ಹುಬ್ಬಳ್ಳಿ; ಇತ್ತೀಚಿಗೆ ಪ್ರವಾಹದಲ್ಲಿ ಸಿಲುಕಿದ ಅಮರಗೋಳದ ಅಡಿವೆಪ್ಪಗೌಡ ಪಾಟೀಲ ಸರ್ಕಾರಿ ಪ್ರೌಢಶಾಲೆ ಮಾಜಿ ಶಾಸಕ ಎನ್. ಎಚ್ . ಕೋನರಡ್ಡಿ ಹಾಗೂ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಈ ವೇಳೆ 150 ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ನೀರಿನಲ್ಲಿ ಸಿಲುಕಿ ಗಾಬರಿಗೊಂಡ ವಿದ್ಯಾರ್ಥಿಗಳಿಗೆ ಎನ್.ಎಚ್. ಕೋನರಡ್ಡಿ ಹಾಗೂ ಮುಖಂಡ
ವಿನೋದ ಅಸೂಟಿ ಧೈರ್ಯದಿಂದ ಅಭ್ಯಾಸ ಮಾಡುವಂತೆ ಧೈರ್ಯ ತುಂಬಿದರು.
ಈ ಸಮಸ್ಯೆಗೆ ಸ್ಥಳೀಯ ಸಚಿವರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಬೇಕೆಂದು ಉಭಯ ನಾಯಕರು ಅಗ್ರಹಿಸಿದರು.
ಈ ಪ್ರೌಢಶಾಲೆಗೆ ಕಟ್ಟಡ ನಿರ್ಮಿಸಲು ಅಂದು 1 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಒಳ್ಳೆಯ ಕಟ್ಟಡ ನಿರ್ಮಿಸಲು ಪ್ರಯತ್ನಿಸಿದ್ದೇನೆ ಎಂದು ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.
ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಜೀವನ ಪವಾರ, ಶಿವಾನಂದ ತಡಸಿ, ಮೋದಿನ ಶಿರೂರ್, ಮಾಂತೇಶ ಭೋವಿ, ಕಲ್ಲಪ್ಪ ಹುಬ್ಬಳ್ಳಿ, ಗ್ರಾಮಸ್ಥರು,ಶಿಕ್ಷಕರು ಮುದ್ದುಮಕ್ಕಳು ಉಪಸ್ಥಿತರಿದ್ದರು.
Check Also
ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ
Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …