Breaking News

ರಾಜಯೋಗಿನಿ ಬ್ರಹ್ಮಕುಮಾರಿ ಮಾತೇಶ್ವರಿ ಜಗದಂಬಾ ಸರಸ್ವತಿ ಅವರ 57ನೇ ಪುಣ್ಯಸ್ಮರಣೆ

Spread the love

ಹುಬ್ಬಳ್ಳಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಥಮ ಮುಖ್ಯ ಆಡಳಿತಾಧಿಕಾರಿಯಾಗಿದ್ದ ರಾಜಯೋಗಿನಿ ಬ್ರಹ್ಮಕುಮಾರಿ ಮಾತೇಶ್ವರಿ ಜಗದಂಬಾ ಸರಸ್ವತಿ ಅವರ 57ನೇ ಪುಣ್ಯಸ್ಮರಣೆ ಕಾರ್ಯಕ್ರಮವು, ನಗರದ ಭೈರಿದೇವರಕೊಪ್ಪದಲ್ಲಿರುವ ಭಗವದ್ಗೀತಾ ಜ್ಞಾನ ದಿವ್ಯ ಕಲಾಲೋಕ ಮ್ಯೂಸಿಯಂನಲ್ಲಿ ಭಾನುವಾರ ಜರುಗಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ, ಉಪ ಮೇಯರ್ ಉಮಾ ಮುಕುಂದ, ಪ್ರಜಾವಾಣಿ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥೆ ರಶ್ಮಿ ಎಸ್, ವಕೀಲೆ ಮೇಧಾ ಪವಾರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಮ್ಯಾನೇಜರ್ ದೇವಕ್ಕ ನಾಯ್ಕ, ಡಾ. ಉಷಾ ಬಿರಡಿ, ಆರ್.ಪಿ.ಎಫ್‌ ಇನ್‌ಸ್ಪೆಕ್ಟರ್ ನಮ್ರತಾ ಅಂಗಡಿ, ಭರತನಾಟ್ಯ ಕಲಾವಿದೆ ಡಾ. ಸಹನಾ ಭಟ್, ಮೈಸೂರಿನ ಅವಧೂತ ದತ್ತಪೀಠದ ಸುನೀತಾ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ಜ್ಞಾನಲೋಕದ ನಿರ್ದೇಶಕ ಡಾ. ಬಸವರಾಜ ರಾಜಋಷಿ ಹಾಗೂ ಸಂಚಾಲಕಿ ನಿರ್ಮಲಾ ಜಿ. ಇದ್ದರು.


Spread the love

About gcsteam

    Check Also

    ಜನವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆ

    Spread the loveಧಾರವಾಡ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಧಾರವಾಡ ಕಡಪಾ ಮೈದಾನದಿಂದ ಧಾರವಾಡ ಜಿಲ್ಲಾಧಿಕಾರಿ …

    Leave a Reply