Breaking News

ದಿ.ಜಯಲಲಿತಾರ 11,344 ಸೀರೆ ಮತ್ತು ಚಪ್ಪಲಿ ಹರಾಜಿಗೆ ಸುಪ್ರೀಂಕೋರ್ಟ್ ಗೆ ಮನವಿ

Spread the love

ಬೆಂಗಳೂರು: ಕಳೆದ 26 ವರ್ಷದಿಂದ ಬೆಂಗಳೂರಿನ ಖಜಾನೆಯಲ್ಲಿ ಬಿದ್ದಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ 11,344 ಸೀರೆಗಳು, 750 ಜತೆ ಚಪ್ಪಲಿ, 250 ಶಾಲುಗಳು ಸುದ್ದಿ ಕೇಂದ್ರಕ್ಕೆ ಬಂದಿವೆ. ಕರ್ನಾಟಕದ ಖಜಾನೆಯಲ್ಲಿ ಕೊಳೆಯುತ್ತಿರುವ ಜಯಲಲಿತಾ ಸೀರೆಗಳು, ಚಪ್ಪಲಿಗಳನ್ನು ಸಾರ್ವಜನಿಕ ಹರಾಜು ಹಾಕುವಂತೆ ಕೋರಿ ಬೆಂಗಳೂರಿನ ವಕೀಲ ಟಿ. ನರಸಿಂಹಮೂರ್ತಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ಅನ್ಯಾಯವಾಗಿ ಕೊಳೆಯುತ್ತಿರುವ ದಿ. ಜಯಲಲಿತಾ ಸೀರೆ ಮತ್ತು ಚಪ್ಪಲಿಗಳನ್ನು ಹರಾಜು ಹಾಕುವಂತೆ ಕೋರಿ ರಾಜ್ಯ ಮುಖ್ಯ ನ್ಯಾಯಮೂರ್ತಿಗಳಿಗೂ ಪತ್ರ ಬರೆದು ಕೋರಿದ್ದಾರೆ.
ದಿವಂಗತ ಕುಮಾರಿ ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಆದರೆ, ಜಯಲಲಿತಾ 2016 ರಲ್ಲಿಯೇ ನಿಧನರಾಗಿದ್ದಾರೆ. ಜಯಲಲಿತಾ ಅವರಿಗೆ ಸಂಬಂಧಿಸಿದ ಅಕ್ರಮ ಆಸ್ತಿಯನ್ನು ಸಿಬಿಐ ಅಧಿಕಾರಿಗಳು ಜಪ್ತಿ ಮಾಡಿದ್ದ ಚಿನ್ನ, ಬೆಳ್ಳಿ ಬಟ್ಟೆ ಚಪ್ಪಲಿ ಎಲ್ಲವೂ ಕರ್ನಾಟಕದ ವಿಧಾನಸೌಧ ಬಳಿ ಇರುವ ಖಜಾನೆಯಲ್ಲಿವೆ. ಜಯಲಲಿತಾ ಬಳಿ ವಶಪಡಿಸಿಕೊಂಡ ಸೀರೆಗಳನ್ನು ಒಂದು ದಿನಕ್ಕೆ ಒಂದು ಉಟ್ಟುಕೊಂಡರೂ ಸುಮಾರು 38 ವರ್ಷ ಆಗುತ್ತಿತ್ತು. ದಿನಕ್ಕೊಂದು ಚಪ್ಪಲಿ ಧರಿಸಿದರೆ ಒಂದು ಸುತ್ತು ಮುಗಿಯಲು ಎರಡು ವರ್ಷ ಕಾಯಬೇಕಿತ್ತು. ಸೀರೆಗಳ ಹಾಗೂ ಚಪ್ಪಲಿಗಳ ಪ್ರೇಮಿಯಾಗಿದ್ದ ಜಯಲಲಿತಾ ಅವರ ಅಕ್ರಮ ಆಸ್ತಿ ಪತ್ತೆಯಾಗಿದ್ದ ವೇಳೆ ಅವರ ಸೀರೆ ಮತ್ತು ಚಪ್ಪಲಿಗಳೇ ದೊಡ್ಡ ಸುದ್ದಿಯಾಗಿತ್ತು.
ಜಯಲಲಿತಾ ಅವರಿಂದ ವಶಪಡಿಸಿಕೊಂಡಿರುವ ವಸ್ತುಗಳು ಇದೀಗ ಸರ್ಕಾರಕ್ಕೆ ಸೇರಿವೆ. ಜಯಲಲಿತಾ ಅವರಿಂದ ವಶಪಡಿಸಿಕೊಂಡಿರುವ 11,344 ಸೀರೆಗಳು, 750 ಚಪ್ಪಲಿ ಹಾಗೂ 250 ಶಾಲುಗಳು 26 ವರ್ಷದಿಂದ ಕೊಳೆಯುತ್ತಿವೆ. ಇವನ್ನು ಹೀಗೆ ಬಿಟ್ಟರೆ ನಿಷ್ಪ್ರಯೋಜಕವಾಗಲಿವೆ. ಜಯಲಲಿತಾ ಅವರ ಸೀರೆ, ಚಪ್ಪಲಿ ಹಾಗೂ ಶಾಲುಗಳನ್ನು ಸಾರ್ವಜನಿಕ ಹರಾಜು ಹಾಕಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲ ನರಸಿಂಹಮೂರ್ತಿ ಅವರು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.
