ದೊಡ್ಡಬಳ್ಳಾಪುರ: ನಗರಕ್ಕೆ ಆಗಮಿಸಿದ್ದ ಶಾಸಕ, ಮಾಜಿ ಸಚಿವ ಜಮೀರ್ ಅಹಮದ್ಗೆ ಅಭಿಮಾನಿಯೊಬ್ಬ ಮುತ್ತು ಕೊಟ್ಟಿದ್ದಾನೆ. ಇದೇ ವೇಳೆ ಜಮೀರ್ ಜೊತೆ ಅಭಿಮಾನಿಗಳು ಸೆಲ್ಫಿ, ಫೋಟೊ ತೆಗೆದುಕೊಂಡರು.
ಲಾಕ್ಡೌನ್ ಸಮಯದಲ್ಲಿ ಬಡವರ ಹಸಿವು ನೀಗಿಸಲು ಶಾಸಕ ಟಿ. ವೆಂಕಟರಮಣಯ್ಯ ಅವರು ದೊಡ್ಡಬಳ್ಳಾಪುರದಲ್ಲಿ ಅನ್ನ ದಾಸೋಹ ನಡೆಸುತ್ತಿದ್ದಾರೆ. ಈ ಅನ್ನದಾಸೋಹ ವೀಕ್ಷಣೆಗೆ ಜಮೀರ್ ದೊಡ್ಡಬಳ್ಳಾಪುರಕ್ಕೆ ಆಗಮಿಸಿದ್ದರು. ಈ ವೇಳೆ ಕಾರೊಂದರ ಮೇಲೆ ತಮ್ಮ ಫೋಟೋ ಹಾಕಿಸಿರುವುದು ಅವರ ಕಣ್ಣಿಗೆ ಬಿದ್ದಿದೆ. ಈ ಬಗ್ಗೆ ತಮ್ಮ ಕಾರಿನಿಂದ ಕೆಳಗಿಳಿದು ಚಾಲಕನೊಂದಿಗೆ ಮಾತನಾಡುತ್ತಿದ್ದರು.ಶಾಸಕ ಜಮೀರ್ ಅಹಮದ್ಗೆ ಕಿಸ್ ಕೊಟ್ಟ ಅಭಿಮಾನಿ. ಈ ಸಂದರ್ಭದಲ್ಲಿ ಅನೇಕ ಅಭಿಮಾನಿಗಳು ಪೋಟೊ ತೆಗೆಸಿಕೊಂಡರು. ಆಗ ಅಲ್ಲೇ ಇದ್ದ ಅಭಿಮಾನಿಯೋರ್ವ ಫೋಟೊ ತೆಗೆಸಿಕೊಂಡ ಬಳಿಕ ಶಾಸಕರಿಗೆ ಕಿಸ್ ಕೊಟ್ಟಿದ್ದಾನೆ.
