ಹುಬ್ಬಳ್ಳಿ:ಆಧುನಿಕ ಜಗತ್ತಿನ ಬೇಕು-ಬೇಡಗಳು, ಜಂಜಾಟ, ಸ್ವತಂತ್ರ ಮನೋಭಾವ ಪ್ರತಿಯೊಬ್ಬರ ಬದುಕಿಗೂ ಅವರದ್ದೇ ಆದ ದೃಷ್ಠಿಕೋನದಲ್ಲಿ ಒಂದೊಂದು ಅರ್ಥ ಕಲ್ಪಿಸಿಕೊಡುತ್ತವೆ. ಹಾಗಂತ ಇಲ್ಲಿ ಯಾರನ್ನೂ ವಹಿಸಿಕೊಳ್ಳಲಾಗದು, ಯಾರ ಪರವಾಗಿಯೂ ನಿಲ್ಲಲಾಗದು, ಯಾವುದನ್ನೂ ಜರಿಯಲೂ ಆಗದು. ಇಂಥ ಸಂದರ್ಭದಲ್ಲಿ ಕೆಲವೊಮ್ಮೆ ಅನಿರೀಕ್ಷಿತವಾಗಿ ಎದುರಾಗುವ ಪರಿಸ್ಥಿತಿ ಬದುಕನ್ನು ಹೇಗೆಲ್ಲ ಹೈರಾಣಾಗಿ ಸುತ್ತದೆ. ಅದಕ್ಕೆ ಸಾಮಾಜಿಕ ಮತ್ತು ಶ್ರೀಸಾಮಾನ್ಯನ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದೇ ಈ ವಾರ ತೆರೆಗೆ ಬಂದಿರುವ “ಪಿಂಕಿ ಎಲ್ಲಿ?’ ಸಿನಿಮಾದ ವಸ್ತು ವಿಷಯ.
ಇದೊಂದು ಸಾಮಾಜಿಕ ಕಳಕಳಿ ಹಾಗೂ ಕೌಟುಂಬಿಕ ಜೀವನದ ಸುತ್ತ ಗಿರಕಿ ಹೊಡೆಯುವ ಕಥೆವುಳ್ಳ ಸಿನಿಮಾ ಪಿಂಕಿ ಎಲ್ಲಿ? ಇನ್ಹರ್ ವ್ಹಿಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಡಿಸ್ಟ್ರಿಕ್ಟ್ 317 ದಿಂದ ಚಾರಟಿ ಶೋ ನಡೆಸಿಕೊಡಲಾಯಿತು.
ತಾಯಿಯ ಮಡಿಲಿನಲ್ಲಿ ಪ್ರೀತಿಯಿಂದ ಬೆಚ್ಚಗೆ ಬೆಳೆಯಬೇಕಾದ 8 ತಿಂಗಳ ಹೆಣ್ಣು ಮಗು ಪಿಂಕಿ, ತಂದೆ-ತಾಯಿ ಇದ್ದರೂ ಬೇರೊಬ್ಬರ ಜೋಳಿಗೆ ತುಂಬಿಸಲು ದುಡಿಯು ವ ಮಗುವಾಗುತ್ತದೆ. ಮನೆಯಿಂದ ಕಾಣೆಯಾಗುವ ಪಿಂಕಿಯ ಹುಡುಕಾಟದ ಸುತ್ತ “ಪಿಂಕಿ ಎಲ್ಲಿ?’ ಸಿನಿಮಾದ ಕಥಾಹಂದರ ಸಾಗಿದ್ದು ಇದೊಂದು ಯಾವುದೇ ಹಾಡು ಆಡಂಭರವಿಲ್ಲ ಚಿತ್ರ ಎನ್ನುತ್ತಾರೆ ನಾಯಕಿ ನಟಿ ಅಕ್ಷತಾ ಪಾಂಡವಪುರ.