ದಿವಂಗತ ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಸಿರುವುದು ಸಾಬೀತಾಗಿದೆ. ಹೀಗಾಗಿ ಜಯಲಲಿತಾ ಅವರ ಅಕ್ರಮ ಅಸ್ತಿ ಸರ್ಕಾರಕ್ಕೆ ಸೇರಿದ್ದು. ಅದು ರಾಷ್ಟ್ರೀಯ ಸಂಪತ್ತು. ಜಯಲಲಿತಾ ಅವರಿಂದ ವಶಪಡಿಸಿಕೊಂಡಿರುವ ಸೀರೆಗಳು, ಚಪ್ಪಲಿಗಳು, ಶಾಲುಗಳು ಈಗಾಗಲೇ 26 ವರ್ಷದಿಂದ ಖಜಾನೆಯಲ್ಲಿ ಕೊಳೆಯುತ್ತಿವೆ. ಹೀಗೇ ಬಿಟ್ಟರೆ ಅವರು ನಿಷ್ಪ್ರಯೋಜಕವಾಗುತ್ತವೆ. ಈಗಾಗಿ ಈ ವಸ್ತುಗಳನ್ನು ಹರಾಜು ಹಾಕುವುದರಿಂದ ಜಯಲಲಿತಾ ಅಭಿಮಾನಿಗಳು ಅವರ ಮೇಲಿನ ಅಭಿಮಾನದಿಂದ ಸೀರೆಗಳನ್ನು ಮಾರುಕಟ್ಟೆ ಬೆಲೆಗಿಂತಲೂ ಹತ್ತು ಪಟ್ಟು ಹೆಚ್ಚು ಕೊಟ್ಟು ಬೆಲೆ ಕೊಟ್ಟು ಖರೀದಿ ಮಾಡಲಿದೆ. ಜಯಲಲಿತಾ ಅವರ ನೆನಪಲ್ಲಿ ಅವನ್ನು ಸಂರಕ್ಷಣೆ ಮಾಡಲಿದ್ದಾರೆ. ಇದರಿಂದ ಸರ್ಕಾರಕ್ಕೆ ಆದಾಯ ಬರುವ ಜತೆಗೆ ಜಯಲಲಿತಾ ಅವರ ವಸ್ತುಗಳನ್ನು ಖರೀದಿ ಮಾಡಿದವರು ಅವರ ನೆನಪನ್ನು ಶಾಶ್ವತವಾಗಿ ಇಟ್ಟುಕೊಳ್ಳಲಿದ್ದಾರೆ. ಹೀಗಾಗಿ ಜಯಲಲಿತಾ ಅವರಿಂದ ವಶಪಡಿಸಿಕೊಂಡ ವಸ್ತುಗಳ ಪೈಕಿ ಕೇವಲ ಸೀರೆ, ಚಪ್ಪಲಿ ಮತ್ತು ಶಾಲುಗಳನ್ನು ಹರಾಜು ಹಾಕಲು ಸರ್ಕಾರಕ್ಕೆ ನಿರ್ದೇಶನ ಕೋರಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.
ಜಯಲಲಿತಾ ಅವರಿಂದ ವಶಪಡಿಸಿಕೊಂಡಿರುವ ವಸ್ತುಗಳು ಇದೀಗ ಸರ್ಕಾರಕ್ಕೆ ಸೇರಿವೆ. ಜಯಲಲಿತಾ ಅವರಿಂದ ವಶಪಡಿಸಿಕೊಂಡಿರುವ 11,344 ಸೀರೆಗಳು, 750 ಚಪ್ಪಲಿ ಹಾಗೂ 250 ಶಾಲುಗಳು 26 ವರ್ಷದಿಂದ ಕೊಳೆಯುತ್ತಿವೆ. ಇವನ್ನು ಹೀಗೆ ಬಿಟ್ಟರೆ ನಿಷ್ಪ್ರಯೋಜಕವಾಗಲಿವೆ. ಜಯಲಲಿತಾ ಅವರ ಸೀರೆ, ಚಪ್ಪಲಿ ಹಾಗೂ ಶಾಲುಗಳನ್ನು ಸಾರ್ವಜನಿಕ ಹರಾಜು ಹಾಕಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲ ನರಸಿಂಹಮೂರ್ತಿ ಅವರು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.


Spread the love

About Karnataka Junction

[ajax_load_more]

Check Also

ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ

Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …

Leave a Reply

error: Content is protected !!