Breaking News

ಪಾಲಿಕೆಯ ಸ್ವಚ್ಛತಾ ರಾಯಭಾರಿಗಳಾದ ಅನಿರುದ್ಧ ಜತ್ಕರ್ ಜನರಿಗೆ ಸ್ವಚ್ಚತೆ ಕುರಿತು ಜಾಗೃತಿ

Spread the love

ಹುಬ್ಬಳ್ಳಿ;
ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ವತಿಯಿಂದ ಆಯೋಜಿಸಲಾಗಿರುವ “ನಮ್ಮ ನಗರ ಸ್ವಚ್ಛ ನಗರ” ಅಭಿಯಾನದ ಪೂರ್ವಕವಾಗಿ ದಿನಾಂಕ 23 ಜೂನ್ 2022 ರಂದು ಪಾಲಿಕೆಯ ಸ್ವಚ್ಛತಾ ರಾಯಭಾರಿಗಳಾದ ಅನಿರುದ್ಧ ಜತ್ಕರ್, ನಾಯಕನಟರು ಗಾಯಕರು ಹಾಗೂ ನಿರ್ದೇಶಕರು, ರವರು ಹುಬ್ಬಳ್ಳಿ-ಧಾರವಾಡದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ನಗರ ಸ್ವಚ್ಛತೆಯ ಕಾರ್ಯವಿಧಾನ, ನಗರ ಸ್ವಚ್ಛತೆ ಕುರಿತಾಗಿ ನಾಗರಿಕರ ಅವಶ್ಯಕತೆ ಹಾಗೂ ಅವರ ಸಹಭಾಗಿತ್ವ, ಹಾಗೂ ಪ್ರಮುಖವಾಗಿ ಪೌರಕಾರ್ಮಿಕರ ಸುರಕ್ಷಾ ವಿಷಯವಾಗಿ ನಗರ ವೀಕ್ಷಣೆಯನ್ನು ಮಾಡಿದರು.
ಮೊಟ್ಟಮೊದಲಾಗಿ, ಹುಬ್ಬಳ್ಳಿಯ ಡಾಲರ್ಸ್ ಕಾಲೋನಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರ ಹಣೆ ವೀಕ್ಷಿಸಿ, ಸಾರ್ವಜನಿಕರಿಗೆ ಮೂಲದಲ್ಲಿ ಕಸ ವಿಂಗಡಣೆ ಹಾಗೂ ಮನೆ ಅವರಣದಲ್ಲಿ ಗೊಬ್ಬರ ತಯಾರಿಸುವ ವಿಧಾನಗಳ ಕುರಿತು ಸಹಾಯಕ ಆಯುಕ್ತರು,. ವಲಯ ಕಚೇರಿ 7ರ ಸಹಾಯಕ ಆಯುಕ್ತರಾದ ಗಿರೀಶ್ ತಳವಾರ್, ಪರಿಸರ ಅಭಿಯಂತರರಾದ ಕುಮಾರಿ ಜ್ಯೋತಿ ಬಿ.ಹೆಚ್ ಪ್ರದರ್ಶನ ನೀಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪಾಲಿಕೆಯ ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಆರೋಗ್ಯದ ಹಿತದೃಷ್ಟಿಯಿಂದ ಸುರಕ್ಷಾ ದಿರಿಸುಗಳ ಪ್ರಾಮುಖ್ಯತೆಯನ್ನು ಅವರಿಗೆ ತಿಳಿಸಿಕೊಟ್ಟರು.
ತದನಂತರ, ಬೆಂಗೇರಿಯಲ್ಲಿನ ಕಂಪಾಕ್ಟ ಸ್ಟೇಷನ್ನಲ್ಲಿ ದ್ವಿತೀಯ ಹಂತದ ಸಂಗ್ರಹಣೆ ಹಾಗೂ ಸಾಗಾಣಿಕೆಗೆ ಸ್ಥಾಪಿಸಿರುವ ಯಂತ್ರೋಪಕರಣಗಳ ಕಾರ್ಯ ವೀಕ್ಷಿಸಿದರು. ಹಾಗೂ ಸದರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದರು.
ಅಲ್ಲಿಂದ ಧಾರವಾಡದ ಹೊಸ ಯಲ್ಲಾಪುರದಲ್ಲಿ ಸ್ಥಾಪಿಸಲಾಗಿರುವ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಶ್ರೀ ಅನಿರುದ್ಧ ಜತ್ಕರ್ ರವರು ಸದರ ಯೋಜನೆಯ ನ್ನು ಶ್ಲಾಘಿಸಿದರು. ಸದರ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಕುರಿತು ಘನತ್ಯಾಜ್ಯ ವಸ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ಸಂತೋಷ್ ಯರಂಗಳಿ ರವರು ಸವಿಸ್ತಾರವಾಗಿ ವಿವರಿಸಿದರು. ಅದೇ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಾಲಿಕೆಯ ಪೌರಕಾರ್ಮಿಕರು ಹಾಗೂ ಇತರೆ ಸಿಬ್ಬಂದಿಗಳನ್ನು ಮಾತನಾಡಿಸಿದರು.
ಒಣತ್ಯಾಜ್ಯ ನಿರ್ವಹಣೆಗೆಂದು ಮೆ||ಹಸಿರು ದಳ, ಸರ್ಕಾರೇತರ ಸಂಸ್ಥೆ ಮೂಲಕ ನಿಯೋಜಿಸಲ್ಪಟ್ಟ ಚಿಂದೀ ಆಯುವವರ ಜೊತೆಗೆ ಮಾತನಾಡುತ್ತಾ, ಸರ್ಕಾರೇತರ ಸಂಸ್ಥೆ ರವರ ಮೂಲಕ ಅವರಿಗೆ ID ಕಾರ್ಡ್ ನೀಡಿ, ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನೊಂದಾಯಿಸಿ, ಅವರ ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ನೆರವು ಪಡೆಯಲು ಅನುವಾಗುವಂತೆ ಪಾಲಿಕೆ ಕೈಗೊಂಡ ಕ್ರಮಗಳಿಗೆ ಅನಿರುದ್ಧ ಜತ್ಕರ್ ಅವರು ತಮ್ಮ ಅಭಿನಂದನೆಯನ್ನು ಸೂಚಿಸಿದರು.
ಕೊನೆಯದಾಗಿ ಧಾರವಾಡ ಕಡಪ ಮೈದಾನದ ಕಲಾಭವನದಲ್ಲಿ ಅನಿರುದ್ಧ ಜತ್ಕರ್ ರವರೊಂದಿಗೆ, ಮತ್ತೋರ್ವ ಸ್ವಚ್ಛತಾ ರಾಯಭಾರಿಗಳಾದ ಪದ್ಮಶ್ರೀ ಪುರಸ್ಕೃತ ಪಂಡಿತ್ ಎಂ ವೆಂಕಟೇಶ್ ಕುಮಾರ್, ಶಾಸ್ತ್ರೀಯ ಸಂಗೀತಗಾರರು, ಪಾಲಿಕೆಯ ಪೌರ ಕಾರ್ಮಿಕರೊಂದಿಗೆ ವಿಶೇಷ ಸಂವಾದ ನಡೆಸಿ ತಮ್ಮ ಅಭಿನಂದನೆಗಳನ್ನು ಸೂಚಿಸಿದರು.
ಪಾಲಿಕೆಯ ಇಬ್ಬರು ಸ್ವಚ್ಛತಾ ರಾಯಭಾರಿಗಳು , ದಿನಾಂಕ 24 ಹಾಗೂ 25 ಜೂನ್ 2022 ರಂದು ಆಯೋಜಿಸಲಾಗಿರುವ ವಿವಿಧ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಭಾಗವಹಿಸಲು ಮನವಿ ಮಾಡುತ್ತಾ ತಮ್ಮ ದಿನದ ನಗರ ಸ್ವಚ್ಛತೆಯ ವೀಕ್ಷಣೆಯನ್ನು ಮುಕ್ತಾಯಗೊಳಿಸಿದರು.
ಆರ್ ಎಮ್ ಕುಲ್ಕರ್ಣಿ ಹಾಗೂ ಮನೋಜ್ ಗಿರೀಶ್ ಸಹಾಯಕ ಆಯುಕ್ತರು ರವರು ತಮ್ಮ ಮೇಲುಸ್ತುವಾರಿಯಲ್ಲಿ ಧಾರವಾಡದ ವೀಕ್ಷಣೆ ಹಾಗೂ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ.


Spread the love

About gcsteam

    Check Also

    ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರಿಂದ ನಾಳೆ ಐಐಟಿಯಲ್ಲಿನ ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ ಉದ್ಘಾಟನೆ

    Spread the loveಧಾರವಾಡ ಫೆ.29: ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನ್‌ಕರ್ ಅವರು ನಾಳೆ ಮಾರ್ಚ್ 1, …

    Leave a Reply