ಹುಬ್ಬಳ್ಳಿ: ಅರವಿಂದ ಬೆಲ್ಲದ ಅವರು ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದಾರೆ. ಅಲ್ಲದೇ ಅವರ ಪತ್ನಿಯವರ ಸಂಬಂಧಿಕರು ಬಹಳಷ್ಟು ಜನರು ದೆಹಲಿಯಲ್ಲಿ ಇರುವುದರಿಂದ ಸ್ವಾಭಾವಿಕವಾಗಿ ದೆಹಲಿಗೆ ಹೋಗಿದ್ದಾರೆ. ಇದನ್ನೇ ಭಿನ್ನಮತ ಎಂದರೇ ಏನು ಹೇಳುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬೆಲ್ಲದ ಅವರು ನನಗೆ ವಾಟ್ಸಫ್ ಮೆಸೇಜ್ ಕಳಿಸಿದ್ದಾರೆ. ನನ್ನ ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆ ಎಂದಿದ್ದಾರೆ. ಸುಮಾರು ಜನರು ವೈಯಕ್ತಿಕ ಹಾಗೂ ಖಾಸಗಿ ಕಾರ್ಯಕ್ರಮಕ್ಕೆ ದೆಹಲಿ ಹೋಗುತ್ತಾರೆ ಅದನ್ನೇ ಭಿನ್ನಮತ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಬಿಜೆಪಿ ಪಕ್ಷದ ಸಚಿವರು ನಾವು ಕೂಡ ವಿರೋಧ ಪಕ್ಷದವರ ಹಾಗೆಯೇ ಕೆಲಸ ಮಾಡಬೇಕು ಎಂಬುವಂತ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಈಗ ಕೋವಿಡ್ ನಿರ್ವಹಣೆ ಬಗ್ಗೆ ಆದ್ಯತೆ ಕೊಡಬೇಕಿದೆ. ಯಾರು ಕೂಡ ಮಾಧ್ಯಮಕ್ಕೆ ಹೋಗಬೇಡಿ ಎಂದು ಹೇಳಿದ್ದೇವೆ. ಹಾಗೇ ಯಾರು ಮಾತನಾಡಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ. ಇಂತಹವುಗಳಿಗೆ ಎಲ್ಲರೂ ಫುಲ್ ಸ್ಟಾಫ್ ಇಟ್ಟು ಜನರ ಹಿತಾಸಕ್ತಿ ಕಾಪಾಡುವ ಮೂಲಕ ರಾಜಕಾರಣದ ಸಾರ್ಥಕತೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.