Breaking News

ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ 18 ಕೋಟಿ ಒಡೆಯ

Spread the love

ಧಾರವಾಡ: ಲೋಕಸಭಾ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಒಟ್ಟು ₹16.11 ಕೋಟಿ ಆಸ್ತಿ ಹೊಂದಿದ್ದಾರೆ.
ಅವರ ಹೆಸರಿನಲ್ಲಿ 11 ವಾಹನಗಳು (ಒಂಬತ್ತು ಟಿಪ್ಪ‌ರ್, ಹಿಟಾಚಿ, ಜೆಸಿಬಿ ಲೋಡರ್ ಮತ್ತು ಕಾರು ತಲಾ 1) ಇವೆ. ಸಾಲ ₹ 4.50 ಕೋಟಿ ಇದೆ. ವಿನೋದ್ ಅವರ ಬಳಿ ಚಿನ್ನ 350 ಗ್ರಾ ಇದ್ದರೆ, ಅವರ ಪತ್ನಿ ಬಳಿ 50 ಗ್ರಾಂ ಚಿನ್ನ ಇದೆ.
ಪತ್ನಿ ವಸುಂಧರಾ ಹೆಸರಿನಲ್ಲಿ ₹ 3.48 ಲಕ್ಷ ಮೌಲ್ಯದ ಚರಾಸ್ತಿ ಇದೆ ಎಂದು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿವರ ಘೋಷಿಸಿಕೊಂಡಿದ್ದಾರೆ.


Spread the love

About Karnataka Junction

    Check Also

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕಾವೇಂಶ್ರೀ ನೇತೃತ್ವದಲ್ಲಿ ಸನ್ಮಾನ

    Spread the loveಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕಾವೇಂಶ್ರೀ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ …

    Leave a Reply

    error: Content is protected !!