.ಹುಬ್ಬಳ್ಳಿ: ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 72/73 ರ ನೇಕಾರ ನಗರದ ಬೆಪಾರಿ ಪ್ಲಾಟ್ ಮತ್ತು ವಾಣಿ ಪ್ಲಾಟ್ ಗಳಲ್ಲಿನ ಜನತೆಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಛತೆ, ಮತ್ತು ಒಳಚರಂಡಿ ಒದಗಿದಲು ಆಗ್ರಹಿಸಿ ಆಮ್ಮ ಆದ್ಮಿ ಪಕ್ಷದ ವತಿಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಆಪ್ ಜಿಲ್ಲಾ ಅಧ್ಯಕ್ಷರಾದ ಅನಂತಕುಮಾರ ಬುಗಡಿ ಹಾಗೂ ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭಾ ಅಧ್ಯಕ್ಷರಾದ
ಮಲ್ಲಿಕಾರ್ಜುನಯ್ಯ ಹಿರೇಮಠ, ನೇತೃತ್ವದಲ್ಲಿ ಪಾಲಿಕೆಯ ಆಯುಕರನ್ನು ಭೇಟಿಯಾಗಿ ತಕ್ಷಣ ಸದರಿ ಅವ್ಯವಸ್ಥೆಯನ್ನು ಸರಿಪಡಿಸಲು ಅಗ್ರಹಿಸಲಾಯಿತು. ನಿಯೋಗದಲ್ಲಿ ಭಾಷಾ ಹುಸೇನ್ ತಲೆವಾಡ, ಮಲ್ಲಪ್ಪಾ ತಡಸದ, ರೇವಣಸಿದ್ದಪ್ಪ ಹುಬ್ಬಳ್ಳಿ, ಶಶಿಕುಮಾರ ಸುಳ್ಳದ, ಹಸನ್ ಇನಾಮದಾರ, ಕುಮಾರ ನೂಲ್ವಿ, ಶ್ರೀರಂಗ ಮುತಾಲಿಕ ದೇಸಾಯಿ, ಎ.ಬಿ. ಬಿರಾದಾರ. ಮುಂತಾದವರು ಇದ್ದರು.