ಪಿಂಕಿ ಎಲ್ಲಿ?’ ಸಿನಿಮಾದಲ್ಲಿ ಪಿಂಕಿ ಎಂಬ ಮಗು ಕೇವಲ ಸಾಂಕೇತಿಕವಷ್ಟೇ. ಪಿಂಕಿ ಕಳೆದು ಹೋದ ನಂತರ ಮಗುವಿನ ಹುಡುಕಾದ ನಡುವೆಯೇ ಅದರ ಪೋಷಕರ ಹಿನ್ನೆಲೆ ತೆರೆದುಕೊಳ್ಳುತ್ತದೆ. ಅಲ್ಲಿ ದಾಂಪತ್ಯ, ಮಾನವ ಸಂಬಂಧಗಳ ಹುಳುಕು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮಹಾನಗರಗಳಲ್ಲಿ ಬದುಕಿನ ಅನಿವಾರ್ಯತೆ ವಿರಾಟ್ ದರ್ಶನವಾಗುತ್ತದೆ. ಸ್ಲಂಗಳು, ಅಲ್ಲಿನ ಜನ ಜೀವನ, ಗೊಂದಲಮಯ ಬದುಕು ಮತ್ತು ಸಾಮಾಜಿಕ ಮನಸ್ಥಿತಿ, ಸ್ಥಿತಿಗತಿ ಎಲ್ಲವೂ ತೆರೆದು ಕೊಳ್ಳುತ್ತದೆ. ಮಗುವನ್ನು ಕಳೆದು ಕೊಂಡ ತಾಯಿಯೊಬ್ಬಳ ಒಡಲಾಳದ ನೋವು ಮತ್ತು ಅಸಹಾಯಕ ನಿಲವು ಅಲ್ಲಲ್ಲಿ ಕರುಣೆ ಹುಟ್ಟಿಸುತ್ತದೆ.
ಇನ್ನು ಆಕೆಯ ಪತಿ ಹಾಗೂ ಸ್ನೇಹಿತ ಎಂಬ ಎರಡು ಪಾತ್ರಗಳಿಗೆ ಎರಡು ಆಯಾಮಗಳಿವೆ. ಕೆಲವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ, ಅದನ್ನು ಮನಮುಟ್ಟುವಂತೆ ಚಿತ್ರರೂಪದಲ್ಲಿ ತೆರೆಮೇಲೆ ತರುವಲ್ಲಿ ನಿರ್ದೇಶಕ ಪೃಥ್ವಿ ಕೋಣನೂರು ಯಶಸ್ವಿಯಾಗಿದ್ದಾರೆ. ಬದುಕಿನ ಅನಿವಾರ್ಯತೆ ಯಲ್ಲಿ ಬೇಯುವ ಮನಸ್ಸುಗಳು ತಮ್ಮದೇ ನಿರ್ಲಕ್ಷ್ಯದಿಂದ ಉಂಟಾಗುವ ಅನಾಹುತಗಳಿಂದ ಹೇಗೆಲ್ಲ ಪರಿತಪಿಸಬೇಕಾಗುತ್ತದೆ ಎಂಬುದನ್ನು “ಪಿಂಕಿ ಎಲ್ಲಿ?’ ಸಿನಿಮಾ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದು ಇಂತಹ ಸಾಮಾಜಿಕ ಕಳಕಳಿವುಳ್ಳ ಸಿನಿಮಾದ ಚಾರಟಿ ಶೋ ಏರ್ಪಡಿಸಿದ್ದ ಪಿಂಕಿ ಎಲ್ಲಿ? ಇನ್ಹರ್ ವ್ಹಿಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಡಿಸ್ಟ್ರಿಕ್ಟ್ 317 ಅಧ್ಯಕ್ಷೆ ಮಾಯಾ ಹೆಗಡೆ ಮತ್ತು ಸಂಸ್ಥೆ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು.
