ಹುಬ್ಬಳ್ಳಿ: ‘ಅಪರಾಧ ಮತ್ತು ಪ್ರೇಮದ ಕಥಾ ಹಂದರವಿರುವ ವಿಂಡೋಸೀಟ್ ಚಲನಚಿತ್ರ ಜುಲೈ 1ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ’ ಎಂದು ಚಿತ್ರದ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಂಡೋಸೀಟ್ ಕನ್ನಡದ ಮಟ್ಟಿಗೆ ವಿಭಿನ್ನ ಮಾದರಿಯ ಸಿನಿಮಾ. ಚಿತ್ರ ನಿರ್ದೇಶನ ಮಾಡುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರೊಂದಿಗೆ ಚರ್ಚಿಸಿ, ಅಧ್ಯಯನ ಮಾಡಿ ಈ ಚಿತ್ರ ಮಾಡಿದ್ದೇನೆ. ಸಾಗರ, ಬೆಂಗಳೂರು ಹಾಗೂ ಹೈದರಾಬಾದ್ ಸೇರಿದಂತೆ ವಿವಿಧೆಡೆ ಶೂಟಿಂಗ್ ಮಾಡಲಾಗಿದೆ. ಚಿತ್ರದಲ್ಲಿ ಐದು ಹಾಡುಗಳಿವೆ’ ಎಂದರು.
‘ನಾಯಕಿಯರಾಗಿ ಅಮೃತ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಚಿತ್ರದಲ್ಲಿ ನಟಿಸಿದ್ದಾರೆ. ಮುಖ್ಯ ಪಾತ್ರಗಳಾಗಿ ರವಿಶಂಕರ್, ಮಧುಸೂದನ್ ರಾವ್, ಲೇಖಾ ನಾಯ್ಡು, ಕಾಮಿಡಿ ಕಿಲಾಡಿ ಸೂರಜ್ ಅಭಿನಯಿಸಿದ್ದಾರೆ. ಚಿತ್ರವನ್ನು ಮಂಜುನಾಥಗೌಡ ನಿರ್ಮಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಘ್ನೇಶ್ ರಾಜ್ ಛಾಯಾಗ್ರಹಣ, ಯೋಗರಾಜ್ ಭಟ್ ಹಾಗೂ ಕವಿರಾಜ್ ಗೀತ ರಚನೆ ಚಿತ್ರಕ್ಕಿದೆ’ ಎಂದು ಹೇಳಿದರು.
ನಾಯಕ ನಟ ನಿರೂಪ್ ಭಂಡಾರಿ, ನಟಿ ಅಮೃತ ಅಯ್ಯಂಗಾರ್ ಇದ್ದರು.
Check Also
ಮಹದಾಯಿಗಾಗಿ ಚಿತ್ರರಂಗ ಒಕ್ಕಟ್ಟಾಗಿ ಹೋರಾಟ ಮಾಡುತ್ತದೆ- ನಟ ಶಿವರಾಜ್ ಕುಮಾರ್
Spread the loveಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಗೆ …