Breaking News

ಧಾರವಾಡ ಪ್ರತ್ಯೇಕ ಮಹಾಪಾಲಿಕೆಗೆ ಆಗ್ರಹಿಸಿ ಪ್ರತಿಭಟನೆ

Spread the love

ಹುಬ್ಬಳ್ಳಿ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂದು ಗುರುವಾರ ಧಾರವಾಡ- ಹುಬ್ಬಳ್ಳಿ ಮಹಾನಗರ ಸಮಗ್ರ ಅಭಿವೃದ್ಧಿ ಸಂಘ, ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಸಂಘ ಹಾಗೂ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಹೋರಾಟ ವೇದಿಕೆ ಕಾರ್ಯಕರ್ತರು ಜಂಟಿಯಾಗಿ ಮಹಾ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಸಾಮಾನ್ಯ ಸಭೆಯಲ್ಲಿ ಪಾಲಿಕೆ ಈ ಕುರಿತು ಸ್ಪಷ್ಟವಾದ ನಿರ್ಧಾರ ಮಾಡಬೇಕು,. ಜನಸಂಖ್ಯೆ ಆಧಾರದ ಮೇಲೆ ಪಾಲಿಕೆ ಮಾನ್ಯತೆ ನೀಡಬೇಕು. ಧಾರವಾಡ ಜಿಲ್ಲಾ ಕೇಂದ್ರ ಕೂಡ ಒಂದು ನಗರವೂ ಸುಮಾರು 60 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಶಾಲಾ ಕಾಲೇಜು, ವಿಶ್ವವಿದ್ಯಾಲಯ, ವಿವಿಧ ತರಬೇತಿ ಕೇಂದ್ರಗಳು, ಐಐಟಿ, ಐಐಐಇ, ಹೈಕೋರ್ಟ್ ಪೀಠ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಹಲವಾರು ಕೈಗಾರಿಕಾ ಕೇಂದ್ರಗಳು ಇವೆ. ಧಾರವಾಡಕ್ಕೆ ಈ ಎಲ್ಲ ಅಂಶಗಳನ್ನು ಆಧರಿಸಿ ಪ್ರತ್ಯೇಕ ಪಾಲಿಕೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಹೋರಾಟ ಸಮಿತಿಯ ಮುಖಂಡರಾದ
ಮನೋಜ್ ಪಾಟೀಲ, ರವಿಕುಮಾರ್ ಮಾಳಗೇರ್, ಎಂ.ಬಿ. ಕಟ್ಟಿ, ಕಮ್ಮಾರ್, ಶಂಕರಪ್ಪ ನೀರಾವರಿ, ಡಾ. ವೆಂಕನಗೌಡ ಪಾಟೀಲ ಇದ್ದರು.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!