Breaking News

ಐಇಎಂಎಸ್ ಉಚಿತ ನೇತ್ರ ತಪಾಸಣಾ ಶಿಬಿರದ ಉದ್ಘಾಟನೆ

Spread the love

ಹುಬ್ಬಳ್ಳಿ; ನಗರದ
ಐಇಎಂಎಸ್ ಬಿ ಸ್ಕೂಲ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಲಾಯಿತು .
ಈ ಕಾರ್ಯಕ್ರಮವನ್ನು ಜಯಪ್ರಿಯ ಕಣ್ಣಿನ ಆಸ್ಪತ್ರೆ, ಜಯಪ್ರಿಯ ಮೆಡಿಕಲ್ ಫೌಂಡೇಶನ್, ಇನ್ನರ್ ವೀಲ್ ಕ್ಲಬ್ ಹುಬ್ಬಳ್ಳಿ , ಕರ್ನಾಟಕ ಮೆಟೀರಿಯಲ್ ಟೆಸ್ಟಿಂಗ್ ಅಂಡ್ ರಿಸರ್ಚ್ ಸೆಂಟರ್, ಗ್ರೇಟರ್ ಹುಬ್ಬಳ್ಳಿ-ಧಾರವಾಡ ಇಂಡಸ್ಟ್ರಿಯಲ್ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೈಜನ್ ಎಜುಪ್ಲಸ್ ಸೊಸೈಟಿಯ ಕಾರ್ಯಾಧ್ಯಕ್ಷ ಖ್ಯಾತ ಲೆಕ್ಕಪರಿಶೋದಕರಾದ ಡಾ.ಎನ್.ಎ.ಚರಂತಿಮಠ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಮಾನವನ ದೇಹದಲ್ಲಿ ಕಣ್ಣುಗಳು ಅತ್ಯಮೂಲ್ಯವಾದವುಗಳು, ಅವುಗಳ ಸಹಾಯದಿಂದಲೇ ನಾವೆಲ್ಲ ಈ ಜಗತ್ತನ್ನು ನೋಡುವಂತಾಗಿದೆ, ಇಂದಿನ ಈ ಒತ್ತಡದ ಜೀವನದಲ್ಲಿ, ಎಲೆಕ್ಟ್ರ್ಟೋನಿಕ್ ಉಪಕರಣಗಳ ನಿರಂತರ ಬಳಕೆಯಿಂದ ಕಣ್ಣಿನ ಆರೋಗ್ಯ ಸಂರಕ್ಷಿಸಿಕೊಳ್ಳಬೇಕಾಗಿದೆ. ಇಂದು ಮೊಬೈಲ್, ಕಂಪ್ಯೂಟರ್ಗಳು ಜೀವನದ ಅವಿಭಾಜ್ಯ ಅಂಗಗಳಾಗಿವೆ , ಅವುಗಳ ನಿರಂತರ ಬಳಕೆಯಿಂದ , ಟೆಲಿವಿಷನ್ ವೀಕ್ಷಣೆಯಿಂದ ಕಣ್ಣಿನ ದೃಷ್ಟಿ ದೋಷಗಳು ಸಾಮಾನ್ಯವಾಗಿವೆ. ಕರೋನ ಮಹಾಮಾರಿಯಂತ ಪಿಡುಗಿನ ವೇಳೆಯಲ್ಲಿ ಜೀವನ ನಡೆಸುವುದೇ ದುರ್ಭರವಾಗಿತ್ತು. ಈ ಸಂದರ್ಭದಲ್ಲಿ ಈ ರೀತಿಯ ಉಚಿತ ನೇತ್ರ ತಪಾಸಣಾ ಶಿಬಿರಗಳು ಬಡವರ ಮತ್ತು ಅವಶ್ಯಕತೆ ಇರುವ ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ರೀತಿಯಾಗಿ ಹಲವು ಸಂಘ ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದು ನಾವೆಲ್ಲ ಸಮಾಜಕ್ಕೆ ತೀರಿಸುವ ಋಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇನ್ನೆರ್ ವೀಲ್ ಮಹಿಳಾ ಘಟಕದ ಅಧ್ಯಕ್ಷರಾದ ಪ್ರೇಮಲತಾ ಪಾಟೀಲ್ ಮಾತನಾಡಿ ಇನ್ನರ್ ವೀಲ್ ಸಂಸ್ಥೆ ಯಾವಾಗಲು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇತರ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಕಾರ್ಯಕ್ರಮಗಳನ್ನು ಸಂಯೋಜಿಸುತ್ತ ಬಂದಿದೆ ಎಂದು ತಿಳಿಸಿದರು.ಕಣ್ಣಿನ ಆರೈಕೆ ಮತ್ತು ಸಂರಕ್ಷಣೆ ಎಲ್ಲರಿಗು ಅಗತ್ಯವಾಗಿದೆ, ಈ ರೀತಿಯ ಶಿಬಿರಗಳು ಎಲ್ಲರನ್ನು ತಲಪುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ನಿರ್ದೇಶಕರಾದ ಡಾ. ವೀರಣ್ಣ ಡಿ ಕೆ ,ಜಯಪ್ರಿಯ ಕಣ್ಣಿನ ಆಸ್ಪತ್ರೆ ವೈದ್ಯರಾದ ಡಾ. ರಾಘವೇಂದ್ರ ,ರಿತೇಶ್, ಪ್ರಜ್ವಲ್,ಇನ್ನರ್ ವೀಲ್ ಕ್ಲಬ್ ನ ಕಾರ್ಯದರ್ಶಿ ಶ್ರೀಮತಿ. ದೀಪಾ ಪಿಂಪಲಿ , ಕರ್ನಾಟಕ ಮೆಟೀರಿಯಲ್ ಟೆಸ್ಟಿಂಗ್ ಅಂಡ್ ರಿಸರ್ಚ್ ಸೆಂಟರ್ ನ ಅಧ್ಯಕ್ಷರಾದ ಇಂಜಿನಿಯರ್ ಎಂ.ಕೆ.ಪಾಟೀಲ್ , ಗ್ರೇಟರ್ ಹುಬ್ಬಳ್ಳಿ-ಧಾರವಾಡ ಇಂಡಸ್ಟ್ರಿಯಲ್ ಅಸೋಸಿಯೇಷನ್ ಅಧ್ಯಕ್ಷರಾದ . ಆರ್ .ಜಿ .ಭಟ್ ಹಾಗೂ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷರಾದ ಲಿಂಗಣ್ಣ ಬಿರಾದಾರ್, ಮಲ್ಲೇಶ್ ಜಾಡರ್ ,ವಿಜಯ ಅಂಗಡಿಕಿ ,ನರೇಂದ್ರ ಕುಲಕರ್ಣಿ ,ರಾಜು ಹೊಸಮನಿ,ಶ್ರೀಕಾಂತ್ ಮಾಳಾಪುರ , ಕಾಲೇಜಿನ ಸಿಬ್ಬಂದಿವರ್ಗ , ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 100 ಜನರ ನೇತ್ರ ತಪಾಸಣೆ ಕೈಗೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಪ್ರೊ. ಭರತೇಶ್ , ಪ್ರೊ.ಪ್ರೀತಿ ಬೆಳಗಾಂಕರ್, ಪ್ರೊ. ವಿನಂತಿ ನಾಯ್ಕ್ , .ಶಿವಕುಮಾರ್ ಆಯೋಜಿಸಿದ್ದರು.


Spread the love

About Karnataka Junction

[ajax_load_more]

Check Also

ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ

Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …

Leave a Reply

error: Content is protected !!