ಧಾರವಾಡ ಜಿಲ್ಲೆಯಲ್ಲಿ 6 ಕ್ಷೇತ್ರಗಳಲ್ಲಿ ಹುಬ್ಬಳಿ-ಧಾರವಾಡ ಸೆಂಟ್ರಲ್‌, ಕಲಘಟಗಿ ಗೌಪ್ಯ

Spread the love

ಧಾರವಾಡ: ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ 6 ಕ್ಷೇತ್ರದ ಅಭ್ಯರ್ಥಿಗಳಿಗೆ ಭಾರತೀಯ ಜನತಾ ಪಕ್ಷ ಟಿಕೆಟ್‌ ಘೋಷಿಸಲಾಗಿದ್ದು, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಪ್ರತಿನಿಧಿಸುವ ಸೆಂಟ್ರಲ್‌ ಕ್ಷೇತ್ರದ ಅಭ್ಯರ್ಥಿ ಹೆಸರು ಬಾಕಿ ಉಳಿಸಿಕೊಳ್ಳಲಾಗಿದೆ. ಜಗದೀಶ್ ಶೆಟ್ಟರ್ ಬಿಟ್ಟರೆ

ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್‌ ಶಾಸಕರು ಇರುವ ಕುಂದಗೋಳ ಹಾಗೂ ಹುಬ್ಬಳಿ, ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹುಬ್ಬಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದಾಗಲೂ ಆ ಕ್ಷೇತ್ರದ ಅಭ್ಯರ್ಥಿ ಹೆಸರು ಸೆಸ್ಪೆನ್ಸ್‌ ಇಡಲಾಗಿದೆ.

ಮೀಸಲು ಕ್ಷೇತ್ರಕ್ಕೆ ಖ್ಯಾತ ನರರೋಗ ತಜ್ಞ ಡಾ.ಕ್ರಾಂತಿಕಿರಣ

ಹುಬ್ಬಳಿ, ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಬಿಜೆಪಿ ಹಾಲಿ ಶಾಸಕ ಅರವಿಂದ ಬೆಲ್ಲದ, ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಹಾಲಿ ಶಾಸಕ ಅಮೃತ ದೇಸಾಯಿ ಹಾಗೂ ನವಲಗುಂದ ಕ್ಷೇತ್ರಕ್ಕೆ ಹಾಲಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಕಲಘಟಗಿ ವಿಧಾನ ಕ್ಷೇತ್ರಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ನಿಂದ ಬಂಡೆದ್ದು ಬಂದ ನಾಗರಾಜ ಛಬ್ಬಿ ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ. ಹುಬ್ಬಳಿ, ಧಾರವಾಡ ಪೂರ್ವ ಮೀಸಲು ಕ್ಷೇತ್ರಕ್ಕೆ ಖ್ಯಾತ ನರರೋಗ ತಜ್ಞ ಡಾ.ಕ್ರಾಂತಿಕಿರಣ ಹಾಗೂ ಕುಂದಗೋಳ ಕ್ಷೇತ್ರಕ್ಕೆ ಎಂ.ಆರ್‌.ಪಾಟೀಲ ಅವರ ಹೆಸರು ಅಂತಿಮಗೊಳಿಸಲಾಗಿದೆ. ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ, ಚಂದ್ರಶೇಖರ ಗೋಕಾಕ್‌ಗೆ ನಿರಾಸೆ

ಕುಂದಗೋಳ ಕ್ಷೇತ್ರಕ್ಕೆ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕೇವಲ 600 ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ಎಸ್‌.ಐ.ಚಿಕ್ಕನಗೌಡರ ಹಾಗೂ ಹುಬ್ಬಳಿ, ಧಾರವಾಡ ಪೂರ್ವ ಕ್ಷೇತ್ರಕ್ಕೆ ಈ ಹಿಂದೆ ಸ್ಪರ್ಧಿಸಿ ಸೋತಿದ್ದ ಚಂದ್ರಶೇಖರ ಗೋಕಾಕ್‌ ಅವರು ಈ ಬಾರಿಯೂ ಪ್ರಬಲ ಆಕಾಂ ಕ್ಷಿಗಳಾಗಿದ್ದರು. ಆದರೆ ಭಾರತೀಯ ಜನತಾ ಪಕ್ಷದ ಹೈಕಮಾಂಡ್‌ ಈ ಇಬ್ಬರಿಗೂ ಟಿಕೆಟ್‌ ನಿರಾಕರಣೆ ಮಾಡಿ ಹೊಸ ಆಕಾಂಕ್ಷಿಗಳಿಗೆ ಅವಕಾಶ ನೀಡಿರುವುದು ಸಹಜವಾಗಿ ಇತರೆ ಟಿಕೆಟ್‌ ಆಕಾಂಕ್ಷಿಗಳಲ್ಲಿ ಸಹಜವಾಗಿ ನಿರಾಸೆ ಮೂಡಿಸಿದೆ. ಅಮೃತ ದೇಸಾಯಿಗೆ ಮತ್ತೊಮ್ಮೆ ಅವಕಾಶ ಅದೇ ರೀತಿ ಪಶ್ಚಿಮ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಪಕ್ಷದ ಶಾಸಕರು ಇದ್ದಾಗಲೂ ಮೇಯರ್‌ ಈರೇಶ ಅಂಚಟಗೇರಿ ಕೂಡಾ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಬೇರಾವ ಹೆಸರುಗಳಿಗೆ ಮಾನ್ಯತೆ ನೀಡದೇ ಹಾಲಿ ಶಾಸಕರಿಗೆ ಹೈಕಮಾಂಡ್‌ ಮಣೆ ಹಾಕಿದೆ. ಇನ್ನೂ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕೂಡಾ ಹಾಲಿ ಶಾಸಕ ದೇಸಾಯಿ ಇದ್ದಾಗಲೂ ತವನಪ್ಪ ಅಷ್ಟಗಿ, ಸೀಮಾ ಮಸೂತಿ, ಸವಿತಾ ಅಮರ ಶೆಟ್ಟಿ ಹಾಗೂ ಬಸವರಾಜ ಕೊರವರ ಪಕ್ಷದ ಟಿಕೆಟ್‌ಗೆ ಪೈಪೋಟಿ ನಡೆಸಿದ್ದರು. ಅಲ್ಲದೇ, ಈ ಗುಂಪು ಹಾಲಿ ಶಾಸಕ ದೇಸಾಯಿ ವಿರುದ್ಧವೇ ಅಭಿಯಾನ ಆರಂಭಿಸಿದ್ದರು. ಆದರೆ ಇದಾವುದಕ್ಕೂ ಬಿಜೆಪಿ ಹೈಕಮಾಂಡ್‌ ತಲೆ ಕೆಡಿಸಿಕೊಳ್ಳದೇ ದೇಸಾಯಿ ಅವರಿಗೆ ಮತ್ತೊಮ್ಮೆ ಅಭ್ಯರ್ಥಿ ಆಗಲು ಅವಕಾಶ ನೀಡಿದೆ. ಈ ಕ್ಷೇತ್ರದಲ್ಲಿನ ಆಕಾಂಕ್ಷಿಗಳು ಚುನಾವಣಾ ಸಂದರ್ಭದಲ್ಲಿ ಹೈಕಮಾಂಡ್‌ ನಿರ್ಧಾರಕ್ಕೆ ತಲೆಬಾಗುವರೋ ಅಥವಾ ಬಂಡಾಯ ಅಭ್ಯರ್ಥಿಗಳಾಗುವರೋ ಎಂಬುದನ್ನು ಕಾದು ನೋಡಬೇಕಿದೆ.


Spread the love

About Karnataka Junction

    Check Also

    Best dating sites

    Spread the loveMany local newspapers had online personals in the mid 1990s but were bought …

    Leave a Reply