ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಪ್ರೇಮ ವೈಪಲ್ಯವಾದ ಕಾರಣ ಯುವನೋರ್ವ ಮರಕ್ಕೆ ನೇಣಿಗೆ ಶರಣಾದ ಘಟನೆ ಸೋಮವಾರ ನಡೆದಿದೆ.
ನೂಲ್ವಿ ಗ್ರಾಮದ ನಿವಾಸಿ ಕೊಟ್ರೇಶ್ ಮಠಪತಿ (20) ಮೃತ ಯುವಕನಾಗಿದ್ದು ಓರ್ವ ಯುವತಿಯನ್ನು ಪ್ರೀತಿ ಮಾಡುತಿದ್ದು ಈತನ ಪ್ರೀತಿಯನ್ನು ಯುವತಿ ನಿರಾಕರಣೆ ಮಾಡಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ಪ್ರಕಾರ ತಿಳಿದು ಬಂದಿದೆ.
ತಂದೆ ತಾಯಿ ಜೊತೆಗೆ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತಿದ್ದ ಯುವಕನ ಆತ್ಮಹತ್ಯೆಯಿಂದ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.
