Breaking News

ನೇಹಾ ಪ್ರಕರಣ ‌ಮಾಸುವ ಮುನ್ನ ಮತ್ತೊಂದು ಪ್ರಕರಣ ಬೆಳಕಿಗೆ: ಅನ್ಯಕೋಮುನ‌ ಯುವಕನಿಂದ ಯುವತಿ ಮೇಲೆ ಹಲ್ಲೆ…

Spread the love

ಹುಬ್ಬಳ್ಳಿ :ನೇಹಾ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲು ಮತ್ತೊಂದು ಯುವತಿ ಮೇಲೆ
ಕ್ಷುಲಕ ವಿಚಾರಕ್ಕೆ ಯುವಕನೊರ್ವ ಹಲ್ಲೆ ಮಾಡಿದ ಘಟನೆ ಕೇಶ್ವಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಹಾಡುತ್ತಿದೆ.

ಇಲ್ಲಿನ ಪೂರ್ವ ಸಂಚಾರಿ ಪೋಲಿಸ್ ಠಾಣೆಯ ಮುಂಭಾಗದಲ್ಲಿನ ಹಣ್ಣಿನ ಅಂಗಡಿಗೆ ಬಂದಿದ್ದ ಸ್ನೇಹಾ (ಹೆಸರನ್ನು ಬದಲಾವಣೆ ಮಾಡಲಾಗಿದೆ) ಎಂಬ ಯುವತಿ ಕಣ್ಣು ಖರೀದಿಗೆ ಬಂದಿದ್ದ ವೇಳೆ ಅಫ್ತಾಬ್ ಎಂಬ ಯುವಕ ಅವಾಚ್ಯವಾಗಿ ನಿಂದಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿಗೆ ಕುಪಿತಗೊಂಡ ಯುವಕ ಹಲ್ಲೆಗೆ ಮುಂದಾಗಿದ್ದಾನೆ.‌ ಆಗ ಸ್ಥಳದಲ್ಲಿದ್ದ ಜನರು ಹಲ್ಲೇ ಮಾಡುತ್ತಿದ್ದ ಯುವಕನನ್ನು ಹಿಡಿದು ಹೊಡೆದಿದ್ದಾರೆ.

ಬಳಿಕ ಕೇಶ್ವಾಪುರ ಪೋಲಿಸ್ ಠಾಣೆಗೆ ವಿಷಯ ತಿಳಿಸಿ ಯುವತಿ ಹಾಗೂ ಯುವಕನನ್ನು ಕರೆದೊಯ್ದು, ದೂರು ದಾಖಲಿಸಿದ್ದಾರೆ.

ಇನ್ನೊಂದು ಕಡೆಗೆ ಯುವತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಾನು ಮತ್ತೆ ಅಫ್ತಾಬ್ ಸ್ನೇಹಿತರಾಗಿದ್ದೇವು, ಆ ಬಳಿಕ ಕಳೆದ ಕೆಲವು ದಿನಗಳ ಹಿಂದೆ ನಡೆದ ಸ್ನೇಹ ಪ್ರಕರಣವನ್ನು ನೋಡಿ ನಮ್ಮ ಸ್ನೇಹವನ್ನು ಅಂತ್ಯಗೊಳಿಸಲು ನಿರ್ಧಾರ ಮಾಡಿದ್ದೇವು. ಅದರಂತೆ ಅಫ್ತಾಬ್ ನೀಡಿದ ಗಿಫ್ಟ್’ಗಳನ್ನು ಕೊಟ್ಟು ವಾಪಾಸ್ ಬರುವಾಗ ಅಫ್ತಾಬ್ ಗಿಫ್ಟ್’ಗಳಿಗೆ ಬೆಂಕಿ ಹಚ್ಚಿ ಹಲ್ಲೆ ಮಾಡಿದ್ದಾನೆಂದು ತಿಳಿಸಿದ್ದಾರೆ.

ಈ ಕುರಿತಂತೆ ಸ್ಥಳದಲ್ಲಿ ಇದ್ದ ಪ್ರಕಾಶ ಕಂಪ್ಲಿ ಪ್ರತಿಕ್ರಿಯೆ ನೀಡಿದ್ದು, ನೇಹಾ ಕೇಸ್ ಆದಾಗಿನಿಂದಲೂ ನನ್ನ ಜೊತೆ ಸರಿಯಾಗಿ ಮಾತನಾಡುತ್ತಿಲ್ಲ. ಹೀಗಾಗಿ ಹಲ್ಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ. ‌ಆದ್ರೆ ಮರ್ಯಾದೆ ಪ್ರಶ್ನೆಯಿಂದ ಠಾಣೆಯಲ್ಲಿ ಹಣ್ಣು ತರಲು ಹೋದಾಗ ಅನುಚಿತವಾಗಿ ವರ್ತನೆ ಮಾಡಿದ್ದಾನೆ ಅಂತ ಪೊಲೀಸರಿಗೆ ದೂರು ದಾಖಲು ಮಾಡಿಕೊಳ್ಳಲಾಗಿದೆ. ಮೊನ್ನೆ ತಾನೆ ನೇಹಾ ಕೊಲೆಯಾಗಿದೆ. ಈಗ ನಡುರಸ್ತೆಯಲ್ಲಿ ಹಲ್ಲೆ ಮಾಡಿದಾತನ ಮೇಲೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸದ್ಯ ಪೋಲಿಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಇನ್ನಷ್ಟೇ ಘಟನೆಯ ಸತ್ಯಾಸತ್ಯತೆಯನ್ನು ತಿಳಿಸಬೇಕಿದೆ‌.


Spread the love

About Karnataka Junction

    Check Also

    ಇನ್ಫೋಸಿಸ್‌ ನಿರ್ಧಾರ ಸ್ವಾಗತಾರ್ಹಃ ಅರವಿಂದ ಬೆಲ್ಲದ

    Spread the loveಇನ್ಫೋಸಿಸ್‌ ನಿರ್ಧಾರ ಸ್ವಾಗತಾರ್ಹಃ ಅರವಿಂದ ಬೆಲ್ಲದ ಹುಬ್ಬಳ್ಳಿ: ಇನ್ಫೋಸಿಸ್‌ ಸಂಸ್ಥೆಯು ತನ್ನ ಹುಬ್ಬಳ್ಳಿ ಕೇಂದ್ರಕ್ಕೆ ಉದ್ಯೋಗಿಗಳನ್ನು ವರ್ಗಾಯಿಸಲು …

    Leave a Reply

    error: Content is protected !!