Breaking News

ಅನರ್ಹ ಫಲಾನುಭವಿಗೆ ಹಣ ವರ್ಗಾವಣೆ ಪ್ರಕರಣಕ್ಕೆ ಕಾಗಕ್ಕಾ ಗುಬ್ಬಾಕ್ಕ ಕಥೆ

Spread the love

ಹುಬ್ಬಳ್ಳಿ- ಸರ್ಕಾರದ ಮಹತ್ವಾಕಾಂಕ್ಷೆಯ
ಯೋಜನೆಯೊಂದರಲ್ಲಿ ವ್ಯವಸ್ಥಿತವಾದ ಅವ್ಯವ್ಯಹಾರ ಹೇಗೆ ನಡೆಯುತ್ತದೆ ಮತ್ತು ಹೇಗೆ ಮುಚ್ಚಿ ಹಾಕಲು ಷಡ್ಯಂತ್ರ ನಡೆಯುತ್ತಿದೆ ಎಂಬುದಕ್ಕೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನಲ್ಲಿ ನಡೆದ ಪ್ರಕರಣವೇ ಸಾಕ್ಷಿ.
ನೆರೆವಹಾವಳಿಗೆ ಬಿದ್ದ ಮನೆಗೆ ಪರಿಹಾರ ನೀಡುವಲ್ಲಿ ಭಾರೀ ಭ್ರಷ್ಟಾಚಾರ ನಡೆದು ಹೋಗಿದ್ದು ಅದನ್ನು ಮುಚ್ಚಿ ಹಾಕಲು ಸರ್ಕರ್ಸ್ ಸಹ ಮಾಡಲಾಗಿದೆ.
ನೆರೆ ಹಾವಳಿಯ ಪರಿಹಾರ ಸಂತ್ರಸ್ಥರಿಗೆ ಖಾತೆಗೆ ಜಮಾ ಆಗಬೇಕಿದ್ದ ₹40 ಲಕ್ಷ 55 ಸಾವಿರ 200ರೂ. ಅರ್ಹ ಫಲಾನುವಿಗೆ ಸೇರಬೇಕಾಗಿದ್ದ
ಪರಿಹಾರವನ್ನು ಅಣ್ಣಿಗೇರಿ ತಹಶೀಲ್ದಾರ ಕಚೇರಿಯಲ್ಲಿ ಪ್ರೋಬಿಸನರಿ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ ಮುಧೋಳ ಎಂಬಾತ ತನ್ನ ತಾಯಿಯ ಹೆಸರಿನಲ್ಲಿ ಭದ್ರಾಪುರ ಮತ್ತು ನಾಗರಳ್ಳಿ ನಿವಾಸಿ ಹೆಸರಿನಲ್ಲಿ ₹40,55200 ಹಣವನ್ನ ಜಮಾ ಮಾಡಿದ್ದಾರೆ. ‌ಆದರೆ ಇಷ್ಟೊಂದು ಹಣ ಜಮಾ ಮಾಡುವಾಗ ತಹಸೀಲ್ದಾರ ಗಮನಕ್ಕೆ ಬರಲಿಲ್ವಾ. ಅದು ಪೆಬ್ರವರಿ
05/02/2022 ರಂದು 1760100 ಹಾಗೂ 05/06/2022 ರಂದು 2295100 ಸೇರಿ ಒಟ್ಟು 4055200 ಜಮಾ ಅಗಿದ್ದು ಇಷ್ಟು ದಿನಗಳ ಕಾಲ ಗೊತ್ತಾಗಲಿಲಿಲ್ವಾ ಅಂತಾ. ಮಂಜುನಾಥ ಮುಧೋಳ ತಹಶಿಲ್ದಾರ ಸಹಿ ಪೂರ್ಜರಿ ಮಾಡಿದ್ದರು ಸಹ ಒಂದು ಸಲ ಮಾಡಬಹುದು ಅದು ಎರಡೇಡರಲು ಸಲ ಮಾಡಲು ಹೇಗೆ ಸಾಧ್ಯ. ಇದರಲ್ಲಿ ವ್ಯವಸ್ಥಿತವಾದ ಕಾಣದ ಕೈಗಳ ಜೊತೆಗೆ ಜಾಣ ಕುರುಡುನಂತೆ ವರ್ತನೆ ಮಾಡುವವರ ಹಸ್ತಕ್ಷೇಪ ಇದೆ ಎಂಬುದು ಸ್ಪಷ್ಟ.
