ಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿ ಅಧಿಕಾರವನ್ನು ನಡೆಸುತ್ತಾ ಬಂದಿದ್ದು ಪಕ್ಷವು ಬಹುಮತ ಹೊಂದಿದ್ದು, ಇತ್ತಿಚೆಗೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ನಮ್ಮ ಪಾಲಿಕೆ ಸದಸ್ಯರಿಗೆ ನಾನಾ ರೀತಿಯ ಆಸೆ-ಆಮಿಷಗಳನ್ನು ಒಡ್ಡಿ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಮೇಯರ-ಉಪಮೇಯರ್ ಮಾಡಲು ಪ್ರಯತ್ನಿಸಿದ್ದು, ಆ ಪಕ್ಷದ ಅತಿರಥ ಮಹಾರಥರಿಗೆ ತೀವ್ರ ಮುಖಭಂಗವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ರವಿ ನಾಯಕ ಹೇಳಿದ್ದಾರೆ. ನಮ್ಮ ಪರಮೋಚ್ಛ ನಾಯಕರು ಕೇಂದ್ರ ಸಚಿವರಾದ ಪ್ರಲ್ಹಾದ ಜೊಶಿ ಯವರ ನೇತೃತ್ವದಲ್ಲಿ ಶಾಸಕರಾದ ಶ್ರೀ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಹಾಗೂ ಪ್ರದೀಪ ಶೆಟ್ಟರ ಅವರ ಪರಿಶ್ರಮ ಮತ್ತು ಪಾಲಿಕೆ ಸದಸ್ಯರ ಒಗ್ಗಟ್ಟಿನಿಂದ ಇಂದು ಭಾರತೀಯ ಜನತಾ ಪಾರ್ಟಿ ಮತ್ತೆ ಪಾಲಿಕೆಯಲ್ಲಿ ಚುಕ್ಕಾಣಿ ಹಿಡಿದಿದ್ದು, ವಿಪಕ್ಷ ಕಾಂಗ್ರೇಸ್‌ಗೆ ತೀವ್ರ ಮುಖಭಂಗವಾಗಿದೆ. ಇನ್ನೂ ಮುಂದಾದರು ಇಂತಹ ದುಸ್ಸಾಹಸಕ್ಕೆ ಮುಂದಾಗಿ ಕೈಸುಟ್ಟುಕೊಳ್ಳಬೇಡಿ ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ರವಿ ನಾಯಕ ಹೇಳಿದ್ದಾರೆ.
ಹು-ಧಾ ಮಹಾನಗರ ಪಾಲಿಕೆಯ ನೂತನ ಮಹಾಪೌರರಾಗಿ ಆಯ್ಕೆಯಾದ ಶ್ರೀಮತಿ ವೀಣಾ ಬರದ್ವಾಡ ಹಾಗೂ ಉಪ ಮಹಾಪೌರರಾದ ಸತೀಶ ಹಾನಗಲ್ ಮತ್ತು ಪಾಲಿಕೆ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ವಂದನೆಗಳೊ0ದಿಗೆ,
ರವಿ ನಾಯಕ
ಜಿಲ್ಲಾ ವಕ್ತಾರರು