ಕಲಾವಿದರಾದ ಅಕ್ಷತಾ ಪಾಂಡವ ಪುರ, ದೀಪಕ್ ಸುಬ್ರಮಣ್ಯ, ಶೂನ್ಯ, ಗುಂಜಲಮ್ಮ, ಅನಸೂಯಮ್ಮ ಮೊದಲಾದವರು ಯಾವುದೇ ಆಡಂಭರವಿಲ್ಲದೆ ತಮ್ಮ ಸಹಜ ಅಭಿನಯದಿಂದ ಇಷ್ಟವಾಗುತ್ತಾರೆ.ಹುಬ್ಬಳ್ಳಿ:ಆಧುನಿಕ ಜಗತ್ತಿನ ಬೇಕು-ಬೇಡಗಳು, ಜಂಜಾಟ, ಸ್ವತಂತ್ರ ಮನೋಭಾವ ಪ್ರತಿಯೊಬ್ಬರ ಬದುಕಿಗೂ ಅವರದ್ದೇ ಆದ ದೃಷ್ಠಿಕೋನದಲ್ಲಿ ಒಂದೊಂದು ಅರ್ಥ ಕಲ್ಪಿಸಿಕೊಡುತ್ತವೆ. ಹಾಗಂತ ಇಲ್ಲಿ ಯಾರನ್ನೂ ವಹಿಸಿಕೊಳ್ಳಲಾಗದು, ಯಾರ ಪರವಾಗಿಯೂ ನಿಲ್ಲಲಾಗದು, ಯಾವುದನ್ನೂ ಜರಿಯಲೂ ಆಗದು. ಇಂಥ ಸಂದರ್ಭದಲ್ಲಿ ಕೆಲವೊಮ್ಮೆ ಅನಿರೀಕ್ಷಿತವಾಗಿ ಎದುರಾಗುವ ಪರಿಸ್ಥಿತಿ ಬದುಕನ್ನು ಹೇಗೆಲ್ಲ ಹೈರಾಣಾಗಿ ಸುತ್ತದೆ. ಅದಕ್ಕೆ ಸಾಮಾಜಿಕ ಮತ್ತು ಶ್ರೀಸಾಮಾನ್ಯನ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದೇ ಈ ವಾರ ತೆರೆಗೆ ಬಂದಿರುವ “ಪಿಂಕಿ ಎಲ್ಲಿ?’ ಸಿನಿಮಾದ ವಸ್ತು ವಿಷಯ.
ಇದೊಂದು ಸಾಮಾಜಿಕ ಕಳಕಳಿ ಹಾಗೂ ಕೌಟುಂಬಿಕ ಜೀವನದ ಸುತ್ತ ಗಿರಕಿ ಹೊಡೆಯುವ ಕಥೆವುಳ್ಳ ಸಿನಿಮಾ ಪಿಂಕಿ ಎಲ್ಲಿ? ಇನ್ಹರ್ ವ್ಹಿಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಡಿಸ್ಟ್ರಿಕ್ಟ್ 317 ದಿಂದ ಚಾರಟಿ ಶೋ ನಡೆಸಿಕೊಡಲಾಯಿತು.
ತಾಯಿಯ ಮಡಿಲಿನಲ್ಲಿ ಪ್ರೀತಿಯಿಂದ ಬೆಚ್ಚಗೆ ಬೆಳೆಯಬೇಕಾದ 8 ತಿಂಗಳ ಹೆಣ್ಣು ಮಗು ಪಿಂಕಿ, ತಂದೆ-ತಾಯಿ ಇದ್ದರೂ ಬೇರೊಬ್ಬರ ಜೋಳಿಗೆ ತುಂಬಿಸಲು ದುಡಿಯು ವ ಮಗುವಾಗುತ್ತದೆ. ಮನೆಯಿಂದ ಕಾಣೆಯಾಗುವ ಪಿಂಕಿಯ ಹುಡುಕಾಟದ ಸುತ್ತ “ಪಿಂಕಿ ಎಲ್ಲಿ?’ ಸಿನಿಮಾದ ಕಥಾಹಂದರ ಸಾಗಿದ್ದು ಇದೊಂದು ಯಾವುದೇ ಹಾಡು ಆಡಂಭರವಿಲ್ಲ ಚಿತ್ರ ಎನ್ನುತ್ತಾರೆ ನಾಯಕಿ ನಟಿ ಅಕ್ಷತಾ ಪಾಂಡವಪುರ.
