Breaking News

ನವಲಗುಂದ ಪಟ್ಟಣದ ಬಾವಿಯಲ್ಲಿ ಸಿಕ್ಕ ಮೃತ ದೇಹ, ಸ್ಥಳಕ್ಕೆ ಭೇಟಿ ನೀಡಿದ ಪೋಲೀಸರು

Spread the love

ನವಲಗುಂದ : ಪಟ್ಟಣದ ಗುಡ್ಡದಕೇರಿ ಓಣಿಯ ಬಳಿ ಬಾವಿಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.
ಮೃತನನ್ನು ನವಲಗುಂದ ಪಟ್ಟಣದ ಭೋವಿ ಓಣಿಯ ನಿವಾಸಿಯಾದ 52 ವರ್ಷ ವಯಸ್ಸಿನ ನಾಗಪ್ಪ ಯಮನಪ್ಪ ಭೋವಿ ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆಯೇ ವ್ಯಕ್ತಿ ಬಾವಿಯಲ್ಲಿ ಮೃತ ಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಎಎಸ್ಐ ವೈ.ಎಸ್ ಮೇಟಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


Spread the love

About Karnataka Junction

[ajax_load_more]

Check Also

ಭವಾನಿಮಠ ಬಂಧನ

Spread the loveಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಬಯ್ಯ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬರು, ಶಾಸಕ ಹಾಗೂ ಅವರ …

Leave a Reply

error: Content is protected !!