https://youtu.be/L9yHJgojuuE
ಹುಬ್ಬಳ್ಳಿ; ನಗರದ ಬಂಕಾಪುರ ಚೌಕ್ ಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಶಾಸಕ ಅಬ್ಬಯ್ಯಾ ಪ್ರಸಾದ್ ಆಲಿಸಿದರು.
ಮುಂಗಾರು ಬಿತ್ತನೆ ಆರಂಭವಾದ ಹಿನ್ನೆಲೆಯಲ್ಲಿ ಬೀಜ, ಗೊಬ್ಬರ ಸಮರ್ಪಕ ವಿತರಣೆ ಹಾಗೂ ಕ್ಷೇತ್ರದ ರೈತರ ಸಮಸ್ಯೆ ಹಾಗೂ ಇನ್ನಿತರೆ ಬೇಡಿಕೆ, ಕುಂದುಕೊರತೆ ಆಲಿಸಲು ಸದಸ್ಯರೊಂದಿಗೆ ಚರ್ಚಿಸಲಾಯಿತು.
ನಕಲಿ ಬೀಜಗಳ ಹಾವಳಿ ತಡೆ ಹಾಗೂ ಡಿ.ಎ.ಪಿ. ಗೊಬ್ಬರ ಸಮರ್ಪಕ ವಿತರಣೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಇತ್ತೀಚಿಗೆ ಧಾರವಾಡದಲ್ಲಿ ನಡೆದ ಕೃಷಿ ಸಚಿವರೊಂದಿಗಿನ ಸಭೆಯಲ್ಲಿ ಚರ್ಚಿಸಿದ್ದು, ಇದೀಗ ಆ ಎಲ್ಲ ಸಮಸ್ಯೆಗಳು ನಿವಾರಣೆಯಾಗಿವೆ. ಇನ್ನಿತರೆ ಸಮಸ್ಯೆಗಳಿದ್ದರೆ ಅಧಿಕಾರಿಗಳ ಜೊತೆ ಚರ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು.
ಅಲ್ಲದೇ, ಕೆಲ ರೈತರಿಗೆ ಹೆಚ್ಚುವರಿ ಬೀಜ ಹಾಗೂ ಗೊಬ್ಬರದ ಅವಶ್ಯಕತೆಯಿದ್ದು, ಅದನ್ನು ಸಂಬಂಧಿಸಿದ ಕೃಷಿ ಅಧಿಕಾರಿಗಳ ಜೊತೆ ಚರ್ಚಿಸಿ ಹೆಚ್ಚುವರಿ ಬೀಜ, ಗೊಬ್ಬರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಲಾಯಿತು. ಈ ಸಂದರ್ಭದಲ್ಲಿ ರೈತ ಮುಖಂಡರು ಹಾಗೂ ಮುಂತಾದವರಿದ್ದರು.
![](https://karnatakajunction.com/wp-content/uploads/2022/09/WhatsApp-Image-2021-06-12-at-03.09.09-660x330.jpeg)