Breaking News

ಹುಬ್ಬಳ್ಳಿ ಎರೆಡೆತ್ತಿನ ಮಠ, ರುದ್ರಾಕ್ಷಿ ಮಠಕ್ಕೆ ಸಚಿವ ಪ್ರಹ್ಲಾದ ಜೋಶಿ ಭೇಟಿ

Spread the love

ಹುಬ್ಬಳ್ಳಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಹತ್ತು ವರ್ಷದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕುರಿತ *ರಿಪೋರ್ಟ್ ಕಾರ್ಡ್* ಬುಕ್ ಅನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರಿಗೆ ನೀಡಿ ಆಶೀರ್ವಾದ ಪಡೆದರು.

ಇಂದು ಹುಬ್ಬಳ್ಳಿಯ ಎರಡೆತ್ತಿನ ಮಠಕ್ಕೆ ಭೇಟಿ ನೀಡಿದ ಸಚಿವರು ಮೊದಲು ಗುರು ಸಿದ್ಧಲಿಂಗೇಶ್ವರ ಸ್ವಾಮಿಗಳ ಆಶೀರ್ವಾದ ಪಡೆದು ಬಳಿಕ ರುದ್ರಾಕ್ಷಿ ಮಠಕ್ಕೆ ತೆರಳಿ ಶ್ರೀ ಬಸವಲಿಂಗ ಮಹಾಸ್ವಾಮಿಗಳನ್ನು ಭೇಟಿಯಾದರು.

ಈ ವೇಳೆ ಕಳೆದ ಹತ್ತು ವರ್ಷದ ಅವಧಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಧಾರವಾಡ ಕ್ಷೇತ್ರದಲ್ಲಿ ವಿಮಾನ ನಿಲ್ದಾಣ ರೈಲ್ವೆ ಸ್ಟೇಶನ್, ಹೆದ್ದಾರಿ, ಕೈಗಾರಿಕಾ ಮೂಲ ಸೌಕರ್ಯ ಹೀಗೆ ಏನೇನು ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ ಎಂಬ ಬಗ್ಗೆ ಸವಿವರವಾಗಿ ಇರುವ ರಿಪೋರ್ಟ್ ಕಾರ್ಡ್ ಪುಸ್ತಕವನ್ನು ಶ್ರೀಗಳಿಗೆ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅಶೋಕ ಕಾಟವೆ, ಪ್ರಮುಖರಾದ ಯಮನೂರ ಜಾದವ, ಪ್ರಭು ನವಲಗುಂದ, ಬಸವರಾಜ್ ಅಮ್ಮಿನಬಾವಿ, ಅನೂಪ್ ಬಿಜವಾಡ, ಚನ್ನು ಹೊಸಮನಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.


Spread the love

About Karnataka Junction

    Check Also

    ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆ ವಿರೋಧಿಸಿ ಜೆಡಿಎಸ್ ಪ್ರತಿಭಟನೆ

    Spread the loveಹುಬ್ಬಳ್ಳಿ: ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆ ವಿರೋಧಿಸಿ ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ …

    Leave a Reply

    error: Content is protected !!