Breaking News

ವಿಶೇಷಚೇತನರು ಅಂಗವಿಕಲತೆ ಬಗ್ಗೆ ಕುಂದದೆ ಸಾಧನೆ ಮಾಡಿ- ಕೀರ್ತಿ ತಂಬದ

Spread the love

ಹುಬ್ಬಳ್ಳಿ: ವಿಶೇಷಚೇತನರು ಅಂಗವಿಕಲತೆ ಬಗ್ಗೆ ಕುಂದದೆ ಜೀವನದಲ್ಲಿ ಮುಂದೆ ಬರಬೇಕು ಎಂದು ನಗರದ ಮಹಿಳಾ ವಿದ್ಯಾಪೀಠ ಮಹಾವಿದ್ಯಾಲಯದ ಉಪಾಧ್ಯಕ್ಷೆ ಕೀರ್ತಿ ತಂಬದ ಹೇಳಿದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯು ವಿದ್ಯಾಪೀಠದಲ್ಲಿ ಅಂಗವಿಕಲರಿಗಾಗಿ ಗುರುವಾರ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ಸಮರ್ಥನಂ ಸಂಸ್ಥೆ ಸಮಾಜಮುಖಿ ಕೆಲಸ ಮಾಡುತ್ತಿದೆ. ಉದ್ಯೋಗ ಮೇಳದ ಮೂಲಕ ಅಂಗವಿಕಲರಿಗೆ ಉತ್ತಮ ವೇದಿಕೆ ಕಲ್ಪಿಸಿದೆ. ಸಂಸ್ಥೆಯ ಕಾರ್ಯಕ್ಕೆ ಮಹಿಳಾ ವಿದ್ಯಾಪೀಠದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಸಂಸ್ಥೆಯ ಟ್ರಸ್ಟಿ ವೈ.ಬಿ. ಉದಯಕುಮಾರ ಮಾತನಾಡಿ, ಅಂಗವಿಕಲರು ಉದ್ಯೋಗ ಮಾಡಿ ಸರ್ಕಾರಕ್ಕೆ ತೆರಿಗೆ ಕಟ್ಟುವ ಮಟ್ಟಕ್ಕೆ ಬೆಳೆಯಬೇಕು. ಆ ಉದ್ದೇಶದಿಂದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳು ಸಂಸ್ಥೆಯನ್ನು ಸಂಪರ್ಕಿಸಿದರೆ, ನೆರವು ನೀಡಲಾಗುವುದು ಎಂದು ಹೇಳಿದರು.
ವಕೀಲ ಸುರೇಶ ಕುಲಕರ್ಣಿ ಮಾತನಾಡಿ, ಅಂಗವಿಕಲರು ಎದೆಗುಂದಬಾರದು. ಉದ್ಯೋಗ ಸಿಕ್ಕರೆ ಉತ್ತಮವಾಗಿ ಕೆಲಸ ಮಾಡಿ ಬದುಕು ರೂಪಿಸಿಕೊಳ್ಳಬೇಕು ಎಂದರು.
ಮೇಳದಲ್ಲಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಎಲ್‌ಐಸಿ, ಫ್ಲಿಪ್‌ಕಾರ್ಟ್‌, ಮಾರಿಟ್ಯೂಡ್‌, ವಿನ್‌ಲೈನ್‌ ಸೇರಿದಂತೆ 22 ಕಂಪನಿಗಳು ಭಾಗವಹಿಸಿದ್ದವು. 466 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. ಅದರಲ್ಲಿ 187 ಜನರನ್ನು ಉದ್ಯೋಗಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಕೃಷ್ಣ ಲಮಾಣಿ ತಿಳಿಸಿದರು.
ವಿದ್ಯಾಪೀಠದ ಜಂಟಿ ಕಾರ್ಯದರ್ಶಿ ಜ್ಯೋತಿ, ಪ್ರಾಚಾರ್ಯ ಡಾ. ರವಿರಾಜ ನಾಗಾರಾಳ ಹಾಗೂ ನಾಗರಾಜ ಇದ್ದರು.


Spread the love

About Karnataka Junction

[ajax_load_more]

Check Also

ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ

Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …

Leave a Reply

error: Content is protected !!