ಹುಬ್ಬಳ್ಳಿ; ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 4ನೇ ಬಾರಿಗೆ ಸರಕಾರವು ಕೊಟ್ಟಿರುವ ಮಾತನಂತೆ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಪಂಚ ಹಂತದ ಚಳುವಳಿಯ ಅಂಗವಾಗಿ ಧಾರವಾಡ ಜಿಲ್ಲೆ ಜಿಲ್ಲಾಧಿಕಾರಿಗಳ ಕಚೇರಿಮುಂದೆ ಒಂದು ದಿನದ ಸತ್ಯಾಗ್ರಹ ಕೈ ಕೊಳ್ಳುವ ಸಲುವಾಗಿ ಪೂರ್ವ ಬಾವಿ ಸಭೆಯನ್ನು ಜೂ. 30 ರಂದು ಗುರುವಾರ ಬೆಳಿಗ್ಗೆ 11ಘಂಟೆಗೆ ಹುಬ್ಬಳ್ಳಿಯಗೋಕುಲ್ ರೋಡನಲ್ಲಿರುವ ಹೋಟೆಲ್ ಕ್ಯೂಬಿಕ್ ಈಲ್ಲಿ ಸಭೆ ಆಯೋಜಿಸಲಾಗಿದೆ . ಈ ಕುರಿತು ಸಮಾಜದ ಮುಖಂಡ ನಾಗನಗೌಡರ ಪಾಟೀಲ್ ಪತ್ರಿಕಾ ಹೇಳಿಕೆ ನೀಡಿದ್ದು,
ಸದರಿಸಭೆಗೆ ಪಾದಯಾತ್ರೆಯ ಪ್ರವರ್ಥಕ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿಗಳು ಸಾನಿಧ್ಯವಹಿಸುವರು. ಹಾಗೂ ಜಿಲ್ಲೆಯ ನಮ್ಮ ಸಮಾಜದ ಗಣ್ಯಾತಿ ಗಣ್ಯರು ಉಪಸ್ಥಿತ ರಿರುವರು ಆದಕಾರಣ ಧಾರವಾಡ ಜಿಲ್ಲೆಯ ಪಂಚಮಸಾಲಿ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆ ಸೂಚನೆ ನೀಡಬೇಕೆಂದು ವಿನಂತಿಸಿದ್ದಾರೆ.
