Breaking News

ಆಕಳು ಕರುವಿಗೆ ಕೃತಕ ಕಾಲು ಜೋಡಣೆ

Spread the love

Error: Contact form not found.

ನಾವು ಸಾಮಾನ್ಯವಾಗಿ ಮನುಷ್ಯ ಏನಾದರೂ ಅಪಘಾತವಾಗಿ ಕಾಲು ಕಳೆದುಕೊಂಡರೇ ಕೃತಕ ಕಾಲು ಜೋಡಣೆ ಮಾಡಿದ್ದನ್ನ ನೋಡಿದ್ದೇವೆ. ‌ಆದರೆ ಇಲ್ಲೊಂದು ಸಂಸ್ಥೆ ಆಕಳು ಕರುಳಿಗೆ ಸಹ ಕೃತಕ ಕಾಲು ಜೋಡಣೆ ಮಾಡಿದ ಅಪರೂಪದ ಘಳಿಗಿಗೆ ಇಂದು ಸಾಕ್ಷಿಯಾಯಿತು.

ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡು ನ

Error: Contact form not found.

ಡೆಯಲಾಗದ ಸ್ಥಿತಿಯಲ್ಲಿದ್ದ ಆಕಳ ಕರುವಿಗೆ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್ ವತಿಯಿಂದ ಕೃತಕ ಕಾಲು ಜೋಡಣೆ ಮಾಡುವ ಮೂಲಕ ಮಾನವೀಯತೆ ಮೆರದಿದೆ.

ಈ ಕುರಿತು ಮಾಹಿತಿ ಹಂಚಿಕೊಂಡ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್‌ನ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಅವರು, ಮಾಹಿತಿ ನೀಡಿದರು.

