ಹುಬ್ಬಳ್ಳಿ ನ್ಯೂ ಕಾಟನ್ ಮಾರ್ಕೆಟ್ ನಲ್ಲಿ ಬೇಕಾಬಿಟ್ಟಿ ಬೃಹತ್ ಗಾತ್ರದ ಲಾರಿಗಳ ಸಂಚಾರದಿಂದ ಜೀವಕ್ಕೆ ಸಂಚಕಾರ
ರೋಸಿ ಹೋಗಿದ್ದಾರೆ.
ಈ ಪ್ರದೇಶದಲ್ಲಿ ಹಗಲು ರಾತ್ರಿ ಎನ್ನದೇ ಬೃಹತ್ ಪ್ರಮಾಣದ ಲಾರಿಗಳ ಸಂಚಾರದಿಂದ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಸಾಕಷ್ಟು ವ್ಯಾಪಾರ ವಹಿವಾಟು ಮಾಡಲಾಗುತ್ತದೆ. ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ಜನರು ಇಲ್ಲಿಗೆ ಬರುತ್ತಾರೆ. ಆದರೆ ಈ ಪ್ರದೇಶದಲ್ಲಿ ಅದರಲ್ಲೂ ಮಾನ್ಚಿ ಆಸ್ಪತ್ರೆಯಿಂದ ಹಿಡಿದು ಕಿಮ್ಸ್ ಆಸ್ಪತ್ರೆ ಹಿಂಭಾಗ ಸವಾಯಿ ಗಂಧರ್ವ ಹಾಲ್ ದಿಂದು ತಿರುಮಲ ಕಾಂಪ್ಲೆಕ್ಸ್ ವರಗೆ ಬೇಕಾಬಿಟ್ಟಿ ಲಾರಿಗಳು ಯಮಸ್ವರೂಪಿಯಾಗಿ ಸಂಚರಿಸುತ್ರಿವೆ. ಸಾಕಷ್ಟು ಇಲ್ಲಿ ಅಪಘಾತ ಹಾಗೂ ಅವಘಡಗಳು ನಡೆದಿವೆ. ಬ್ಯಾಂಕ್, ಆಸ್ಪತ್ರೆ, ವಾಣಿಜ್ಯ ವಹಿವಾಟು ಹೆಚ್ಚು ನಡೆಯುವ ಸ್ಥಳ ಇದಾಗಿರುವುದರಿಂದ ಜನರ ದಟ್ಟನೆ ಸಹಜವಾಗಿಯೇ ಇರುತ್ತದೆ. ಆದರೆ ಇಲ್ಲಿ ಸರಿಯಾದ ಪೊಲೀಸ್ ಸಿಬ್ಬಂದಿ ಸಹ ನೇಮಕ ಮಾಡಿಲ್ಲ.ಇನ್ನು ಇದೇ ಸ್ಥಳದಲ್ಲಿ ಉತ್ತರ ಸಂಚಾರಿ ಪೊಲೀಸ್ ಠಾಣೆ ಸಹ ಇರುವುದರಿಂದ ಜನರಲ್ಲಿ ಆಶ್ಚರ್ಯ ಸಹ ವಾಗಿದೆ. ಕೂಡಲೇ ಈ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಲು ಸಾಮಾಜಿಕ ಕಾರ್ಯಕರ್ತ ಮೋಹನ್ ಒತ್ತಾಯ ಮಾಡಿದ್ದಾರೆ.