Breaking News

ವಿವಿಧೆಡೆ ದಲಿತರ ಮೇಲೆ ದೌರ್ಜನ್ಯ – ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಸಿಎಂ ಮನವಿ

Spread the love

ವಿವಿಧೆಡೆ ದಲಿತರ ಮೇಲೆ ದೌರ್ಜನ್ಯ – ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಸಿಎಂ ಮನವಿ

ಹುಬ್ಬಳ್ಳಿ; ರಾಜ್ಯದ ವಿವಿಧ ಕಡೆಗಳಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಕೂಡಲೇ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ
ದಲಿತ ವಿಮೋಚನಾ ಸಮಿತಿ ಪದಾಧಿಕಾರಿಗಳು ಹುಬ್ಬಳ್ಳಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು .
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ
ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರೋಪಸರ್ ಮೇಲೆ ಸುವರ್ಣಿಯ ಪ್ರಿನ್ಸಿಪಾಲ್ ದೌರ್ಜನ್ಯ ಎಸಗಿ ಕಿರುಕುಳ ಕೊಡುತಿದ್ದಾರೆ. ಈಗಾಗಲೇ ಪ್ರಿನ್ಸಿಪಾಲ್ ಮೇಲೆ ದೂರು ನೀಡಿದರು ಏನು ಪ್ರಯೋಜನವಾಗಿಲ್ಲ. ಇನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸವರ್ಣೀಯರು ದಲಿತರಿಗೆ ಸಗಣಿ ತಿನ್ನಿಸುವ ಮೂಲಕ ಅನ್ಯಾಯ ಮಾಡಿದ್ದಾರೆ. ಅಲ್ಲಿಯೂ ಸಹ ತಪ್ಪು ಮಾಡಿದವರ ಮೇಲೆ ಕ್ರಮವಾಗಿಲ್ಲ. ಇನ್ನು ಸಿಂಧನೂರು ತಾಲುಕಿನ ಬಂಗಾರಿ ಕ್ಯಾಂಪ್ ಸುಖಾಪೇಟೆಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಗಣಿ ಎರಚಿ ಅಪಮಾನ ಮಾಡಿದ್ದಾರೆ. ಆದ್ದರಿಂದ ಈ ಮೂರು ಪ್ರಕರಣಗಳನ್ನ ಸರ್ಕಾರ ಹಾಗೂ ಆಯಾ ಜಿಲ್ಲಾಡಳಿತ ಗಂಭೀರವಾಗಿ ಪರಗಣಿಸಿ ತಪ್ಪಿತಸ್ಥರ ಮೇಲೆ ಕ್ರಮ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ದಲಿತರ ಮೇಲೆ ಮೇಲಿಂದ ಮೇಲೆ ಹಲ್ಲೆಯಂತಹ
ಘಟನೆಗಳು ಮೇಲಿಂದ ಮೇಲೆ ಘಟನೆಗಳು ಜರುಗುತ್ತವೆ ಇದರಿಂದಾಗಿ ದಲಿತರಿಗೆ ರಕ್ಷಣೆ ಇಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ದಲಿತ ವಿಮೋಚನ ಸಮಿತಿಗೌರವಾಧ್ಯಕ್ಷರಾದ ಶ್ರೀಧರ ಕಂದಗಲ್, ಮಲ್ಲಮ್ಮನವರ್, ಓಂಕಾರ ವೀರಾಪುರ, ಸುರೇಶ ಖಾನಾಪುರ, ಸಿದ್ಧಾರ್ಥ ಮಲ್ಲಮ್ಮನರ, ರಮೇಶ ಕೊದಡ್ಡಿ, ಸಿದ್ದು ಗುತ್ತಲ,ಮಂಜುನಾಥ ಬಾಲಪ್ಪನವರ, ವಿನೋದ ನವಲಗುಂದ, ಅನೀಲ ಗೋನಾಳ,ಶಿವರಾಜ ಮಾದರ,ಉಮೇಶ್ ಮಾದರ, ವಿಜಯ ಹರಜನ, ಮೈಲಾರಪ್ಪ ಹಂಚಿನಮನಿ,ಅಕ್ಷಯ ಅಮರಾಪುರ
ಮುಂತಾದವರಿದ್ದರು.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!