ಧಾರವಾಡದ ಕಮಲಾಪುರದಲ್ಲಿ ಕಳೆದ ಎಂಟು ತಿಂಗಳ ಹಿಂದೆ ರೈಲು ಅಪಘಾತದಲ್ಲಿ ಆಕಳು ಮತ್ತು ಕರುವಿಗೆ ಅಪಘಾತವಾಗಿತ್ತು. ಆಗ ಆಕಳು ಸಾವನ್ನಪ್ಪಿದ್ದು, ಕರುವಿನ ಹಿಂದಿನ ಒಂದು ಕಾಲು ಕಟ್ ಆಗಿತ್ತು. ಇದರಿಂದ ಓಡಾಡಲು ತೀವ್ರ ತೊಂದರೆಯಾಗಿತ್ತು. ಆ ಕರುವನ್ನು ಅಭಿನವನಗರದ ವಿಶ್ವ ಹಿಂದೂ ಪರಿಷತ್ ಸಂಚಾಲಿತ ಗೋ ಸೇವಾ ಕೇಂದ್ರದಲ್ಲಿ ಇರುವುದನ್ನು ಅರಿತು ಮಹಾವೀರ ಲಿಂಬ್ ಸೆಂಟರ್‌ನಿಂದ ಉಚಿತವಾಗಿ ಕರುವಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ ಎಂದರು.ಹುಬ್ಬಳ್ಳಿ:ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡು ನಡೆಯಲಾಗದ ಸ್ಥಿತಿಯಲ್ಲಿದ್ದ ಆಕಳ ಕರುವಿಗೆ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್ ವತಿಯಿಂದ ಕೃತಕ ಕಾಲು ಜೋಡಣೆ ಮಾಡುವ ಮೂಲಕ ಮಾನವೀಯತೆ ಮೆರೆಯಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್‌ನ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಅವರು, ಧಾರವಾಡದ ಕಮಲಾಪುರದಲ್ಲಿ ಕಳೆದ ಎಂಟು ತಿಂಗಳ ಹಿಂದೆ ರೈಲು ಅಪಘಾತದಲ್ಲಿ ಆಕಳು ಮತ್ತು ಕರುವಿಗೆ ಅಪಘಾತವಾಗಿತ್ತು. ಆಗ ಆಕಳು ಸಾವನ್ನಪ್ಪಿದ್ದು, ಕರುವಿನ ಹಿಂದಿನ ಒಂದು ಕಾಲು ಕಟ್ ಆಗಿತ್ತು. ಇದರಿಂದ ಓಡಾಡಲು ತೀವ್ರ ತೊಂದರೆಯಾಗಿತ್ತು. ಆ ಕರುವನ್ನು ಅಭಿನವನಗರದ ವಿಶ್ವ ಹಿಂದೂ ಪರಿಷತ್ ಸಂಚಾಲಿತ ಗೋ ಸೇವಾ ಕೇಂದ್ರದಲ್ಲಿ ಇರುವುದನ್ನು ಅರಿತು ಮಹಾವೀರ ಲಿಂಬ್ ಸೆಂಟರ್‌ನಿAದ ಉಚಿತವಾಗಿ ಕರುವಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ. ಇದು ನಮಗೆ ಸಾರ್ಥಕತೆಯನ್ನು ಮೂಡಿಸಿದೆ ಎಂದರು.
ಈ ಹಿಂದೆ ಆನೆಗೆ ಒಂದು ಕೃತಕ ಕಾಲು ಜೋಡಣೆ ಮಾಡಿದ್ದನ್ನು ನಾವು ನೋಡಿದ್ದೇವೆ. ಅದನ್ನು ಬಿಟ್ಟರೆ, ಎರಡು ವರ್ಷದ ಹಿಂದೆ ನಮ್ಮ ಸಂಸ್ಥೆಯಿAದ ಕುದುರೆಗೆ ಕೃತಕ ಕಾಲು ಜೋಡಣೆ ಮಾಡಲಾಗಿತ್ತು. ಈಗ ಕರುವಿಗೆ ಕೃತಕ ಕಾಲು ಜೋಡಣೆ ಮಾಡಿದ್ದು, ಕರು ಮೊದಲಿನಂತೆ ಓಡಾಡುತ್ತಿದೆ. ೨.೫ ವರ್ಷದವರೆಗೆ ಈ ಕಾಲು ಬಳಸಬಹುದಾಗಿದೆ. ಕರುವನ್ನು ದತ್ತು ಪಡೆದುಕೊಂಡಿದ್ದು, ಅದರ ಪೋಷಣೆ ಮಾಡಲಾಗುವುದು ಎಂದರು.
ಇಲ್ಲಿಯವರೆಗೂ ಮಹಾವೀರ ಲಿಂಬ್ ಸೆಂಟರ್‌ನಿಂದ ೫೧ ಸಾವಿರ ಕೃತಕ ಕಾಲು ಜೋಡಣೆ ಮಾಡಲಾಗಿದೆ. ಅದಕ್ಕಿಂತ ಹೆಚ್ಚು ಈ ಕಾರ್ಯ ತೃಪ್ತಿ ನೀಡಿದೆ ಎಂದರು.
ವಿಶ್ವ ಹಿಂದೂ ಪರಿಷತ್‌ನ ಗೋವರ್ಧನರಾವ್ ಮಾತನಾಡಿ, ಗೋಶಾಲೆಯಲ್ಲಿ ದೇಶಿಯ ಆಕಳಿಗೆ ಮಹತ್ವ ನೀಡಲಾಗಿದೆ. ಕೃಷಿ ಬಗ್ಗೆ ಮಹತ್ವ ತಿಳಿಸಿಕೊಡುತ್ತೇವೆ. ನಮ್ಮ ಗೋಶಾಲೆಗೆ ಬಂದ ಕರುವಿಗೆ ಕೃತಕ ಕಾಲು ಜೋಡಿಸಿರುವುದು ಹೊಸ ಆಯಾಮ. ಇದೊಂದು ಮಾನವೀಯ ಕಾರ್ಯ ಎಂದರು.
ಈ ಸಂದರ್ಭದಲ್ಲಿ ಮಹಾವೀರ ಲಿಂಬ್ ಸೆಂಟರ್ ಅಧ್ಯಕ್ಷ ಗೌತಮ್ ಗುಲೇಚ್ಛಾ, ಪ್ರಕಾಶ ಕಟಾರಿಯಾ, ಆನಂದ ಸಂಗಮ, ಗಣೇಶ ಕದಂ, ಸುಭಾಸ್ ಡಂಕ, ಸುನೀಲ ಬರೋಟ್ ಸೇರಿದಂತೆ ಇತರರು ಇದ್ದರು.


Spread the love

About Karnataka Junction

[ajax_load_more]

Check Also

ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ

Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …

Leave a Reply

error: Content is protected !!