Breaking News

ಅನುಶರಣ ಆ್ಯಂಪಿಯರ್ ಷೋ ರೂಂ ಉದ್ಘಾಟನೆ

Spread the love

ಹುಬ್ಬಳ್ಳಿ: ‘ವಿದ್ಯುತ್ ಚಾಲಿತ ಸ್ಕೂಟರ್‌ಗಳ ಬಳಕೆಯಿಂದ ಹಣ ಉಳಿತಾಯವಾಗುವ ಜೊತೆಗೆ ಪರಿಸರ ಮಾಲಿನ್ಯವನ್ನೂ ತಡೆಗಟ್ಟಬಹುದು’ ಎಂದು ಪಾಲಿಕೆ ಭಾರತೀಯ ಜನತಾ ಪಕ್ಷದ ಸಭಾ ನಾಯಕ ತಿಪ್ಪಣ್ಣ ಮಜ್ಜಗಿ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯಲ್ಲಿ ಶನಿವಾರ ಆ್ಯಂಪಿಯರ್ ಗ್ರೀವ್ಸ್ ಕಂಪನಿಯ ವಿದ್ಯುತ್ ಚಾಲಿತ (ಇ.ವಿ) ಸ್ಕೂಟರ್ ಷೋ ರೂಂ ‘ಅನುಶರಣ ಆ್ಯಂಪಿಯರ್’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಂಪನಿಯ ಮಾರಾಟ (ದಕ್ಷಿಣ–ಉತ್ತರ) ವಿಭಾಗದ ಮುಖ್ಯಸ್ಥ ಎಸ್. ಪ್ರಾಣೇಶ್, ‘ಸಂಸ್ಥೆಯ ಸ್ಕೂಟರ್‌ಗಳು ಪರಿಸರ ಸ್ನೇಹಿ ಆಗಿದ್ದು, ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ’ ಎಂದರು.
ಷೋ ರೂಂ ವ್ಯವಸ್ಥಾಪಕ ನಿರ್ದೇಶಕ ಅರುಣ್ ಮಾತನಾಡಿ, ‘ಆ್ಯಂಪಿಯರ್ ಮ್ಯಾಗ್ನಸ್ ಸ್ಕೂಟರ್ ಬಳಸುವುದರಿಂದ ಪ್ರತಿ ಕಿ.ಮೀ. ಚಾಲನೆಗೆ ಕೇವಲ 15 ಪೈಸೆ ವೆಚ್ಚ ಉಂಟಾಗಲಿದೆ’ ಎಂದು ಮಾಹಿತಿ ನೀಡಿದರು.
ಆ್ಯಂಪಿಯರ್ ಸಂಸ್ಥೆಯು ಸದ್ಯ ಮ್ಯಾಗ್ನಸ್ ಮತ್ತು ರಿಯೊ ಸ್ಕೂಟರ್‌ಗಳನ್ನು ತಯಾರಿಸುತ್ತಿದೆ. ಮ್ಯಾಗ್ನಸ್ ಇಎಕ್ಸ್ ಸ್ಕೂಟರ್ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 120 ಕಿ.ಮೀ. ವರೆಗೆ ಚಲಿಸುತ್ತದೆ. ಒಂದು ಬಾರಿಯ ಸಂಪೂರ್ಣ ಚಾರ್ಜ್ ಆಗಲು 6–7 ಗಂಟೆ ಬೇಕಾಗುತ್ತದೆ. ಪ್ರತಿ ಗಂಟೆಗೆ 50–55 ಕಿ.ಮೀ. ವೇಗದಲ್ಲಿ ಚಲಾಯಿಸಬಹುದು. ಇದರ ಎಕ್ಸ್ ಷೋ ರೂಂ ಬೆಲೆ ₹75 ಸಾವಿರ ಇದೆ.
ರಿಯೊ ಪ್ಲಸ್ ಸ್ಕೂಟರ್ ಒಂದು ಸಂಪೂರ್ಣ ಚಾರ್ಜ್‌ನಲ್ಲಿ 60 ಕಿ.ಮೀ. ವರೆಗೆ ಸಾಗಬಲ್ಲದು ಮತ್ತು ಒಮ್ಮೆ ಪೂರ್ಣ ಚಾರ್ಜ್ ಆಗಲು 5–6 ಗಂಟೆ ತಗುಲುತ್ತದೆ. ಗಂಟೆಗೆ 25 ಕಿ.ಮೀ. ವೇಗದಲ್ಲಿ ಓಡುವ ಈ ಸ್ಕೂಟರ್‌ನ ಎಕ್ಸ್ ಷೋ ರೂಂ ಬೆಲೆ ₹62 ಸಾವಿರ ಇದೆ.
ಮಾರಾಟ ವಿಭಾಗದ ಮತ್ತೊಬ್ಬ ಮುಖ್ಯಸ್ಥ ಪ್ರೀತಂ ಕುಮಾರ್, ಷೋ ರೂಂ ಮಾಲಕಿ ಅನ್ನಪೂರ್ಣಮ್ಮ, ಪ್ರವೀಣ್ ಇದ್ದರು.


Spread the love

About Karnataka Junction

[ajax_load_more]

Check Also

ಯುವನಿಧಿ ನೋಂದಣಿ ಪ್ರಕ್ರಿಯೆಗೆ ಚಾಲನೆ*

Spread the loveಹುಬ್ಬಳ್ಳಿ : ತಾಲೂಕು ಆಡಳಿತ ಸೌಧದ ತಾಲೂಕು ಪಂಚಾಯತ ಸಭಾಂಗಣದಲ್ಲಿ 2024 ರ ಯುವನಿಧಿ ಯೋಜನೆಯ ನೋಂದಣಿ …

Leave a Reply

error: Content is protected !!