Breaking News

ನನ್ನ ಪ್ರತಿಸ್ಪರ್ಧಿ ಕಾಂಗ್ರೆಸ್; ಪ್ರಲ್ಹಾದ್ ಜೋಶಿ

Spread the love

ಹುಬ್ಬಳ್ಳಿ; ನಾನು ಇಂದು ಐದನೇ ಭಾರಿಗೆ ಆಯ್ಕೆ ಬಯಸಿ ಇಂಥ ಧಾರವಾಡದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಹೇಳಿದರು
ಧಾರವಾಡ ಲೋಕಸಭಾ ಚುನಾವಣಗೆ ಆಯ್ಕೆ ಬಯಸಿ ಇಂದು ನಾಮಪತ್ರ ಸಲ್ಲಿಸಲಿಸುವ ಮುನ್ನ ನಗರದ ವಿವಿಧ ಮಠಗಳಿಗೆ ಭೇಟಿ ದರ್ಶನ ಪಡೆದು ನಂತರ ಅವರು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ನಾನು
ಐದನೇ ಭಾರಿಗೆ ಆಯ್ಕೆ ಬಯಸಿ ಇಂದು ನಾಮಪತ್ರ ಸಲ್ಲಿಸಿದ್ದೇನೆ.
ಇವತ್ತಿನ ನಾಮಪತ್ರ ಮೆರವಣಿಗೆ ನನ್ನ ಹಿಂದಿನ ಚುನಾವಣೆಯ ಎಲ್ಲ ದಾಖಲೆ ಮುರಿಯುತ್ತದೆ.
ಇಂದಿನ ನಾಮಪತ್ರ ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ,ಜಗದೀಶ್ ಶೆಟ್ಟರ್,ಸ್ಥಳೀಯ ಶಾಸಕರು ಭಾಗಿಯಾಗಲಿದ್ದಾರೆ.
ಧಾರವಾಡದ ಶಿವಾಜಿ ಸರ್ಕಲ್ ನಿಂದ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಿದ್ದೇನೆ.
ಮೆರವಣಿಗೆಯಲ್ಲಿ ಸುಮಾರು 30 ಸಾವಿರ ಜನ ಸೇರಲಿದ್ದಾರೆ.
ಸ್ವಯಂ ಪ್ರೇರಿತವಾಗಿ ಜನ‌ ಸೇರಲಿದ್ದಾರೆ..
ನಾನು ನಾಮ ಪತ್ರ ಸಲ್ಲಿಸೋ ಮುನ್ನ ಮಠಕ್ಕೆ ಭೇಟಿ ಕೊಡೋದು ವಾಡಿಕೆ.
ಅದರಂತೆ ಇವತ್ತು ಕೂಡಾ ಮಠಕ್ಕೆ ಭೇಟಿ ಕೊಡ್ತೀನಿ ಎಂದ ಅವರು
ನನಗೆ ವಿಶ್ವಾಸ ಇದೆ,ಜ‌ನ ಆಶೀರ್ವಾದ ಮಾಡ್ತಾರೆ‌ ಎಂದರು.
ಮುಖಂಡರಾದ ಚೆನ್ನು ಹೊಸಮನಿ, ಗೋವಿಂದ ಜೋಶಿ ಮುಂತಾದವರಿದ್ದರು


Spread the love

About Karnataka Junction

    Check Also

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕಾವೇಂಶ್ರೀ ನೇತೃತ್ವದಲ್ಲಿ ಸನ್ಮಾನ

    Spread the loveಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕಾವೇಂಶ್ರೀ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ …

    Leave a Reply

    error: Content is protected !!