ಅನುದಾನ ನೀಡಿದ ವಿಚಾರ*
ನಾವು ಎಷ್ಟು ಕೊಟ್ಟಿದ್ದೇವೆ ಎಂಬ ಬಗ್ಗೆ ಚರ್ಚೆಗೆ ಸಿದ್ಧ ಎಂಬ ಕೇಂದ್ರ ಸಚಿವ ಜೋಶಿ ಹೇಳಿಕಗೆ ಪ್ರತಿಕ್ರಿಯೆ ನೀಡಿದ ಅವರುಯುಪಿಎ ಸರ್ಕಾರ ಇದ್ದಾಗ, ಎನ್ ಡಿಎ ಸರ್ಕಾರ ಇದ್ದಾಗ ಕೊಟ್ಟ ಅನುದಾನ ಎಷ್ಟು ಕೊಡಲಾಗಿದೆ ಚರ್ಚೆ ಮಾಡಲಿ
ಎಷ್ಟು ಕೊಟ್ಟಿದ್ದಾರೆ ಪರಿಶೀಲನೆ ಮಾಡಿ ಕಡಿಮೆ ಕೊಡಲಾಗಿದೆ, ಹೆಚ್ಚು ಕೊಟ್ಟಿಲ್ಲಕೇಂದ್ರದಿಂದ ಕೊಟ್ಟ ಅನುದಾನದಲ್ಲಿ ಭ್ರಷ್ಟಾಚಾರ ಆಗಿಲ್ಲ
ಚುನಾವಣಾ ವಿಷಯಕ್ಕೆ ಅಂತಲೇ ಆರೋಪ ಆಗಿದೆಬರ ಪರಿಹಾರಕ್ಕಾಗಿ ಕೇಂದ್ರದಿಂದ ಇದುವರೆಗೆ ಹಣ ಬಿಡುಗಡೆ ಆಗಿಲ್ಲ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಅಂತೆ
ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ ಇದುವರೆಗೆ ಕೊಟ್ಟಿಲ್ಲ ಇನ್ನೂ ಮುಂದೆ ಕೊಡತಾರೆ ಅಂತೆ ನೋಡೋಣ ಎಂದರು.