ಹುಬ್ಬಳ್ಳಿ; ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಸಹೋದರರಿಗೆ ಗೆಳೆಯ ಚಾಕು ಇರಿದ ಘಟನೆ ಬುಲ್ಡೋಜರ್ ನಗರದಲ್ಲಿ ನಡೆದಿದೆ.
ಕಸಬಾಪೇಟೆಯ ಸಾದಿಕ್ ಬೆಟಗೇರಿ ಚಾಕು ಇರಿದಿದ್ದು ಗಾಯಗೊಂಡವರು ಬುಲ್ಡೋಜರ್ ನಗರದ ಮಹ್ಮದ್ ಮಕಾಂದಾರ, ಮುನಾವರ ಮಕಾಂದಾರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಹೋದರರ ಬಳಿ ಇದ್ದ ಬೈಕ್ ಓಡಿಸಲು ಸಾದಿಕ್ ಬೆಟಗೇರಿ ಕೇಳಿದ್ದಾನೆ ಬೈಕ್ ಸಹೋದರರು ಕೊಡುವುದಿಲ್ಲ ಎಂದು ಹೇಳಿದಾಗ ಜಗಳಕ್ಕೆ ನಿಂತಿದ್ದು ನಂತರ ಮಹ್ಮದ್ ತೊಡೆಗೆ ಹಾಗೂ ಮುನಾವರ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
