Breaking News

ಕತ್ತು ಹಿಸುಕಿ ಪತಿ ಕೊಲೆ ಮಾಡಲು ಯತ್ನ ಆರೋಪ

Spread the love

ಹುಬ್ಬಳ್ಳಿ: ತನ್ನ ಮೇಲೆ ದೌರ್ಜನ್ಯ ಎಸಗಿದಲ್ಲದೇ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹು – ಧಾ ಮಹಾನಗರ ಪಾಲಿಕೆ ಸದಸ್ಯೆ ಶ್ರುತಿ ಚಲವಾದಿ ತನ್ನ ಪತಿ ಸಂತೋಷ ವಿರುದ್ಧ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ‌.
ಪರಸ್ತ್ರಿಯೊಂದಿಗೆ ನನ್ನ ಪತಿ ಸಂತೋಷ್​ ಮೊಬೈಲ್‌ನಲ್ಲಿ ಮಾತನಾಡುವುದು ಮತ್ತು ಮೆಸೇಜ್​​ ಮಾಡುವುದನ್ನು ಮಾಡುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರ ಮಧ್ಯೆ ಹಲವಾರು ಬಾರಿ ವಾಗ್ವಾದ ಏರ್ಪಟ್ಟಿದೆ. ಈ ಜಗಳ ಅತೀರೇಕಕ್ಕೆ ತಲುಪಿದಾಗ ನಾನು ಗರ್ಭಿಣಿಯೆಂದು ಲೆಕ್ಕಿಸದೇ ಪತಿ ನನ್ನ ಹಲ್ಲೆ ನಡಸಿದ್ದಾರೆ. ಈಗಾಗಲೇ ಪರಸ್ತ್ರಿಯೊಂದಿಗೆ ಸಂಬಂಧವಿದ್ದು, ನನಗೆ ವಿಚ್ಛೇದನ ನೀಡಿ ಮದುವೆಯಾಗುತ್ತೇನೆ ಎಂದು ಹೇಳುತ್ತಿರುತ್ತಾರೆ.
ಹುಬ್ಬಳ್ಳಿಯಲ್ಲಿ ಪತಿ ವಿರುದ್ಧ ಕಾರ್ಪೊರೇಟರ್ ದೂರು, ಹುಬ್ಬಳ್ಳಿಯಲ್ಲಿ ಕಾರ್ಪೊರೇಟರ್‌ಗಳ ಮೇಲೆ ಕೊಲೆ ಯತ್ನ, ಹುಬ್ಬಳ್ಳಿ ಅಪರಾಧ ಸುದ್ದಿ,ಪತಿ ವಿರುದ್ಧ ದೂರು ನೀಡಿದ ಮಹಾನಗರ ಪಾಲಿಕೆ ಸದಸ್ಯೆನೀನು ಮನೆ ಬಿಟ್ಟು ಹೋಗು ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ನಿನ್ನನ್ನು ಮತ್ತು ನಿಮ್ಮ ಅಣ್ಣನನ್ನು ಹುಡುಗರನ್ನು ಕರೆಯಿಸಿ ಕೊಲೆ ಮಾಡಿಸುತ್ತೇನೆಂದು ಬೆದರಿಕೆ ಹಾಕಿ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದರು ಎಂದು ಶ್ರುತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶ್ರುತಿ ಅವರ ದೂರಿನ ಮೇಲೆ ಕೇಶ್ವಾಪುರ ಠಾಣೆ ಪೊಲೀಸರು ಸಂತೋಷನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಸಂತೋಷ್ ಚಲವಾದಿ ಕೇಶ್ವಾಪುರದ ವಿನಯ ಪಿಳ್ಳೆ ಮತ್ತು ಕುಮಾರ ಪಿಳ್ಳೆ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ. ಇತ್ತೀಚೆಗಷ್ಟೇ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗೆ ಬಂದಿದ್ದ. ಈಗ ಮತ್ತೆ ಜೈಲು ಪಾಲಾಗಿದ್ದಾನೆ.


Spread the love

About Karnataka Junction

[ajax_load_more]

Check Also

ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.

Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …

Leave a Reply

error: Content is protected !!