Breaking News

ಪ್ರಹ್ಲಾದ ಜೋಶಿಗೆ ಸ್ವಂತ ವಾಹನ ಇಲ್ಲ: ₹ 13.97 ಕೋಟಿ ಮೌಲ್ಯದ ಆಸ್ತಿ ಒಡೆಯ

Spread the love

ಹುಬ್ಬಳ್ಳಿ; ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಲ್ಹಾದ್ ಜೋಶಿ
2019ರ ಲೋಕಸಭಾ ಚುನಾವಣೆಯಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಒಟ್ಟು ಆಸ್ತಿ ಮೌಲ್ಯ ₹10.34 ಕೋಟಿ ಘೋಷಿಸಿಕೊಂಡಿದ್ದರು, ಈ ಸ್ಥಿರಾಸ್ತಿ ಮೌಲ್ಯ 8.09 ಕೋಟಿ ಇತ್ತು, ಈ ಬಾರಿ ಸ್ಥಿರಾಸ್ತಿ ಮೌಲ್ಯ ₹ 11.24 ಕೋಟಿ ಘೋಷಿಸಿಕೊಂಡಿದ್ದಾರೆ. ಕಳೆದ ಬಾರಿ ಪತ್ನಿ ಜ್ಯೋತಿ ಅವರ ಚರಾಸ್ತಿ ಮೌಲ್ಯ ₹ 27 ಲಕ್ಷ ಘೋಷಿಸಿಕೊಂಡಿದ್ದರು, ಈ ಬಾರಿ ₹5.93 ಕೋಟಿ ಘೋಷಿಸಿಕೊಂಡಿದ್ದಾರೆ. ಹಿಂದಿನ ಬಾರಿ ಜೋಶಿ ಅವರು ₹ 5.15 ಕೋಟಿ ಸಾಲ ಹಾಗೂ ಪತ್ನಿ ಹೆಸರಿನಲ್ಲಿ ₹2ಲಕ್ಷ ಸಾಲ ಘೋಷಿಸಿಕೊಂಡಿದ್ದರು.
ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಐದನೇ ಬಾರಿಗೆ ಸ್ಪರ್ಧಿಸಿರುವ ಸಚಿವ ಪ್ರಲಾದ ಜೋಶಿ ಅವರು ₹ 13.97 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಸತತ ನಾಲ್ಕು ಬಾರಿ ಆಯ್ಕೆಯಾಗಿರುವ ಅವರಿಗೆ ಸ್ವಂತ ವಾಹನ ಇಲ್ಲ. ಜೋಶಿ ಅವರ ಬಳಿ 184 ಗ್ರಾಂ ಚಿನ್ನ 5 ಕೆ.ಜಿ ಬೆಳ್ಳಿ, ಅವರ ಪತ್ನಿ ಬಳಿ 500 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ ಇದೆ. ಜೋಶಿ ಅವರ ಹೆಸರಿನಲ್ಲಿ ₹6.63 ಕೋಟಿ ಹಾಗೂ ಪತ್ನಿ ಹೆಸರಿನಲ್ಲಿ ₹1.37 ಕೋಟಿ ಸಾಲ ಇದೆ. ಪತ್ನಿ ಜ್ಯೋತಿ ಅವರ ಒಟ್ಟು ಆಸ್ತಿಯ ಮೌಲ್ಯ ₹ 6.80 ಕೋಟಿ ಎಂದು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿವರ ಘೋಷಿಸಿಕೊಂಡಿದ್ದಾರೆ.


Spread the love

About Karnataka Junction

[ajax_load_more]

Check Also

ರಾಜ್ಯ ಸರ್ಕಾರದಲ್ಲಿ ತುಷ್ಟೀಕರಣ ಮೀತಿಮೀರಿದೆ- ಶಾಸಕ ಮಹೇಶ್ ಟೆಂಗಿನಕಾಯಿ

Spread the loveಹುಬ್ಬಳ್ಳಿ:ಬೆಂಗಳೂರಿನಲ್ಲಿ ಹಸು ಕೆಚ್ಚಲು ಕೊಯ್ಲು ವಿಚಾರ ಅತ್ಯಂತ ಕ್ರೂರತನದಿಂದ ಕೂಡಿದ್ದು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ …

Leave a Reply

error: Content is protected !!