ಹುಬ್ಬಳ್ಳಿ,: ನಾನು ಮಹೇಶ್ ಟೆಂಗಿನಕಾಯಿ ಶಿಷ್ಯ, ಆ ಕಡೆ ಹೋಗಿದ್ದಕ್ಕೆ ಮಗಳನ್ನು ಕಳೆದುಕೊಂಡೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸೇರಿದ್ದಕ್ಕೆ ನಿರಂಜನ್ ಹಿರೇಮಠ ಶಾಸಕ ಯತ್ನಾಳ್ ಮುಂದೆ ಅಸಮಾಧಾನ ಹೊರಹಾಕಿದ್ದಾರೆ. ಕುಮ್ಮಕ್ಕು ಕೊಟ್ಟ ಕಾರಣಕ್ಕೆ ಮಗಳನ್ನು ಕಳೆದುಕೊಂಡೆ. ಇದರಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಯತ್ನಾಳ್ ಹೇಳಿದ್ದಾರೆ. ನಾನು ಸಾರ್ವಜನಿಕ ಬದುಕಿನಲ್ಲಿ ಇರೋನು. ನನಗೆ ಹೀಗೆ ಆದರೆ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ. ನಿಮ್ಮ ಪಕ್ಷದವರು ಯಾರೂ ಇದನ್ನು ಖಂಡನೆ ಮಾಡಲ್ಲ ಎಂದ ಯತ್ನಾಳ್ ಹೇಳಿದ್ದು, ನೀವೇ ಮನಸು ಮಾಡಿ ಎಂದು ಕೈಮುಗಿದು ನಿರಂಜನ್ ಕೇಳಿಕೊಂಡಿದ್ದಾರೆ.
ನೇಹಾಳನ್ನು ಕೊಲೆ ಮಾಡುತ್ತಿರುವ ಸಿಸಿಟಿವಿ ದೃಶ್ಯ ಯತ್ನಾಳ್‌ಗೆ ಜನರು ತೋರಿಸಿದರು. ಸ್ವಪಕ್ಷದವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಯತ್ನಾಳ್, ಶಿವಮೊಗ್ಗದಲ್ಲಿ ನಮ್ಮ ಸರ್ಕಾರ ಇದ್ದಾಗ ಏನು ಆಯ್ತು. ಅವರೆಲ್ಲ ದನಕಡಿಯೋರು ಎಂದು ವಾಗ್ದಾಳಿ ಮಾಡಿದ್ದರು. ಈ ವೇಳೆ ನೀವು ಸಿಎಂ ಆಗಿದರೆ ಏನೂ ಸಮಸ್ಯೆ ಬರ್ತಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ
