Breaking News

ಸಚಿವ ಖುಭಾಗೆ ಮೊಬೈಲ್ ಕರೆ ರೈತರಿಗೆ ಗೊಬ್ಬರ ಕೇಳಿದ ಸರ್ಕಾರಿ ಶಾಲಾ ಶಿಕ್ಷಕ ಅಮಾನತ್

Spread the love

ಬೀದರ್; ಕೇಂದ್ರ ಸಚಿವ ಭಗವಂತ ಖುಭಾ ಅವರಿಗೆ ಮೊಬೈಲ್ ಕರೆ ಮಾಡಿ ರೈತರಿಗೆ ಗೊಬ್ಬರ ಕೊರತೆಯಿಂದ ತೊಂದರೆ ಆಗಿದ್ದು ಅಗತ್ಯ ಗೊಬ್ಬರ ಪೂರೈಕೆ ಮಾಡಿ
ಊರಿನಲ್ಲಿ ಗೊಬ್ಬರ ಸಿಗುತ್ತಿಲ್ಲ. ರೈತರು ತೊಂದರೆಯಲ್ಲಿದ್ದಾರೆ. ಇದರಿಂದ ನಿಮ್ಮ ಹೆಸರು ಕೆಡುತ್ತಿದೆ. ಹೀಗಾದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ಸಮಸ್ಯೆಯಾಗಲಿದೆ’ ಎಂದು
ರಿಕಾರ್ಡಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬರಿ ಬಿಟ್ಟ ಸರ್ಕಾರಿ ಶಾಲಾ ಶಿಕ್ಷಕ ಅಮಾನತ್ತು ಮಾಡಲಾಗಿದೆ.
ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ದೂರವಾಣಿ ಕರೆ ಮಾಡಿ ವಾಗ್ವಾದ ನಡೆಸಿದ ಆರೋಪದ ಮೇಲೆ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಜೀರ್ಗಾ (ಕೆ) ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಕುಶಾಲ ಪಾಟೀಲ ಅವರನ್ನು ಸೇವೆಯಿಂದ ಅಮಾನತು ಆದ ಶಿಕ್ಷಕರು ಆಗಿದ್ದಾರೆ.
ಡಿಡಿಪಿಐ ಗಣಪತಿಯವರ ಆದೇಶದ ಮೇರೆಗೆ ಕ್ಷೇತ್ರ ಶಿಕ್ಷಣಾಧಿ ಕಾರಿ ಎಚ್.ಎಸ್.ನಗನೂರ ಅವರಿಂದ ಅಮನತ್ತು.
‘ಸಚಿವರ ಜೊತೆಗೆ ಅನುಚಿತವಾಗಿ ವರ್ತಿಸಿದ್ದು ಅಲ್ಲದೇ, ಅವರೊಂದಿಗಿನ ಸಂಭಾಷಣೆಯನ್ನು ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಶಿಕ್ಷಕರು.
ಹೆಡಗಾಪುರ ಗ್ರಾಮದ ಕುಶಾಲ ಪಾಟೀಲ, ಭಗವಂತ ಖೂಬಾ ಅವರಿಗೆ ಕರೆ ಮಾಡಿ, ‘ಊರಿನಲ್ಲಿ ಗೊಬ್ಬರ ಸಿಗುತ್ತಿಲ್ಲ. ರೈತರು ತೊಂದರೆಯಲ್ಲಿದ್ದಾರೆ. ಇದರಿಂದ ನಿಮ್ಮ ಹೆಸರು ಕೆಡುತ್ತಿದೆ. ಹೀಗಾದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ಸಮಸ್ಯೆಯಾಗಲಿದೆ’ ಎಂದಿದ್ದಾರೆ ಶಿಕ್ಷಕನಿಗೆ ಸಚಿವರು ಖಾರವಾಗಿ ಪ್ರತಿಕ್ರಿಯಿಸಿ, ‘ನಾನು ಕೇಂದ್ರ ಸಚಿವ, ಮನೆ ಮನೆಗೆ ಗೊಬ್ಬರ ಪೂರೈಸಲು ಆಗುವುದೇ’ ಎಂದು ಪ್ರಶ್ನಿಸಿದ್ದರು.
ನಂತರ ರೈತ ಸಂಘಟನೆಗಳ ಪದಾಧಿಕಾರಿಗಳು ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಪ್ರತಿಭಟನೆ ನಡೆಸಿದ್ದನ್ನ ಇಲ್ಲಿ ಸ್ಮರಿಸಬಹುದು.


Spread the love

About Karnataka Junction

    Check Also

    ತಾವು ಬೇಸಿಗೆಯ ರಜೆಗಾಗಿ ವಿಶೇಷ ರೈಲುಗಳ ಸಂಚಾರ ಮಾಹಿತಿ ಇಲ್ಲಿದೆ

    Spread the loveಹುಬ್ಬಳ್ಳಿ: ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮುಜಾಫರ್ಪುರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಎರಡು ಹೆಚ್ಚುವರಿ …

    Leave a Reply

    error: Content is protected !!