ಪಿಂಕಿ ಎಲ್ಲಿ?’ ಸಿನಿಮಾದಲ್ಲಿ ಪಿಂಕಿ ಎಂಬ ಮಗು ಕೇವಲ ಸಾಂಕೇತಿಕವಷ್ಟೇ. ಪಿಂಕಿ ಕಳೆದು ಹೋದ ನಂತರ ಮಗುವಿನ ಹುಡುಕಾದ ನಡುವೆಯೇ ಅದರ ಪೋಷಕರ ಹಿನ್ನೆಲೆ ತೆರೆದುಕೊಳ್ಳುತ್ತದೆ. ಅಲ್ಲಿ ದಾಂಪತ್ಯ, ಮಾನವ ಸಂಬಂಧಗಳ ಹುಳುಕು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮಹಾನಗರಗಳಲ್ಲಿ ಬದುಕಿನ ಅನಿವಾರ್ಯತೆ ವಿರಾಟ್ ದರ್ಶನವಾಗುತ್ತದೆ. ಸ್ಲಂಗಳು, ಅಲ್ಲಿನ ಜನ ಜೀವನ, ಗೊಂದಲಮಯ ಬದುಕು ಮತ್ತು ಸಾಮಾಜಿಕ ಮನಸ್ಥಿತಿ, ಸ್ಥಿತಿಗತಿ ಎಲ್ಲವೂ ತೆರೆದು ಕೊಳ್ಳುತ್ತದೆ. ಮಗುವನ್ನು ಕಳೆದು ಕೊಂಡ ತಾಯಿಯೊಬ್ಬಳ ಒಡಲಾಳದ ನೋವು ಮತ್ತು ಅಸಹಾಯಕ ನಿಲವು ಅಲ್ಲಲ್ಲಿ ಕರುಣೆ ಹುಟ್ಟಿಸುತ್ತದೆ.
ಇನ್ನು ಆಕೆಯ ಪತಿ ಹಾಗೂ ಸ್ನೇಹಿತ ಎಂಬ ಎರಡು ಪಾತ್ರಗಳಿಗೆ ಎರಡು ಆಯಾಮಗಳಿವೆ. ಕೆಲವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ, ಅದನ್ನು ಮನಮುಟ್ಟುವಂತೆ ಚಿತ್ರರೂಪದಲ್ಲಿ ತೆರೆಮೇಲೆ ತರುವಲ್ಲಿ ನಿರ್ದೇಶಕ ಪೃಥ್ವಿ ಕೋಣನೂರು ಯಶಸ್ವಿಯಾಗಿದ್ದಾರೆ. ಬದುಕಿನ ಅನಿವಾರ್ಯತೆ ಯಲ್ಲಿ ಬೇಯುವ ಮನಸ್ಸುಗಳು ತಮ್ಮದೇ ನಿರ್ಲಕ್ಷ್ಯದಿಂದ ಉಂಟಾಗುವ ಅನಾಹುತಗಳಿಂದ ಹೇಗೆಲ್ಲ ಪರಿತಪಿಸಬೇಕಾಗುತ್ತದೆ ಎಂಬುದನ್ನು “ಪಿಂಕಿ ಎಲ್ಲಿ?’ ಸಿನಿಮಾ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದು ಇಂತಹ ಸಾಮಾಜಿಕ ಕಳಕಳಿವುಳ್ಳ ಸಿನಿಮಾದ ಚಾರಟಿ ಶೋ ಏರ್ಪಡಿಸಿದ್ದ ಪಿಂಕಿ ಎಲ್ಲಿ? ಇನ್ಹರ್ ವ್ಹಿಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಡಿಸ್ಟ್ರಿಕ್ಟ್ 317 ಅಧ್ಯಕ್ಷೆ ಮಾಯಾ ಹೆಗಡೆ ಮತ್ತು ಸಂಸ್ಥೆ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು.
ಕಲಾವಿದರಾದ ಅಕ್ಷತಾ ಪಾಂಡವ ಪುರ, ದೀಪಕ್ ಸುಬ್ರಮಣ್ಯ, ಶೂನ್ಯ, ಗುಂಜಲಮ್ಮ, ಅನಸೂಯಮ್ಮ ಮೊದಲಾದವರು ಯಾವುದೇ ಆಡಂಭರವಿಲ್ಲದೆ ತಮ್ಮ ಸಹಜ ಅಭಿನಯದಿಂದ ಇಷ್ಟವಾಗುತ್ತಾರೆ.