Breaking News

ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ನಾಯಕ- ಪ್ರಲ್ಹಾದ್ ಜೋಶಿ

Spread the love

ಹುಬ್ಬಳ್ಳಿ; ದೇಶಗಳಲ್ಲಿ 2004 ರಿಂದ ದೇಶದಲ್ಲಿ ಭ್ರಷ್ಟಾಚಾರವನ್ನು ಅದರಲ್ಲೂ ರಾಜಕೀಯ ಭ್ರಷ್ಟಾಚಾರವನ್ನು ತೊಡದು ಹಾಕಿದ್ದು ಭಾರತೀಯ ಜನತಾ ಪಕ್ಷದ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಸಾಧನೆ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದ ಮೂರುಸಾವಿರ ಮಠದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಎಂಟು ವರ್ಷಗಳು ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ ವಿಕಾಸ ತೀರ್ಪು ಯಾತ್ರೆ ಅಂಗವಾಗಿ ಬೈಕ್ ನಡೆಸುವ ಮೂಲಕ ಬೈಕ್ ರಾಲಿಗೆ ಚಾಲನೆ ನೀಡಿ ಮಾತನಾಡಿದರು.
ದೇಶವನ್ನು ಸಾಕಷ್ಟು ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಸಾಧನೆ ಏನು ಅಂತಾ ಗೊತ್ತು ನಿಮಗೆ, ಅಖಿಲ್ ಭಾರತೀಯ ಕಾಂಗ್ರೆಸ್ ಸಮಿತಿ ಮುಖಂಡ ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ನಾಯಕ ಅವರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಲ್ಲ. ರಾಪಲ್ ಹಗರಣದಲ್ಲಿ ಏನೇನೂ ಮಾಡಲು ಹೋದರು ಆದರೆ ಏನು ಮಾಡಲು ಆಗಲಿಲ್ಲ. ಸ್ವತ ಸುಪ್ರೀಂ ಕೋರ್ಟ್ ಇದನ್ನು ಸಾರಾಸಗಟವಾಗಿ ತಳ್ಳಿ ಹಾಕಿ ರಾಪಲ್ ಹಗರಣದಲ್ಲಿ ಯಾವುದೇ ಹುರುಳಿಲ್ಲ ಅದು ಪಾರದರ್ಶಕವಾಗಿದೆ
ಎಂದು ಸ್ಪಷ್ಟವಾದ ಆದೇಶ ನೀಡಿತು. ಈ ಬಗ್ಗೆ ಯಾರೇ ಏನೇ ಆರೋಪ ಮಾಡಲಿ ಆ ಬಗ್ಗೆ ಹೆಚ್ಚು ಮಹತ್ವ ಕೊಡುವುದು ಬೇಡಾ. ರಾಪಲ್ ದಿಂದ ದೇಶದ ಏರ್ ಫೋರ್ಸ್ ಅತ್ಯಂತ ಬಲಾಡ್ಯವಾಗಿದೆ ಎಂದ ಪ್ರಲ್ಹಾದ್ ಜೋಶಿ ಅವರು ಕಳೆದ ಎಂಟು ವರ್ಷಗಳ ಹಿಂದೆ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಸಭಾ ನಾಯಕರಾಗಿ ಆಯ್ಕೆಯಾದರು. ‌ಅವರ ಆಯ್ಕೆ ವೇಳೆ ನಾವು ಇದ್ದವು. ಏಕೆಂದರೆ ನಾವು ಲೋಕಸಭಾ ಸದಸ್ಯರು ಅವರ ಆಯ್ಕೆ ಮಾಡಬೇಕಾಗಿದ್ದು ನಾವು ಸಹ. ಅಂದು ಮೊದಲ ಭಾಷ ಮಾಡಿದರು ಆವಾಗ ಹೇಳಿದರು ನಮ್ಮ ಸರ್ಕಾರ ಬಡವರು, ದೀನರು,ದಲಿತರು,‌ಯುವಕರು ಹಾಗೂ ಹಿಂದುಗಳ ವರ್ಗದವರ ಸಲುವಾಗಿ ಇದೆ. ಅವರ ಉದ್ಧಾರಕ್ಕಾಗಿ ನಾವು ಇರುತ್ತೇವೆ ಎಂದರು.ಗರೀಬ್ ಕಲ್ಯಾಣ ಯೋಜನೆಯಿಂದ ಹಿಡಿದು ಕೋವೀಡ್ ಲಸಿಕೆ ಹಾಕುವುದರ ಮೂಲಕ ಅತ್ಯಂತ ಪ್ರಮಾಣಿಕ ಹಾಗೂ ಸಮರ್ಥವಾಗಿ ಕೆಲಸ ಮಾಡಿದೆ ಎಂದರು.
ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತ ದೇಶವನ್ನು ವಿಶ್ವ ಗುರುವನ್ನಾಗಿಸುತ್ತ ಅಹರ್ನಿಶಿ ಕಾರ್ಯ ನಿರ್ವಹಿಸುತ್ತಿದ್ದು ಇವರ ಈ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಸಲುವಾಗಿವಿಕಾಸ ತೀರ್ಥ ಬೈಕ್‌ ರಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಮೆಣಸಿನಕಾಯಿ,
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ಮುಖಂಡರಾದ ಉಮೇಶ, ಘೋಡಕೆ,
ಮುಂತಾದವರಿದ್ದರು


Spread the love

About Karnataka Junction

    Check Also

    ಅಹಿಂದ ಮಾಡಿದಾಗ ಸಿದ್ಧರಾಮಯ್ಯಾ ಜೊತೆಗೆ ನಿಂತವನು ನಾನೋಬ್ಬನೇ- ಬೊಮ್ಮಾಯಿ

    Spread the loveಹುಬ್ಬಳ್ಳಿ:ಸಿದ್ದರಾಮಯ್ಯ ಅವರು ಅಹಿಂದ ಮಾಡಿದಾಗ ಅವರ ಜೊತೆಗೆ ಬಹಿರಂಗವಾಗಿ ಗಟ್ಟಿಯಾಗಿ ನಿಂತ ವೀರಶೈವ ಸಮುದಾಯದ ನಾಯಕ ನಾನೊಬ್ಬನೇ. …

    Leave a Reply

    error: Content is protected !!