ನಾಪತ್ತೆಯಾದ ಮಂಜುನಾಥ ಮುಧೋಳನಿಂದ ಮರಳಿ ಖಾತೆಗೆ ಹಣ ಹೇಗೆ ಇಷ್ಟು ಬೇಗ ಜಮಾ ಮಾಡಲು ಸಾಧ್ಯ ಎಂಬುದು ಸಹ ಇಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
*ತಹಶಿಲ್ದಾರ ಮಂಜುನಾಥ ಅಮಾವಾಸ್ಯೆ ಮಾಧ್ಯಮಕ್ಕೆ ಹೇಳಿಕೆ ನೀಡುವ ಅಧಿಕಾರ ಇದಿಯಾ*
ಇಡೀ ಪ್ರಕರಣ ಕೆಣಕುತ್ತಾ ಹೋದರೆ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಡುತ್ತಿದೆ. ಇಲ್ಲಿ ಪ್ರಕರಣದಲ್ಲಿ ಬಹು ಮುಖ್ಯ ಪಾತ್ರ ಸಹ ತಹಶಿಲ್ದಾರ ಮಂಜುನಾಥ ಅಮವಾಸ್ಯೆ ಅವರದು ಇದೆ. ಘಟನೆ ಆಗಿ ಇಷ್ಟು ದಿನಗಳ ಕಾಲ ಏಕೆ ಬಿಟ್ಟರು, ಮತ್ತು ತಮ್ಮ ಕಚೇರಿ ಸಿಬ್ಬಂದಿಯೇ ನಕಲಿ ಸಹಿ ಮಾಡಿದ್ದಾರೆ ಎಂದರೆ ಇದರಂತೆ ಇನ್ನು ಎಷ್ಟು ಪ್ರಕರಣಗಳು ಹೀಗೆ ನಡೆದಿರಬಹುದು ಎಂಬ ಅನುಮಾನ ಕಾಡದೇ ಇರದು. ಅಲ್ಲದೇ ತಹಸೀಲ್ದಾರ ಅವರೇ ಸಹ ಈ ಭ್ರಷ್ಟಾಚಾರದ ಹೊಣೆ ಹೊರಬೇಕಾಗುತ್ತದೆ ಒಂದು ದೂರು ಕೊಟ್ಟು ಹಣ ಮರಳಿ ಖಾತೆಗೆ ಜಮಾ ಆಯಿತು ಎಂದರೆ ಇದನ್ನು ಆಡಳಿತವೈಖರಿನಾ ಎಂಬ ಪ್ರಶ್ನೆ ಸಹಜವಾಗಿಯೇ ಇದೆ.
ಕರ್ನಾಟಕ ನಾಗರಿಕ ನಿಯಮ ಅನ್ವಯ ಮಾಧ್ಯಮಗಳಿಗೆ ತಹಶಿಲ್ದಾರರ ಇಲೆಕ್ಟ್ರಾನಿಕ್ ಮಾಧ್ಯಮಗಳಿಗೆ ( ಬೈಟ್ ) ಹೇಳಿಕೆ ನೀಡಬಹುದಾ ಎಂಬುದು ಸಹ ಇಲ್ಲ ಗಮನಿಸಿ ಬೇಕಾದ ಅಂಶವಾಗಿದೆ.
ಇನ್ನು ಇದೇ ಅವ್ಯವ್ಯಹಾರಕ್ಕೆ ಸಂಬಂಧಿಸಿದಂತೆ ಅದೇ ತಹಶಿಲ್ದಾರ ಕಚೇರಿ ಸಿಬ್ಬಂದಿಯೊಬ್ಬರು ಜೂ. 23 ರಂದು ಮುಖ್ಯಮಂತ್ರಿಗಳಿಗೆ ಇಮೇಲ್ ಮೂಲಕ ಗಮನಕ್ಕೆ ಸಹ ತಂದಿದ್ದು ಮುಖ್ಯಮಂತ್ರಿಗಳಿಂದಲೇ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿಗೆ ರವಾನೆ ಮಾಡಲಾಗಿದೆ. ಇಂತಹ ಸಂದರ್ಭ ಕಾಗಕ್ಕ ಕುಬ್ಬಕ್ಕ ಕಥೆ ಕಟ್ಟಿ ಇಡೀ ಪ್ರಕರಣಕ್ಕೆ ಎಳ್ಳು ನೀರು ಹಾಕುವ ಮೊದಲು ಗಂಭೀರವಾಗಿ ತನಿಖೆ ನಡೆದರೆ ಸತ್ಯಾಸತ್ಯತ ತಿಳಿಯುತ್ತದೆ.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!