Breaking News

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರವಾರ ರಸ್ತೆಗೆ ಸಂಪರ್ಕಿಸುವ ನೇರ ರಸ್ತೆ ನಿರ್ಮಾಣವಾಗಲಿ

Spread the love

ಹುಬ್ಬಳ್ಳಿ; ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ ವಾಣಿಜ್ಯ ನಗರದ ವಿಮಾನ ನಿಲ್ದಾಣಕ್ಕೆ ಅತ್ಯಂತ ಕಡಿಮೆ ಸಮಯದಲ್ಲಿ ಸಂಪರ್ಕಿಸುವ ರಸ್ತೆ ನಿರ್ಮಾಣವಾದರೆ ಬೃಹದಾಕಾರವಾಗಿ ಬೆಳೆಯುತ್ತಿರುವ ಮಹಾ ನಗರದ ರಸ್ತೆಗಳಲ್ಲಿ ಚಲಿಸುವ ವಾಹನ ಸವಾರರಿಗೆ ಅತ್ಯಂತ ಸಂತಸ ನೀಡಿದಂತಾಗುತ್ತದೆ . ಈಗಾಗಲೇ ಮಹಾನಗರದ ಪ್ರತಿಷ್ಠಿತ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿರುವುದು ನಾವು ಪ್ರತಿನಿತ್ಯ ನೋಡುತ್ತಲೇ ಇದ್ದೇವೆ. ಇದರ ಹಿಂದೆ ಸಂಚಾರಿ (ಟ್ರಾಫಿಕ್) ಪೊಲೀಸ್ ಇಲಾಖೆಯವರು ಜನದಟ್ಟಣೆ ಸಂಚಾರ ವ್ಯವಸ್ಥೆ ನಿವಾರಿಸಲು ಪೊಲೀಸರು ಸಾಕಷ್ಟು ಹೆಣಗಾಡುತ್ತಿರುವುದು ನಾವು ಗಮನಿಸುತ್ತಿದ್ದೇವೆ. ಒಟ್ಟಾರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಥವಾ ವಿಮಾನ ನಿಲ್ದಾಣಕ್ಕೆ ಅಥವಾ ಗೋಕುಲ್ ರಸ್ತೆ ಎಡಬಾಗ ಮತ್ತು ಬಲಭಾಗಕ್ಕೆ ಹೊಂದಿರುವ ಎಲ್ಲ ನಗರಗಳಿಗೂ ರಸ್ತೆ ಸಂಪರ್ಕ ಮಾಡಿದಂತಾಗುತ್ತದೆ. ಈ ಭಾಗದ ಎಲ್ಲ ಪ್ರಮುಖ ನಗರಕ್ಕೆ ಹೋಗುವ ಬರುವ ಸಾರ್ವಜನಿಕರಿಗೂ ಕಡಿಮೆ ಸಮಯದಲ್ಲಿ ಹೊರಗಿನ ರಸ್ತೆಯಿಂದ ತಮ್ಮ ತಮ್ಮ ನಗರಗಳಿಗೆ ಹೋಗುವ ರಸ್ತೆ ಇದಾಗಲಿದೆ ಎಂದು ಹಿರಿಯ ಸಮಾಜ ಚಿಂತಕರು ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ.
ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಿಂದ ನೇರವಾಗಿ ಕಾರವಾರ ರೋಡ್ ರಾಷ್ಟ್ರೀಯ ಹೆದ್ದಾರಿಗೆ ಕೂಡುವಂತೆ “ನ್ಯಾಷನಲ್ ಹೈವೇ ಆಫ್ ಇಂಡಿಯಾ” ಇವರು ರಚಿಸುತ್ತಿರುವ ಗಬ್ಬೂರು-ನರೇಂದ್ರ (ಹುಬ್ಬಳ್ಳಿಯ ಪುನಾ ಬೆಂಗಳೂರು ನ್ಯಾಷನಲ್ ಹೈವೇ ಬೈಪಾಸ್) ದಲ್ಲಿ ಹೊಸದಾಗಿ ಈ ಕೂಡುರಸ್ತೆ ರಚಿತ ಗೊಂಡಲ್ಲಿ ನೇರವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರವಾರ ಕಡೆಗೆ ಹೋಗುವ ಬೆಂಗಳೂರು ಕಡೆಗೆ ಹೋಗುವ ಸಾರಿಗೆ ಸಂಚಾರ ಬಸ್ಸುಗಳು ಮತ್ತು ಲಾರಿಗಳು ಭಾರೀ ವಾಹನಗಳು ಅಲ್ಲದೆ ವಿವಿಧ ತರಹದ ಎಲ್ಲಾ ವಾಹನಗಳು ಸಂಚಾರ ಮಾಡಬಹುದು. ಇದಕ್ಕಾಗಿ ಕಾರವಾರ ರಸ್ತೆಯಲ್ಲಿ ಅಂಚಟಗೇರಿ ಗ್ರಾಮದ ಹತ್ತಿರ “ವಾಹನಗಳ ಟೋಲ್ ನಾಕಾ” ಸ್ಥಳವನ್ನು ಹೊಸದಾಗಿ ರಚಿಸಿ ಮತ್ತು ಹತ್ತು ಲೈನ್ ಗಳ ರಾಷ್ಟ್ರೀಯ ಹೆದ್ದಾರಿಯನ್ನು ಕಾರವಾರ್ ರಸ್ತೆಯಿಂದ ಬೈಪಾಸ್ ಲೈನಿನಲ್ಲಿ ಇರುವ ರಾಯನಾಳ ಗ್ರಾಮದಲ್ಲಿ ಬರುವ “ಪಾಮ್ ವಿಡೋಸ್” (ಮಿಡ್ ಮ್ಯಾಕ್ ಲೇಔಟ್) ಕ್ರಾಸ್ ನಲ್ಲಿ ಕೊಡುವಂತೆ ರಚಿಸಬೇಕು . ಇದಕ್ಕೆ ಬೇಕಾಗುವ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡು ಯೋಜನೆ ಕೈಗೊಂಡಲ್ಲಿ ಮುಂಬರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಅನುಕೂಲವಾಗಿ ಮುಂಬರುವ ದಿನಗಳಲ್ಲಿ ಹುಬ್ಬಳ್ಳಿ ಮಹಾನಗರಕ್ಕೆ ಸುಗಮ ಸಾರಿಗೆ ಸಂಚಾರಕ್ಕೆ ಅನುಕೂಲವಾಗುವುದು ಇದಲ್ಲದೆ ಪ್ರಮುಖವಾಗಿ ಹುಬ್ಬಳ್ಳಿ ತಾಲ್ಲೂಕಿನ ದೇವರ ಹುಬ್ಬಳ್ಳಿ, ಪರಸಾಪುರ, ಗಂಗಿವಾಳ, ಗೋಕುಲ್, ಅಗ್ರಹಾರ ತಿಮ್ಮಸಾಗರ, ಅಜ್ಜಾಪುರ್, ಕೊಟಗೊಂಡ ಗುಣಿಸಿ, ಅಯೋಧ್ಯಾ (ಅ ಹೋಬಳಾಪುರ) ಗಬ್ಬೂರು ಹಾಗೂ ಇನ್ನೂ ಅನೇಕ ಗ್ರಾಮೀಣ ಪ್ರದೇಶಗಳು ಹುಬ್ಬಳ್ಳಿಯ ಮಹಾನಗರದ ಪಾಲಿಕೆ ವ್ಯಾಪ್ತಿಯಲ್ಲಿ ಬಂದರೆ ಎಲ್ಲ ಹಳ್ಳಿಗಳು ಮಹಾನಗರದ ವ್ಯಾಪ್ತಿಗೆ ಸೇರ್ಪಡೆಯಾದರೆ. ಈ ಮಹಾನಗರವು ಬೃಹತ್ ಮಹಾನಗರ ವಾಗುವುದರಲ್ಲಿ ಯಾವುದೇ ಸಂದೇಹವೇ ಬೇಡ ಹಾಗೂ ಸುತ್ತಮುತ್ತಲಿನ ಅನೇಕ ಹಳ್ಳಿಗಳು ಸಹ ನಗರ ಪ್ರದೇಶಗಳಾಗಿ ಬೆಳೆಯಬಹುದಾಗಿದೆ ಈ ಮೇಲಿನ ವಿಷಯವನ್ನು ಕೇಂದ್ರ ಭೂಸಾರಿಗೆ ಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಸ್ಥಳೀಯ ಜನ ಪ್ರತಿನಿಧಿಗಳು ಮಹಾನಗರಪಾಲಿಕೆ ಸದಸ್ಯರು ಎಲ್ಲರೂ ಸೇರಿಕೊಂಡು ಯೋಚಿಸಬೇಕು. ಮುಖ್ಯವಾಗಿ ಧಾರವಾಡ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಆಗಿರು ಹಾಲಪ್ಪ ಆಚಾರ್ ಅವರು ಮನಸ್ಸು ಮಾಡಬೇಕೆನ್ನುವುದು ಮಹಾನಗರದ ಕೆಲವೊಂದು ಪ್ರಜ್ಞಾವಂತರ ಹೇಳಿಕೆಯು ಆಗಿದೆ ಈ ನಿಟ್ಟಿನಲ್ಲಿ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿಯವರು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವುದರ ಮೂಲಕ ಈ ಯೋಜನೆ ಜಾರಿಗೆ ತರಲು ಪ್ರಯತ್ನಿಸಬೇಕು. ಹಾಗೂ ಸ್ಥಳೀಯ ಧೀಮಂತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇವರು ಸಹ ಹೆಚ್ಚಿನ ಆಸಕ್ತಿ ವಹಿಸಬೇಕು ಜೊತೆಗೆ ಸಿಎಂ ಬೊಮ್ಮಾಯಿಯವರಿಗೆ ಮನವರಿಕೆ ಮಾಡಬೇಕೆಂದು ಪ್ರಜ್ಞಾವಂತ ನಾಗರೀಕರು ಹಾಗೂ ಹಿರಿಯ ಚಿಂತಕರಾದ ಕನಕರಾಯ ಪೂಜಾರ ಸಹ ಜಗದೀಶ ಶೆಟ್ಟರ್ ಅವರಲ್ಲಿ ಕೇಳಿಕೊಂಡಿದ್ದಾರೆ.
================
ಬಾಕ್ಸ್ ಸುದ್ದಿ
==============
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಮಾನ್ಯ ಹಾಲಪ್ಪ ಆಚಾರ್ ಅವರು ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾದ ದಿನಗಳಿಂದಲೂ ಇಲಾಖೆಯ ಅಧಿಕಾರಿಗಳು ಅತ್ಯಂತ ಚುರುಕಿನಿಂದ ಕಾರ್ಯ ಮಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಸ್ಪಂದನೆ ಸಿಗುತ್ತಿದೆ ಎಂದು ಹಿರಿಯ ಸಮಾಜಸೇವಕರಾದ ಕನಕರಾಯ ಪೂಜಾರ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರವಾರ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಕೂಡುವ ರಸ್ತೆಗೆ ರಸ್ತೆ ಸಂಪರ್ಕ ಮಾಡಲು ಉಸ್ತುವಾರಿ ಸಚಿವರು ಈ ಕೂಡಲೇ ಮುಂದಾಗಬೇಕೆಂದು ಕನಕರಾಯ ಪೂಜಾರ ಆಗ್ರಹಿಸಿದ್ದಾರೆ. ಜೊತೆಗೆ ಸ್ವತಃ ತಾವೇ ತಯಾರಿಸಿದ ಉತ್ತಮ ನಕಾಶೆಯನ್ನು ತಯಾರಿಸಿ ಮಂತ್ರಿ ಮಹೋದಯರು. ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!